Garuda Aerospace: ಅನ್ನದಾತರ ಬೆನ್ನಿಗೆ ನಿಂತ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ..!
* ರೈತರಿಗೆ ನೆರವಾಗಲು ಮುಂದಾದ ಕ್ಯಾಪ್ಟನ್ ಕೂಲ್ ಧೋನಿ
* ಗರುಡ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಮೇಲೆ ಧೋನಿ ಬಂಡವಾಳ ಹೂಡಿಕೆ
* ಧೋನಿ ಗರುಡ ಏರೋಸ್ಪೇಸ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ನೇಮಕ
ನವದೆಹಲಿ(ಜೂ.07): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಸಹಾ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League Cricket Tournament) ಟೂರ್ನಿಯಲ್ಲಿ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ, ಚೆನ್ನೈ ಮೂಲದ ಡ್ರೋಣ್ ಸ್ಟಾರ್ಟ್‌ಅಪ್ ಕಂಪನಿಯಾದ ಗರುಡ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ (Garuda Aerospace) ಕಂಪನಿ ಮೇಲೆ ಹೂಡಿಕೆ ಮಾಡಿದ್ದಾರೆ. ಇದೇ ವೇಳೆ ಧೋನಿ ಗರುಡ ಏರೋಸ್ಪೇಸ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ನೇಮಕವಾಗಿದ್ದಾರೆ.
ನಾನು ಗರುಡ ಏರೋಸ್ಪೇಸ್ ಕಂಪನಿಯ ಭಾಗವಾಗಿರುವುದಕ್ಕೆ ಸಂತೋಷವಾಗುತ್ತಿದೆ. ಹಾಗೂ ಈ ಸಂಸ್ಥೆಯ ಯಶಸ್ಸಿನ ಪಯಣವನ್ನು ನೋಡಲು ತಾವು ಉತ್ಸುಕರಾಗಿದ್ದೇವೆ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮೊದಲಿನಿಂದಲೂ ಕೃಷಿ ಕ್ಷೇತ್ರದ ಮೇಲೆ ಒಲವು ಹೊಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿಯೇ ಅನ್ನದಾತರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಬೇಕು ಎನ್ನುವ ಮಹತ್ವಕಾಂಕ್ಷೆಯೊಂದಿಗೆ ಗರುಡ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದಿಗೆ ಕೈಜೋಡಿಸಿದ್ದಾರೆ. ಗರುಡಾ ಏರೋಸ್ಪೇಸ್ ಸಂಸ್ಥೆಯು ತಯಾರಿಸುವ ಡ್ರೋಣ್ ಸಹಾಯದಿಂದ ಕೀಟ ನಾಶಕ, ಕಳೆನಾಶಕ, ನೀರು, ರಸಗೊಬ್ಬರವನ್ನು ಸುಲಭವಾಗಿ ಬೆಳೆಗಳಿಗೆ ಸಿಂಪಡಿಸಬಹುದು.
ಗರುಡ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಜತೆ ಮಹೇಂದ್ರ ಸಿಂಗ್ ಧೋನಿ ಕೈ ಜೋಡಿಸಿದ್ದು ಒಂದು ರೀತಿ ಕನಸು ನನಸಾದ ಕ್ಷಣ ಎಂದು ಗರುಡ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅಗ್ನೀಶ್ವರ್ ಜಯಪ್ರಕಾಶ್ ಹೇಳಿದ್ದಾರೆ. ಗರುಡಾ ಕಂಪನಿಯ ಸುಮಾರು 300 ಡ್ರೋನ್‌ಗಳು ಈಗಾಗಲೇ ದೇಶದ 26 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಶೇಷ ಅಭಿಮಾನಿ ಜೊತೆ ಧೋನಿ ಮಾತುಕತೆ: ವೈರಲ್!
ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಇತ್ತೀಚೆಗಷ್ಟೇ ತಮ್ಮ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. ರಾಂಚಿ ವಿಮಾನ ನಿಲ್ದಾಣದಲ್ಲಿ ಲಾವಣ್ಯ ಪಿಲಾನಿಯಾ ಎಂಬುವ ಅಂಗವಿಕಲ ಅಭಿಮಾನಿ ಧೋನಿ ಜೊತೆ ಫೋಟೋಗಾಗಿ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಧೋನಿ, ಆಕೆಯೊಂದಿಗೆ ಕೆಲ ಸಮಯ ಕಳೆದು ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
Ind vs SA: ಟಿ20 ಸರಣಿಗಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಈ ವೇಳೆ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ತಮ್ಮ ಅಂಗವೈಕಲ್ಯದ ಬಗ್ಗೆ ವಿವರಿಸುವಾಗ ಕಣ್ಣೀರಿಟ್ಟ ಲಾವಣ್ಯ ಅವರನ್ನು ಧೋನಿ ‘ಅಳಬಾರದು’ ಎಂದು ಸಮಾಧಾನಗೊಳಿಸಿದರು. ಜೊತೆಗೆ ಅಭಿಮಾನಿ ಬಿಡಿಸಿದ ಚಿತ್ರವನ್ನು ಧೋನಿ ಸ್ವೀಕರಿಸಿ ತಮ್ಮ ಮನೆಗೆ ಕೊಂಡೊಯ್ಯುವುದಾಗಿ ಹೇಳಿದರು.
ಮುಂದಿನ ಐಪಿಎಲ್‌ನಲ್ಲೂ ಆಡುತ್ತೇನೆ: ಧೋನಿ ಸ್ಪಷ್ಟನೆ
ಮುಂಬೈ: ಚೆನ್ನೈ ಸೂಪರ್ ಕಿಂಗ್‌್ಸ ನಾಯಕ ಎಂ.ಎಸ್.ಧೋನಿ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ ಆಡುವುವುದಾಗಿ ಸ್ಪಷ್ಟಪಡಿಸಿದ್ದರು. ‘ಖಂಡಿತವಾಗಿಯೂ ಮುಂದಿನ ವರ್ಷವೂ ನಾನು ಆಡುತ್ತೇನೆ. ಚೆನ್ನೈನಲ್ಲಿ ಆಡದೇ ಇರುವುದು ಮತ್ತು ಚೆನ್ನೈಗೆ ಧನ್ಯವಾದ ಹೇಳದೇ ಇದ್ದರೆ ಅದು ಅನ್ಯಾಯವಾಗುತ್ತದೆ. ಚೆನ್ನೈ ಅಭಿಮಾನಿಗಳ ಜೊತೆ ಹಾಗೆ ಮಾಡುವುದು ಸರಿಯಲ್ಲ’ ಎಂದಿದ್ದರು.