* ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ತನಿಖೆ ಚುರುಕು ಮಾಡಿದ ಸಿಬಿಐ* 2019ರಲ್ಲಿ ನಡೆದ ಐಪಿಎಲ್‌ ವೇಳೆ ನಡೆದ ಬೆಟ್ಟಿಂಗ್ ಕುರಿತಂತೆ ತನಿಖೆ* ತನಿಖಾ ಅಧಿಕಾರಿಗಳ ಪ್ರಕಾರ 2013ರಿಂದಲೇ ಈ ಗುಂಪು ಬೆಟ್ಟಿಂಗ್‌ನಲ್ಲಿ ಸಕ್ರಿಯ

ಬೆಂಗಳೂರು(ಮೇ.16): ಐಪಿಎಲ್‌ನ ಕ್ರಿಕೆಟ್ ಬೆಟ್ಟಿಂಗ್ ಕುರಿತಂತೆ ಕೇಂದ್ರ ಗುಪ್ತಚರ ಇಲಾಖೆ ತನಿಖೆ ಆರಂಭಿಸಿದ್ದು, ಈ ಬೆಟ್ಟಿಂಗ್ ನೆಟ್‌ವರ್ಕ್‌ ರಾಜ್ಯದಿಂದ ನೆರೆಯ ಪಾಕಿಸ್ತಾನದ ವರೆಗೂ ಹಬ್ಬಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣದ ಕುರಿತಂತೆ ಸಿಬಿಐ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದು, ನಾಲ್ವರು ಆರೋಪಿತರ ಪೈಕಿ ಇಬ್ಬರು ಜೋಧಪುರ ಹಾಗೂ ಜೈಪುರ ಮೂಲದವರು ಎನ್ನಲಾಗಿದೆ.

2019ರಲ್ಲಿ ಡೆಲ್ಲಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಡೆದಿದೆ ಎಂದು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಸಿಬಿಐ ಮೂಲಗಳ ಪ್ರಕಾರ, ಡೆಲ್ಲಿಯ ದಿಲೀಪ್‌ ಕುಮಾರ್‌, ಹೈದರಾಬಾದ್‌ನ ಗುರ್ರಂ ವಾಸು ಹಾಗೂ ಗುರ್ರಂ ಸತೀಶ್‌ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಕೆಲ ಸರ್ಕಾರಿ ಅಧಿಕಾರಿಗಳೂ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಸಿಬಿಐಗೆ ಮಾಹಿತಿ ಸಿಕ್ಕಿದ್ದು, ಇದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಅವರು ಪಾಕಿಸ್ತಾನದ ಪಾಕ್‌ನ ವಖಾಸ್‌ ಮಲಿಕ್‌ ಎಂಬಾತನ ಜೊತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ. 

ಸಿಬಿಐ ಈಗಾಗಲೇ ಡೆಲ್ಲಿ, ಜೋಧ್‌ಪುರ, ಜೈಪುರ, ಹೈದರಾಬಾದ್‌ ಸೇರಿದಂತೆ ಕೆಲ ನಗರಗಳಲ್ಲಿ ಹುಡುಕಾಟ ನಡೆಸಿದ್ದು, ಇನ್ನೂ ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸುವ ಸಾಧ್ಯತೆ ಇದೆ. ತನಿಖಾ ಅಧಿಕಾರಿಗಳ ಪ್ರಕಾರ 2013ರಿಂದಲೇ ಈ ಗುಂಪು ಬೆಟ್ಟಿಂಗ್‌ನಲ್ಲಿ ಸಕ್ರಿಯವಾಗಿದ್ದು, ಬೆಟ್ಟಿಂಗ್‌ನಲ್ಲಿ ತೊಡಗಲು ಜನರಿಗೆ ಆಮಿಷವೊಡ್ಡುತ್ತಿತ್ತು ಎಂದು ತಿಳಿದುಬಂದಿದೆ. ನಕಲಿ ದಾಖಲೆಗಳನ್ನು ನೀಡಿ ಅವರು ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದು, ಅದರ ಮೂಲಕವೇ ಸುಮಾರು 10 ಕೋಟಿ ರು. ನಷ್ಟುವ್ಯವಹಾರ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Match Fixing ಶಂಕೆ: ಐಪಿಎಲ್‌ ಬೆಟ್ಟಿಂಗ್‌ಗೆ ಪಾಕ್‌ ನಂಟು..!

ಎಫ್‌ಐಆರ್‌ ಮೂಲಗಳ ಪ್ರಕಾರ, ಈ ಬೆಟ್ಟಿಂಗ್ ತಂಡವು 2010ರಿಂದಲೂ ನಿರಂತರವಾಗಿ ಬೆಟ್ಟಿಂಗ್ ನಡೆಸುತ್ತಿದೆ. ಇದೀಗ ಸಿಬಿಐ ಜೋಧಪುರ ಮೂಲದ ಸಜ್ಜನ್‌ ಸಿಂಗ್ ಹಾಗೂ ಜೈಪುರ ಮೂಲದ ರಾಮ್ ಅವತಾರ್, ಪ್ರಭು ಲಾಲ್‌ ಮೀನಾ, ಅಮಿತ್ ಕುಮಾರ್ ಶರ್ಮಾ ಮೇಲೆ ಪ್ರಕರಣ ದಾಖಲಿಸಿದೆ. 

2013ರಲ್ಲಿ ಮೊದಲ ಬಾರಿ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಎಸ್‌.ಶ್ರೀಶಾಂತ್‌ ಸೇರಿದಂತೆ ಮೂವರು ಆಟಗಾರರು ನಿಷೇಧಕ್ಕೊಳಗಾಗಿದ್ದರು. ಬಳಿಕ 2015ರಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಚೆನ್ನೈ ತಂಡಕ್ಕೆ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಐಪಿಎಲ್‌ನಿಂದ ನಿಷೇಧ ಹೇರಲಾಗಿತ್ತು.