ವಯಸ್ಸು 41 ಆದರೂ ಧೋನಿ ತೋಳ್ಬಲಕ್ಕೆ ಸಾಟಿಯಿಲ್ಲ..! ನೆಟ್ಸ್‌ನಲ್ಲಿ ಮಹಿ ಭರ್ಜರಿ ಪ್ರಾಕ್ಟೀಸ್
16ನೇ ಆವೃತ್ತಿಯ ಐಪಿಎಲ್ ಮಾರ್ಚ್ 31ರಿಂದ ಆರಂಭ
ಐಪಿಎಲ್‌ಗಾಗಿ ಭರ್ಜರಿ ತಯಾರಿ ನಡೆಸುತ್ತಿರುವ ಎಂ ಎಸ್ ಧೋನಿ
5ನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ ಚೆನ್ನೈ ಸೂಪರ್ ಕಿಂಗ್ಸ್
![Captain Cool MS Dhoni finds his mojo in CSK Training session ahead of IPL 2023 kvn Captain Cool MS Dhoni finds his mojo in CSK Training session ahead of IPL 2023 kvn](https://static-gi.asianetnews.com/images/01gvhrqmgmy59jtcasqhs43h7j/ms--1-_363x203xt.jpg)
ಚೆನ್ನೈ(ಮಾ.17): ಟೀಂ ಇಂಡಿಯಾ ಮಾಜಿ ನಾಯಕ, ಮಹೇಂದ್ರ ಸಿಂಗ್ ಧೋನಿ, ಕಳೆದ ಮೇ ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಇದೀಗ ದಿಗ್ಗಜ ಕ್ರಿಕೆಟಿಗ ಧೋನಿ, ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. 41 ವರ್ಷದ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ, ಇದೀಗ ಭರ್ಜರಿ ತಯಾರಿ ನಡೆಸುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಎದುರು ನೋಡುತ್ತಿದ್ದಾರೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ತವರು ಹಾಗೂ ತವರಿನಾಚೆಯ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಈಗಾಗಲೇ ನಾಲ್ಕು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ, ತಮ್ಮ ಅನುಭವ ಹಾಗೂ ಚಾಣಾಕ್ಷತನವನ್ನು ಚೆನ್ನಾಗಿ ಬಳಸಿಕೊಂಡು ಚೆನ್ನೈ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಧೋನಿ ಸಕಲ ಪ್ರಯತ್ನ ನಡೆಸುತ್ತಿದ್ದಾರೆ. ಧೋನಿ ನೆಟ್ಸ್‌ನಲ್ಲಿ ಸಿಕ್ಸರ್ ಪ್ರಾಕ್ಟೀಸ್ ನಡೆಸುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಇತ್ತೀಚೆಗಷ್ಟೇ ಚೆನ್ನ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಆ ವಿಡಿಯೋದಲ್ಲಿ ಧೋನಿ, ಹಿಂದೆಂದಿಗಿಂತಲೂ ಮತ್ತಷ್ಟು ಫಿಟ್ ಆಗಿರುವಂತೆ ಕಂಡು ಬಂದಿದ್ದರು. ಇದಷ್ಟೇ ಅಲ್ಲದೇ ಬೌಲರ್‌ಗಳ ಚೆಂಡನ್ನು ಸಿಕ್ಸರ್ ಬಾರಿಸುವ ಮೂಲಕ ವಯಸ್ಸು 41 ಆದರೂ ತಮ್ಮ ತೋಳ್ಬಲದಲ್ಲಿ ಶಕ್ತಿ ಇನ್ನೂ ಕುಂದಿಲ್ಲ ಎನ್ನುವ ಎಚ್ಚರಿಕೆಯನ್ನು ಧೋನಿ ನೀಡಿದ್ದರು.
IPL 2023 ಟೂರ್ನಿಗಾಗಿ ಚೆನ್ನೈಗೆ ಆಗಮಿಸಿದ ಧೋನಿಗೆ ಅದ್ಧೂರಿ ಸ್ವಾಗತ!
ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಈ ಬಾರಿ ನಡೆದ ಆಟಗಾರರ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರಂತಹ ತಾರಾ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಾರ್ಚ್ 31ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ.
ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡ ವಿವರ:
ಎಂ ಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಸಿಂಘ್ ಚೌಧರಿ, ಮತೀಶ ಚೌಧರಿ. , ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.
ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಯ ವಿವರ ಹೀಗಿದೆ ನೋಡಿ
* ಬೆನ್ ಸ್ಟೋಕ್ಸ್ - ಆಲ್ರೌಂಡರ್- 16.25 ಕೋಟಿ ರುಪಾಯಿ
* ಕೈಲ್ ಜೇಮಿಸನ್ - ವೇಗದ ಬೌಲರ್ -1 ಕೋಟಿ ರುಪಾಯಿ
* ನಿಶಾಂತ್ ಸಿಂಧು - ಬ್ಯಾಟರ್ - 60 ಲಕ್ಷ ರುಪಾಯಿ
* ಅಜಿಂಕ್ಯ ರಹಾನೆ - ಬ್ಯಾಟರ್ - 50 ಲಕ್ಷ ರುಪಾಯಿ
* ಭಗತ್ ವರ್ಮಾ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಅಜಯ್ ಮಂಡಲ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಶೇಕ್ ರಶೀದ್ - ಬ್ಯಾಟರ್ - 20 ಲಕ್ಷ ರುಪಾಯಿ.