* ದಕ್ಷಿಣ ಆಫ್ರಿಕಾ ಎದುರು ಮೊದಲ ಏಕದಿನ ಗೆಲುವು ದಾಖಲಿಸಿದ ಐರ್ಲೆಂಡ್* ಶತಕ ಬಾರಿಸಿ ಐರ್ಲೆಂಡ್ ತಂಡಕ್ಕೆ ನೆರವಾದ ನಾಯಕ ಆ್ಯಂಡಿ ಬಲ್ಬ್ರೀನ್‌* 5 ಪಂದ್ಯಗಳ ಏಕದಿನ ಸರಣಿಯಲ್ಲಿ ಐರ್ಲೆಂಡ್‌ಗೆ 1-0 ಮುನ್ನಡೆ

ಡುಬ್ಲಿನ್‌(ಜು.14): ನಾಯಕ ಆ್ಯಂಡಿ ಬಲ್ಬ್ರೀನ್‌ ಬಾರಿಸಿದ ಅತ್ಯಾಕರ್ಷಕ ಶತಕದ ನೆರವಿನಿಂದ ಐರ್ಲೆಂಡ್‌ ತಂಡವು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದೆದುರು ಮೊದಲ ಏಕದಿನ ಗೆಲುವು ಸಾಧಿಸಿದೆ. 5 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡವು 43 ರನ್‌ಗಳ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್ ತಂಡಕ್ಕೆ ನಾಯಕ ಆ್ಯಂಡಿ ಬಲ್ಬ್ರೀನ್‌ ಆಸರೆಯಾದರು. 117 ಎಸೆತಗಳನ್ನು ಎದುರಿಸಿದ ಬಲ್ಬ್ರೀನ್‌ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 102 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಟೆಕ್ಟರ್‌ 79 ರನ್‌ ಹಾಗೂ ಮಾರ್ಕ್‌ ಅಡೈರ್ ಅಜೇಯ 45 ರನ್‌ ಬಾರಿಸುವ ಮೂಲಕ ಐರ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 290 ರನ್‌ ಕಲೆಹಾಕಿತ್ತು.

Scroll to load tweet…

ಬಾಬರ್ ಅಜಂ ಶತಕ ವ್ಯರ್ಥ: ಪಾಕ್ ಎದುರು ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ಇಂಗ್ಲೆಂಡ್‌

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಏಯ್ಡನ್‌ ಮಾರ್ಕ್‌ರಮ್‌(5) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ತೆಂಬ ಬವುಮಾ(10) ಕೂಡಾ ಪೆವಿಲಿಯನ್‌ ಹಾದಿ ಹಿಡಿದರು. ಜೇನೆಮನ್‌ ಮಲಾನ್(84) ಹಾಗೂ ರಾಸಿ ವ್ಯಾನ್‌ ಡರ್ ಡುಸೆನ್(49) ದಿಟ್ಟ ಬ್ಯಾಟಿಂಗ್‌ ನಡೆಸಿದರಾದರೂ, ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರಲು ವಿಫಲರಾದರು. ನಿರಂತರ ವಿಕೆಟ್ ಕಳೆದುಕೊಂಡ ಪರಿಣಾಮ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 48.3 ಓವರ್‌ಗಳಲ್ಲಿ 247 ರನ್‌ಗಳಿಗೆ ಸರ್ವಪತನ ಕಂಡಿತು.

ಮೊದಲ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಒಂದು ಎಸೆತ ಕಾಣದೇ ಪಂದ್ಯ ರದ್ದಾಗಿತ್ತು. ಇನ್ನುಳಿದ ಮೂರು ಪಂದ್ಯಗಳಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.