"

ಇಂದೋರ್‌[ಜ.09]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಕರ್ನಾಟಕದ ವೇಗದ ಬೌಲರ್‌ ಪ್ರಸಿದ್‌್ಧ ಕೃಷ್ಣರನ್ನು ಆಯ್ಕೆ ಮಾಡುವ ಸುಳಿವು ನೀಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡ​ರ್ಸ್ ತಂಡದ ಪರ ಆಡುವ ಪ್ರಸಿದ್‌್ಧ ಬಗ್ಗೆ ವಿರಾಟ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅಚ್ಚರಿಯ ಆಯ್ಕೆ ನಿರೀಕ್ಷಿಸಿ ಎಂದಿದ್ದಾರೆ.

ಶ್ರೀಲಂಕಾ ವಿರುದ್ಧ ಮಂಗಳವಾರ ಇಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೊಹ್ಲಿ, ಪ್ರಸಿದ್‌್ಧ ಹೆಸರನ್ನು ಪ್ರಸ್ತಾಪಿಸಿದರು. ತಂಡಕ್ಕೆ ಮರಳಿದ ಜಸ್‌ಪ್ರೀತ್‌ ಬುಮ್ರಾ ಎಂದಿನ ಶೈಲಿಯಲ್ಲಿ ದಾಳಿ ನಡೆಸಿದರು. ನವ್‌ದೀಪ್‌ ಸೈನಿ ಆಕರ್ಷಕ ಪ್ರದರ್ಶನ ತೋರಿದರೆ, ಶಾರ್ದೂಲ್‌ ಠಾಕೂರ್‌ ವಿಶ್ವಾಸ ಉಳಿಸಿಕೊಂಡರು. ಈ ಮೂವರು ವೇಗಿಗಳನ್ನು ಹೊಗಳುವ ವೇಳೆ, ಪ್ರಸಿದ್‌್ಧ ಹೆಸರನ್ನು ಬಳಸಿದ್ದು ಅಚ್ಚರಿಗೆ ಕಾರಣವಾಯಿತು.

ಟಿ20 ವಿಶ್ವಕಪ್‌ಗೆ ತಂಡ ಸಿದ್ಧಗೊಳ್ಳುತ್ತಿದೆ. ಸೂಕ್ತ ಆಟಗಾರರನ್ನು ಗುರುತಿಸಲಾಗುತ್ತಿದೆ ಎಂದು ವಿವರಿಸಿದ ಕೊಹ್ಲಿ, ‘ಒಬ್ಬ ಆಟಗಾರನ ಆಯ್ಕೆ ಅಚ್ಚರಿ ಮೂಡಿಸಬಹುದು. ಪ್ರಸಿದ್‌್ಧ ಕೃಷ್ಣ ದೇಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ’ ಎಂದರು.

ಲಂಕಾ ಮಣಿಸಿ ವರ್ಷದ ಮೊದಲ ಗೆಲುವಿನ ಸಿಹಿಯುಂಡ ಟೀಂ ಇಂಡಿಯಾ

23 ವರ್ಷದ ಯುವ ವೇಗಿಯ ಹೆಸರನ್ನು ಪ್ರಸ್ತಾಪಿಸಿರುವುದನ್ನು ನೋಡಿದರೆ, ಮುಂಬರುವ ನ್ಯೂಜಿಲೆಂಡ್‌ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. 2019ರ ವಿಜಯ್‌ ಹಜಾರೆ ಕ್ವಾರ್ಟರ್‌ ಫೈನಲ್‌ ಬಳಿಕ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಗಾಯಗೊಂಡ ಕಾರಣ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಪ್ರಸಿದ್‌್ಧ ಆಡಿರಲಿಲ್ಲ. ಇದೀಗ ರಣಜಿ ಟ್ರೋಫಿಯ ಮೊದಲ ನಾಲ್ಕು ಪಂದ್ಯಗಳಿಗೂ ಅವರು ಅಲಭ್ಯರಾಗಿದ್ದರು. ಜ.11ರಿಂದ ಸೌರಾಷ್ಟ್ರ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಕರ್ನಾಟಕ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಹೀಗಿರುವಾಗ ಪ್ರಸಿದ್‌್ಧ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವ ಕೊಹ್ಲಿ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

’ಟೀಂ ಇಂಡಿಯಾವೇ ಈ ಸಲ ಟಿ20 ವಿಶ್ವಕಪ್ ಗೆಲ್ಲೋದು‘

2019ರ ಏಕದಿನ ವಿಶ್ವಕಪ್‌ಗೂ ಮುನ್ನ ಪ್ರಸಿದ್‌್ಧ ಭಾರತ ತಂಡದ ನೆಟ್‌ ಬೌಲರ್‌ ಆಗಿ ಕಾರ್ಯನಿರ್ವಹಿಸಿದ್ದರು. ಆ ವೇಳೆ ಅವರ ಬೌಲಿಂಗ್‌ ಶೈಲಿ ಕೊಹ್ಲಿ ಗಮನ ಸೆಳೆಯಿತು ಎನ್ನಲಾಗಿದೆ. ಕಳೆದ ವರ್ಷ ಐಪಿಎಲ್‌ನಲ್ಲೂ ಪ್ರಸಿದ್‌್ಧ ತಮ್ಮ ವೇಗ ಹಾಗೂ ಆಕರ್ಷಕ ಲೈನ್‌ ಮತ್ತು ಲೆಂಥ್‌ನಿಂದ ಗಮನ ಸೆಳೆದಿದ್ದರು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯ ಟೈ ಆದಾಗ ಸೂಪರ್‌ ಓವರ್‌ನಲ್ಲಿ ಕೆಕೆಆರ್‌ ನಾಯಕ ದಿನೇಶ್‌ ಕಾರ್ತಿಕ್‌, ಪ್ರಸಿದ್‌್ಧ ಕೈಗೆ ಚೆಂಡನ್ನು ನೀಡಿದ್ದರು.

ಐಪಿಎಲ್‌ಗೆ ಸಿದ್ಧತೆ?: ಪ್ರಸಿದ್‌್ಧ ಮಾರ್ಚ್‌ನಲ್ಲಿ ಆರಂಭಗೊಳ್ಳಲಿರುವ 13ನೇ ಆವೃತ್ತಿಯ ಐಪಿಎಲ್‌ಗೆ ವಿಶೇಷ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಿಶ್ವಕಪ್‌ ತಂಡದ ಆಯ್ಕೆಗೆ ಐಪಿಎಲ್‌ ಪ್ರದರ್ಶನ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ. ಕೆಕೆಆರ್‌ ತಂಡದ ಬೌಲಿಂಗ್‌ ಟ್ರಂಪ್‌ಕಾರ್ಡ್‌ ಎನಿಸಿರುವ ಪ್ರಸಿದ್‌್ಧ ಆಟದ ಮೇಲೆ ವಿರಾಟ್‌ ಕೊಹ್ಲಿ, ಕೋಚ್‌ ರವಿಶಾಸ್ತ್ರಿ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಡಲಿದೆ.