IPL 2023 ಟೂರ್ನಿಗಾಗಿ ಚೆನ್ನೈಗೆ ಆಗಮಿಸಿದ ಧೋನಿಗೆ ಅದ್ಧೂರಿ ಸ್ವಾಗತ!

ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಚೆನ್ನೈಗೆ ಆಗಮಿಸಿದ್ದಾರೆ. ಐಪಿಎಲ್ 2023 ಟೂರ್ನಿಗಾಗಿ ಸಿಎಸ್‌ಕೆ ತಂಡ ಸೇರಿಕೊಳ್ಳಲು ಧೋನಿ ಚೆನ್ನೈಗೆ ಆಗಮಿಸಿದ್ದಾರೆ. ಧೋನಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಧೋನಿ ನೋಡಲು ಜನಸಾಗರವೇ ಹರಿದುಬಂದಿತ್ತು.

MS Dhoni reach Chennai to join CSK team Ahead of IPL 2023 thala receives grand welcome ckm

ಚೆನ್ನೈ(ಮಾ.02): IPL 2023 ಟೂರ್ನಿಗೆ ಅಂತಿಮ ಹಂತದ ತಯಾರಿಗಳು ನಡೆಯುತ್ತಿದೆ. ಫ್ರಾಂಚೈಸಿಗಳು ಈಗಾಗಲೇ ಅಭ್ಯಾಸ ಶಿಬಿರ ಆರಂಭಿಸಿದೆ. ಈ ತಿಂಗಳ ಅಂತ್ಯದಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಈ ಬಾರಿ ಸಿಎಸ್‌ಕೆ ಮಾತ್ರವಲ್ಲ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾವುಕ ಟೂರ್ನಿ. ಕಾರಣ ವಿಶ್ವಕಪ್ ಗೆಲ್ಲಿಸಿಕೊಟ್ಟ, ಚೆನ್ನೈ ತಂಡವನ್ನು ಚಾಂಪಿಯನ್ ಮಾಡಿದ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿಯ ಕೊನೆಯ ಐಪಿಎಲ್ ಟೂರ್ನಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಕೊನೆಯ ಬಾರಿಗೆ ಧೋನಿ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಧೋನಿ ಐಪಿಎಲ್ 2023 ಟೂರ್ನಿಗಾಗಿ ಚೆನ್ನೈ ತಲುಪಿದ್ದಾರೆ. ಚೆನ್ನೈಗೆ ಬಂದಿಳಿಯುತ್ತಿದ್ದಂತ ಧೋನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

ಚೆನ್ನೈಗೆ ಕಾಲಿಡುತ್ತಿದ್ದಂತೆ ಎಂ.ಎಸ್.ಧೋನಿಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಡೋಲು, ಬ್ಯಾಂಡ್ ವಾದ್ಯಗಳ ಮೂಲಕ ಧೋನಿಗೆ ಸ್ವಾಗತ ಕೋರಲಾಗಿದೆ. ಇನ್ನು ಧೋನಿ ಮೇಲೆ ಹೂಮಳೆ ಸುರಿಸಿದ್ದಾರೆ. ವಿಮಾನ ನಿಲ್ದಾಣದಿಂದ ಧೋನಿ ಹೊಟೆಲ್ ಸೇರುವವರೆಗೂ ಜನಸಾಗರವೇ ನಿಂತಿತ್ತು. ಧೋನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಧೋನಿ ಕೈಕುಲುಕಲು ಅಭಿಮಾನಿಗಳ ದಂಡೇ ಆಗಮಿಸಿತ್ತು.  ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಹೂವಿನದಳಗಳನ್ನು ಎಸೆದು ಸ್ವಾಗತ ನೀಡಲಾಗಿದೆ.

ಧೋನಿಯ ಮಾತನ್ನು ತಾವು ನಂಬುವುದೇಕೆ ಎನ್ನುವ ಸತ್ಯ ಬಹಿರಂಗ ಮಾಡಿದ ವಿರಾಟ್ ಕೊಹ್ಲಿ..!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ನಾಳೆಯಿಂದಲೇ ಅಭ್ಯಾಸ ಆರಂಭಿಸಲಿದ್ದಾರೆ. ಈಗಾಗಲೇ ಯುವ ಆಟಗಾರರನ್ನೊಳಗೆ ಚೆನ್ನೈ ಶಿಬಿರ ಚಿಪಾಕ್ ಮೈದಾನದಲ್ಲಿ ನಡೆಯುತ್ತಿದೆ. ಇದೀಗ ಧೋನಿ ತಂಡ ಸೇರಿಕೊಳ್ಳಲಿದ್ದಾರೆ. ಇಷ್ಟು ದಿನ ಧೋನಿ, ರಾಂಚಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದ್ದರು. ನಾಳೆಯಿಂದ ಚಿಪಾಕ್ ಮೈದಾನದಲ್ಲಿ ಅಭ್ಯಾಸ ಶುರುವಾಗಲಿದೆ.

 

 

ಎಂ.ಎ​ಸ್‌.​ಧೋನಿ ಚೆನ್ನೈನ ಚಿಪಾಕ್‌ ಕ್ರೀಡಾಂಗ​ಣ​ದಲ್ಲಿ ಮೇ 14ರಂದು ಕೋಲ್ಕತಾ ವಿರುದ್ಧ ತಮ್ಮ ಕೊನೆ ಐಪಿ​ಎಲ್‌ ಪಂದ್ಯ​ವಾ​ಡುವ ಸಾಧ್ಯತೆ ಇದೆ ಎಂದು ಚೆನ್ನೈ ಫ್ರಾಂಚೈಸಿ ಮೂಲ​ಗಳು ತಿಳಿ​ಸಿ​ದ್ದಾಗಿ ವರ​ದಿ​ಯಾ​ಗಿದೆ. ಧೋನಿ ಮುಂದಿನ ವರ್ಷ ಐಪಿ​ಎ​ಲ್‌​ನಲ್ಲಿ ಕಣ​ಕ್ಕಿ​ಳಿ​ಯುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಈ ಬಾರಿ ಚೆನ್ನೈ ಪ್ಲೇ-ಆಫ್‌ ಪ್ರವೇ​ಶಿ​ಸ​ದಿ​ದ್ದರೆ ಮೇ 14ರ ಲೀಗ್‌ ಹಂತದ ಕೊನೆ ಪಂದ್ಯ ಧೋನಿ ಪಾಲಿಗೆ ವಿದಾ​ಯದ ಪಂದ್ಯ​ವಾ​ಗುವ ಸಾಧ್ಯತೆ ಇದೆ ಎಂದು ತಿಳಿ​ದು​ಬಂದಿ​ದೆ.ಧೋನಿ 2008ರ ಚೊಚ್ಚಲ ಆವೃ​ತ್ತಿ​ಯಿಂದಲೂ ತಂಡಕ್ಕೆ ನಾಯ​ಕತ್ವ ವಹಿ​ಸು​ತ್ತಿದ್ದು, ಕಳೆದ ಆವೃ​ತ್ತಿ​ಯಲ್ಲಿ ಜಡೇಜಾ ನಾಯ​ಕತ್ವ ಬಿಟ್ಟು​ಕೊ​ಟ್ಟರೂ ಮತ್ತೆ ನಾಯ​ಕ​ನಾಗಿ ಮುಂದು​ವ​ರಿ​ದಿ​ದ್ದರು.

IPL 2023ರ ಬಳಿಕ ನಾಯಕ ಎಂ.ಎಸ್ ಧೋನಿ ನಿವೃತ್ತಿ? ಸಿಎಸ್‌ಕೆ ತಂಡದಲ್ಲಿ ಮಹತ್ವದ ಬೆಳವಣಿಗೆ

ವೆಸ್ಟ್‌ಇಂಡೀಸ್‌ನ ಹಿರಿಯ ಆಲ್ರೌಂಡರ್‌ ಡ್ವೇನ್‌ ಬ್ರಾವೋ 2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಬೌಲಿಂಗ್‌ ಕೋಚ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ಒಂದು ವರ್ಷ ಐಪಿಎಲ್‌ನಿಂದ ದೂರವಿರಲು ನಿರ್ಧರಿಸಿರುವ ಲಕ್ಷ್ಮಿಪತಿ ಬಾಲಾಜಿ ಸ್ಥಾನವನ್ನು ಬ್ರಾವೋ ತುಂಬಲಿದ್ದಾರೆ. ಇತ್ತೀಚೆಗಷ್ಟೇ ಬ್ರಾವೋರನ್ನು ಚೆನ್ನೈ ತಂಡದಿಂದ ಕೈಬಿಡಲಾಗಿತ್ತು. ಅವರು ಹರಾಜಿಗೂ ನೋಂದಣಿ ಮಾಡಿಕೊಂಡಿಲ್ಲ.

Latest Videos
Follow Us:
Download App:
  • android
  • ios