Asianet Suvarna News Asianet Suvarna News

ಬಾಬರ್ ಅಜಂ ಶತಕ ವ್ಯರ್ಥ: ಪಾಕ್ ಎದುರು ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ಇಂಗ್ಲೆಂಡ್‌

* ಪಾಕಿಸ್ತಾನ ಎದುರು ಏಕದಿನ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಇಂಗ್ಲೆಂಡ್

* ಬಾಬರ್ ಅಜಂ ಬಾರಿಸಿದ ದಾಖಲೆಯ ಶತಕ ವ್ಯರ್ಥ

* ಪಾಕ್‌ ಎದುರು 3-0 ಅಂತರದಲ್ಲಿ ಇಂಗ್ಲೆಂಡ್‌ಗೆ ಸರಣಿ ಗೆಲುವು

James Vince century helps England Cricket Team ODI series sweep over Pakistan kvn
Author
Edgbaston Stadium, First Published Jul 14, 2021, 1:07 PM IST

ಎಡ್ಜ್‌ಬಾಸ್ಟನ್‌(ಜು.14): ಜೇಮ್ಸ್‌ ವಿನ್ಸ್‌ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ಪಾಕಿಸ್ತಾನ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ಕ್ರಿಕೆಟ್ ತಂಡವು 3 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇಂಗ್ಲೆಂಡ್ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ.

ಪಾಕಿಸ್ತಾನ ನೀಡಿದ್ದ 332 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿತು. 165 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ 6ನೇ ವಿಕೆಟ್‌ಗೆ ಜತೆಯಾದ ಜೇಮ್ಸ್ ವಿನ್ಸ್‌ ಹಾಗೂ ಲೆವಿಸ್ ಗ್ರೆಗೊರಿ 129 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ವಿನ್ಸ್‌ 95 ಎಸೆತಗಳಲ್ಲಿ 102 ರನ್‌ ಬಾರಿಸಿದರೆ ಗ್ರೆಗೊರಿ 77 ರನ್‌ ಸಿಡಿಸಿ ಉತ್ತಮ ಸಾಥ್ ನೀಡಿದರು. 

#BreakingNews ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆ..!

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ(158) ಆಕರ್ಷಕ ಶತಕ ಹಾಗೂ ಇಮಾಮ್ ಉಲ್‌ ಹಕ್‌(56) ಮತ್ತು ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ರಿಜ್ವಾನ್‌(74) ಬಾರಿಸಿ ಸಮಯೋಚಿತ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 331 ರನ್‌ ಕಲೆಹಾಕಿತ್ತು. 

ಅತಿವೇಗವಾಗಿ 14 ಶತಕ ಬಾರಿಸಿ ದಾಖಲೆ ಬರೆದ ಅಜಂ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕೇವಲ 81 ಇನಿಂಗ್ಸ್‌ನಲ್ಲಿ ವೃತ್ತಿಜೀವನದ 14ನೇ ಏಕದಿನ ಶತಕ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಮೆಗ್‌ ಲ್ಯಾನಿಂಗ್ 82 ಇನಿಂಗ್ಸ್‌ಗಳಲ್ಲಿ 14 ಶತಕ ಬಾರಿಸಿದ್ದರು. ಇದೀಗ ಆ ದಾಖಲೆಯನ್ನು ಬಾಬರ್ ಅಜಂ ಅಳಿಸಿ ಹಾಕಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಹಾಶೀಂ ಆಮ್ಲಾ 84 ಇನಿಂಗ್ಸ್‌ಗಳಲ್ಲಿ 14 ಏಕದಿನ ಶತಕ ಬಾರಿಸಿದ್ದರು. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

Follow Us:
Download App:
  • android
  • ios