South Africa Cricket  

(Search results - 59)
 • South Africa Cricket Team beats Sri Lanka by 10 wickets sweeps T20I series kvn

  CricketSep 15, 2021, 4:04 PM IST

  ಶ್ರೀಲಂಕಾ ಎದುರು ಟಿ20 ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

  ಕೊಲಂಬೋದಲ್ಲಿ ನಡೆದ ಶ್ರೀಲಂಕಾ ನೀಡಿದ್ದ 121 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೇವಲ 14.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿದೆ. ಕ್ವಿಂಟನ್ ಡಿ ಕಾಕ್‌ 59 ರನ್‌ ಸಿಡಿಸಿದರೆ, ರೀಜಾ ಹೆಂಡ್ರಿಕ್ಸ್‌ 56 ರನ್‌ ಬಾರಿಸಿದರು. 
   

 • South Africa to host India 3 Format Cricket Series in year End kvn

  CricketSep 11, 2021, 12:27 PM IST

  ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಟೀಂ ಇಂಡಿಯಾ

  ಈ ವರ್ಷ ಡಿಸೆಂಬರ್‌ನಲ್ಲಿ ಭಾರತ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿತು. ದಕ್ಷಿಣ ಆಫ್ರಿಕಾ ತವರಿನ ಸರಣಿಗಳು 2021ರ ನವೆಂಬರ್‌ನಿಂದ 2022ರ ಏಪ್ರಿಲ್‌ವರೆಗಿನ ವೇಳಾಪಟ್ಟಿ ಪ್ರಕಟಗೊಂಡಿದೆ.

 • Chris Morris Faf du Plessis Imran Tahir miss out as South Africa name T20 World Cup squad kvn

  CricketSep 9, 2021, 5:46 PM IST

  T20 World Cup ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!

  ಫಾಫ್ ಡು ಪ್ಲೆಸಿಸ್‌ ಕಳೆದ ಫೆಬ್ರವರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಇದೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಾವು ಲಭ್ಯವಿರುವುದಾಗಿ ಡು ಪ್ಲೆಸಿಸ್ ಖಚಿತಪಡಿಸಿದ್ದರು. ಆದರೆ ಕಳೆದ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ದ ಕೊನೆಯ ಬಾರಿಗೆ ಕಣಕ್ಕಿಳಿದಿದ್ದ ಡು ಪ್ಲೆಸಿಸ್‌ ಇದಾದ ಬಳಿಕ ಹರಿಣಗಳ ತಂಡದ ಪರ ಯಾವುದೇ ಸೀಮಿತ ಓವರ್‌ಗಳ ಪಂದ್ಯವನ್ನಾಡಿರಲಿಲ್ಲ. 

 • former South African Test cricketer John Watkins passes away at 98 kvn

  CricketSep 7, 2021, 3:35 PM IST

  ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಕೋವಿಡ್‌ಗೆ ಬಲಿ..!

  ಜಗತ್ತಿನ ಅತ್ಯಂತ ಹಿರಿಯ ಟೆಸ್ಟ್‌ ಕ್ರಿಕೆಟಿಗ ಎನಿಸಿಕೊಂಡಿದ್ದ ಜಾನ್‌ ವ್ಯಾಟ್ಕಿನ್ಸ್‌ ಕೆಲ ದಿನಗಳಿಂದ ಆರೋಗ್ಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 • South Africa pacer Dale Steyn retires from all cricket kvn

  CricketAug 31, 2021, 5:13 PM IST

  ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸ್ಪೀಡ್‌ ಗನ್‌ ಡೇಲ್ ಸ್ಟೇನ್‌..!

  ಡೇಲ್ ಸ್ಟೇನ್‌ 2019ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು, ಇದೀಗ ಹರಿಣಗಳ ವೇಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಸ್ಟೇನ್‌, 20 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಅಭ್ಯಾಸ, ಪಂದ್ಯಗಳು, ಪ್ರವಾಸ, ಸೋಲು-ಗೆಲುವು, ನೋವು-ನಲಿವು, ಸ್ನೇಹ-ಸಹೋದರತ್ವ, ಹೀಗೆ ಹೇಳಿಕೊಳ್ಳಲು ಸಾಕಷ್ಟು ನೆನಪುಗಳಿವೆ. ಸಾಕಷ್ಟು ಮಂದಿಗೆ ಧನ್ಯವಾದ. 
   

 • Captain Andy Balbirnie Century Helps Ireland Cricket Team secures maiden ODI win over South Africa kvn

  CricketJul 14, 2021, 2:05 PM IST

  ದಕ್ಷಿಣ ಆಫ್ರಿಕಾಗೆ ಶಾಕ್‌ ಕೊಟ್ಟು ಚೊಚ್ಚಲ ಗೆಲುವು ದಾಖಲಿಸಿದ ಐರ್ಲೆಂಡ್

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್ ತಂಡಕ್ಕೆ ನಾಯಕ ಆ್ಯಂಡಿ ಬಲ್ಬ್ರೀನ್‌ ಆಸರೆಯಾದರು. 117 ಎಸೆತಗಳನ್ನು ಎದುರಿಸಿದ ಬಲ್ಬ್ರೀನ್‌ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 102 ರನ್‌ ಬಾರಿಸಿದರು.

 • De Kock and Markram power South Africa to T20I series win against West Indies kvn

  CricketJul 5, 2021, 11:28 AM IST

  ವಿಂಡೀಸ್ ಎದುರು ಟಿ20 ಸರಣಿ ಗೆದ್ದ ಹರಿಣಗಳು

  ಮೊದಲ 4 ಟಿ20 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದ್ದ ಉಭಯ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಖಾತೆ ತೆರೆಯುವ ಮುನ್ನವೇ ನಾಯಕ ತೆಂಬ ಬವುಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

 • Kieran Pollard Dwayne Bravo hand West Indies 21 run win over South Africa in fourth T20I kvn

  CricketJul 2, 2021, 12:35 PM IST

  ಪೊಲ್ಲಾರ್ಡ್‌-ಬ್ರಾವೋ ಮಿಂಚಿನಾಟಕ್ಕೆ ತಲೆಬಾಗಿದ ಹರಿಣಗಳು

  ಮೊದಲ ಬ್ಯಾಟ್‌ ಮಾಡಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಲಿಂಡ್ಲ್‌ ಸಿಮನ್ಸ್‌(47) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರು ಕೇವಲ 3 ರನ್‌ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಲೆವಿಸ್‌, ಗೇಲ್ ಹಾಗೂ ಹೆಟ್ಮೇಯರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಕೆರಿಬಿಯನ್‌ ಪಾಳಯದಲ್ಲಿ ಆತಂಕ ಮನೆಮಾಡಿತ್ತು.

 • Spinner Keshav Maharaj hat trick helps South Africa to Test series win over West Indies kvn

  CricketJun 22, 2021, 9:11 AM IST

  ವಿಂಡೀಸ್ ಎದುರು ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಕೇಶವ್ ಮಹಾರಾಜ್

  ಸೋಮವಾರ ನಡೆದ ಪಂದ್ಯದ 4ನೇ ದಿನದಾಟದಲ್ಲಿ ಮಹಾರಾಜ್‌, ವಿಂಡೀಸ್‌ 2ನೇ ಇನ್ನಿಂಗ್ಸ್‌ನ 37ನೇ ಓವರಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ವಿಂಡೀಸ್‌ನ ಕೀರನ್‌ ಪೋವೆಲ್‌, ಜೇಸನ್‌ ಹೋಲ್ಡರ್‌ ಹಾಗೂ ಜೋಶ್ವಾ ಡಾ ಸಿಲ್ವಾರನ್ನು ಸತತ 3 ಎಸೆತಗಳಲ್ಲಿ ಔಟ್‌ ಮಾಡಿ, ಮಹಾರಾಜ್‌ ಹ್ಯಾಟ್ರಿಕ್‌ ಸಾಧಿಸಿದರು.
   

 • Kagiso Rabada 5 wickets Haul help South Africa Cricket Team Beat West Indies by Innings and 63 runs in ST Lucia kvn

  CricketJun 14, 2021, 11:36 AM IST

  ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ಎದುರು ವಿಂಡೀಸ್‌ಗೆ ಹೀನಾಯ ಸೋಲು..!

  ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಕೇವಲ 97 ರನ್‌ಗೆ ಆಲೌಟ್‌ ಆಗಿತ್ತು. ಲುಂಗಿ ಎಂಗಿಡಿ ಟೆಸ್ಟ್‌ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 5 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ನೊಕಿಯೆ 4 ವಿಕೆಟ್ ಕಬಳಿಸಿ ವಿಂಡೀಸ್ ತಂಡವನ್ನು ಮೂರಂಕಿ ಮೊತ್ತದೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

 • Quinton De Kock unbeaten Century puts South Africa on top against West Indies in St Lucia kvn

  CricketJun 12, 2021, 3:31 PM IST

  ಅಜೇಯ 141 ಚಚ್ಚಿದ ಕ್ವಿಂಟನ್ ಡಿ ಕಾಕ್; ಹರಿಣಗಳ ಹಿಡಿತದಲ್ಲಿ ವಿಂಡೀಸ್

  ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೇ ದಿನದಾಟದಲ್ಲಿ ಡಿ ಕಾಕ್ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡಿ ಕಾಕ್ 170 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 141 ರನ್ ಚಚ್ಚಿದರು.

 • Lungi Ngidi 5 Wickets Haul helps South Africa Puts Driver Seat Against West Indies at St Lucia kvn

  CricketJun 11, 2021, 1:20 PM IST

  ಮೊದಲ ಟೆಸ್ಟ್: ಎಂಗಿಡಿ ಮಾರಕ ದಾಳಿಗೆ ವಿಂಡೀಸ್‌ 97ಕ್ಕೆ ಆಲೌಟ್

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌ ತಂಡಕ್ಕೆ ಎಂಗಿಡಿ ತಮ್ಮ ಮಾರಕ ದಾಳಿಯ ಮೂಲಕ ಶಾಕ್ ನೀಡಿದರು.2018ರಲ್ಲಿ ಭಾರತ ವಿರುದ್ದ ಪಾದಾರ್ಪಣೆ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಎಂಗಿಡಿ, ಇದೀಗ ಎರಡನೇ ಬಾರಿಗೆ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಎಂಗಿಡಿಗೆ ದಕ್ಷಿಣ ಆಫ್ರಿಕಾದ ಮತ್ತೋರ್ವ ವೇಗಿ ನೊಕಿಯೆ ಉತ್ತಮ ಸಾಥ್ ನೀಡಿದ ಪರಿಣಾಮ ವೆಸ್ಟ್ ಇಂಡೀಸ್‌ ಕೇವಲ 40.5 ಓವರ್‌ಗಳಲ್ಲಿ ಸರ್ವಪತನ ಕಂಡಿತು. 

 • West Indies Announces 13 Member Squad for 1st Test Against South Africa kvn

  CricketJun 9, 2021, 1:46 PM IST

  ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ

  2020ರ ಅಂಡರ್ 19 ವಿಶ್ವಕಪ್‌ ತಂಡದ ಆಟಗಾರನಾಗಿದ್ದ ಜೇಡನ್ ಸೇಲ್ಸ್, ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದು ಟ್ರಿನಿಡ್ಯಾಡ್ & ಟೊಬ್ಯಾಗೋ ತಂಡದ ಮಾರಕ ವೇಗಿಗೆ ಮಣೆ ಹಾಕಲಾಗಿದೆ. ಇದಷ್ಟೇ ಅಲ್ಲದೇ ಅಗ್ರಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ಶಾಯ್ ಹೋಪ್ ಹಾಗೂ ಕೀರನ್ ಪೋವೆಲ್‌ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.

 • South Africa Cricket Coach Mark Boucher disappointed by AB de Villiers decision to remain retired kvn

  CricketMay 19, 2021, 3:51 PM IST

  ಎಬಿ ಡಿವಿಲಿಯರ್ಸ್‌ ಮೇಲೆ ಬೇಸರ ಹೊರಹಾಕಿದ ಮಾರ್ಕ್ ಬೌಷರ್..!

  ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ 2018ರಲ್ಲಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರೊಂದಿಗೆ 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಬಿದ್ದಿತ್ತು. 2018ರ ಮಾರ್ಚ್‌ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿದ್ದರು. ಆಸೀಸ್‌ ವಿರುದ್ದದ ಟೆಸ್ಟ್‌ ಸರಣಿ ಮುಗಿಯುತ್ತಿದ್ದಂತೆಯೇ ತಮ್ಮ 34ನೇ ವಯಸ್ಸಿನಲ್ಲಿಯೇ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಎಲ್ಲರನ್ನು ಅಚ್ಚರಿಗೆ ನೂಕಿದ್ದರು.
   

 • South Africa Former Cricketer AB de Villiers retirement remains final kvn

  CricketMay 18, 2021, 6:11 PM IST

  ಎಬಿಡಿ ಅಭಿಮಾನಿಗಳಿಗೆ ಶಾಕ್‌; ಇನ್ ಯಾವತ್ತೂ ಆಫ್ರಿಕಾ ಪರ ಕ್ರಿಕೆಟ್ ಆಡೊಲ್ಲ ಮಿಸ್ಟರ್ 360..!

  '' ಎಬಿ ಡಿವಿಲಿಯರ್ಸ್‌ ಜತೆ ಮಾತುಕತೆ ಮುಕ್ತಾಯವಾಗಿದೆ. ಎಬಿಡಿ ತಾವು ಈಗಾಗಲೇ ತೆಗೆದುಕೊಂಡಿರುವ ನಿವೃತ್ತಿ ತೀರ್ಮಾನವೇ ಅಂತಿಮ ಎಂದು ಖಚಿತ ಪಡಿಸಿದ್ದಾರೆ'' ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.