ಆರ್‌ಸಿಬಿ ಗೆದ್ದೆ ಗೆಲ್ಲುತ್ತೆ ಅನ್ನೋ ವಿಶ್ವಾಸದಲ್ಲಿದೆ. ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಶುರುಮಾಡಿದ್ದಾರೆ. ಇದರ ನಡುವೆ ರ‍್ಯಾಪ್ ಸಿಂಗರ್ ಡ್ರೇಕ್ ಐಪಿಎಲ್ ಫೈನಲ್ ಪಂದ್ಯಕ್ಕೆ ಬರೋಬ್ಬರಿ 6.4 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ.

ಕೆನಡಾ(ಜೂ.03) ಆರ್‌ಸಿಬಿ ಫೈನಲ್ ಫೀವರ್ ಬೆಂಗಳೂರು, ಕರ್ನಾಟಕ ಅಥವಾ ಭಾರತದಲ್ಲಿ ಮಾತ್ರವಲ್ಲ, ಹಲವು ದೇಶಗಳ ಅಭಿಮಾನಿಗಳು ಈ ಫೈನಲ್ ಪಂದ್ಯದ ಬಗ್ಗೆ ಕಾತರರಾಗಿದ್ದಾರೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮೇಲೆ ಬೆಟ್ಟಿಂಗ್ ಕೂಡ ಜೋರಾಗುತ್ತಿದೆ. ಇದರ ನಡುವೆ ಕೆನಡಾದ ಜನಪ್ರಿಯ ರ‍್ಯಾಪ್ ಸಿಂಗರ್ ಡ್ರೇಕ್ ಆರ್‌ಸಿಬಿ ಮೇಲೆ ಬೆಟ್ಟಿಂಗ್ ಕಟ್ಟಿದ್ದಾರೆ. ಆರ್‌ಸಿಬಿ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಬ್ಬರಿಸಲಿದೆ. ಅದ್ಭುತ ಗೆಲುವಿನ ಮೂಲಕ ಟ್ರೋಫಿ ಗೆಲ್ಲಲಿದೆ ಎಂದು ಡ್ರೇಕ್ ಬರೋಬ್ಬರಿ 6.4 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ.

6.4 ಕೋಟಿ ರೂ ಬೆಟ್ಟಿಂಗ್ ಕಟ್ಟಿ ಡ್ರೇಕ್ ನಿರಾಳ

ಕೆನಡಾ ರ‍್ಯಾಪ್ ಸಿಂಗರ್ ಡ್ರೇಕ್ ಐಪಿಎಲ್ ಅಭಿಮಾನಿ. ಅದರಲ್ಲೂ ಆರ್‌ಸಿಬಿ ಈ ಆ ಆವೃತ್ತಿಯಲ್ಲಿ ನೀಡಿದ ಪ್ರದರ್ಶನದಿಂದ ಡ್ರೇಕ್ ಆತ್ಮವಿಶ್ವಾಸ ಹೆಚ್ಚಿದೆ. ಲೀಗ್ ಹಾಗೂ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದೇ ಗೆಲ್ಲಲಿದೆ ಎಂದು ಕೋಟಿ ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ. ಇಷ್ಟೇ ಅಲ್ಲ, 6.4 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿ ತನಗೆ ಯಾವುದೇ ಆತಂಕವಿಲ್ಲ, ಕಾರಣ ನನ್ನ ಹಣ ಪೈಸಾ ವಸೂಲ್ ಆಗಲಿದೆ ಅನ್ನೋ ವಿಶ್ವಾಸವನ್ನು ಡ್ರೇಕ್ ವ್ಯಕ್ತಪಡಿಸಿದ್ದಾರೆ.

ಗೆದ್ದರೆ ಡ್ರೇಕ್‌ಗೆ 11 ಕೋಟಿ ರೂಪಾಯಿ

ಸಿಂಗರ್ ಡ್ರೇಕ್ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಬೆಟ್ಟಿಂಗ್ ಮಾಹಿತಿ ಬಹಿರಂಗಪಡಿಸಿದ್ದಾರೆ. $750,000 ಅಂದರೆ ಭಾರತೀಯ ರೂಪಾಯಿಗಳಲ್ಲಿ 6.4 ಕೋಟಿ ರೂಪಾಯಿ ಮೊತ್ತವನ್ನು ಬೆಟ್ಟಿಂಗ್ ಕಟ್ಟಿರುವುದಾಗಿ ಹೇಳಿದ್ದಾರೆ. ಆರ್‌ಸಿಬಿ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ. ಕೆನಡಾದ ಕ್ರಿಪ್ಟೋ ಬೆಟ್ಟಿಂಗ್ ವೇದಿಕೆ ಸ್ಟೇಕ್ ಮೂಲಕ ಈ ದೊಡ್ಡ ಮೊತ್ತ ಹಣವನ್ನು ಬೆಟ್ಟಿಂಗ್ ಕಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ 11 ಕೋಟಿ ರೂಪಾಯಿ ಮೊತ್ತವನ್ನು ಡ್ರೇಕ್ ಪಡೆಯಲಿದ್ದಾರೆ.

ಈ ಸಲ ಕಪ್ ನಮ್ದೆ ಎಂದ ಕೆನಡಾ ಸಿಂಗರ್

ಇನ್‌ಸ್ಟಾಗ್ರಾಂ ಮೂಲಕ ತಮ್ಮ ಬೆಟ್ಟಿಂಗ್ ಕುರಿತ ಮಾಹಿತಿ ಬಹಿರಂಗಪಡಿಸಿದ ಡ್ರೇಕ್, ಪೋಸ್ಟ್‌ನಲ್ಲಿ ಈ ಸಲ ಕಪ್ ನಮ್ದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಕೆನಡಾದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಅಭಿಮಾನಿಗಳು ಈಗಾಗಲೇ ಸಂಭ್ರಮ ಶುರುಮಾಡಿದ್ದಾರೆ. ಇದರ ನಡುವೆ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ಕೆನಡಾದಲ್ಲಿ ಸಿಖ್ ಸಮುದಾಯ ಅತೀ ಹೆಚ್ಚು ಸಂಖ್ಯೆಯಲ್ಲಿದೆ. ಹೀಗಾಗಿ ಕೆನಡಾದಲ್ಲೂ ಐಪಿಎಲ್ ಜ್ವರ ಹೆಚ್ಚಾಗಿದೆ. ಪಂಜಾಬ್ ಕಿಂಗ್ಸ್ ಪರ ಭಾರಿ ಜಯಘೋಷಗಳು ಮೊಳಗುತ್ತಿದೆ. ಇದರ ನಡುವೆ ಡ್ರೇಕ್ ಆರ್‌ಸಿಬಿ ಪರವಾಗಿ ದುಬಾರಿ ಮೊತ್ತ ಬೆಟ್ಟಿಂಗ್ ಕಟ್ಟಿ ವಿಶ್ವಾಸದಲ್ಲಿ ಪಂದ್ಯ ವೀಕ್ಷಿಸಲು ಸಜ್ಜಾಗಿದ್ದಾರೆ.

ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ

ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಆದರೆ ಅಹಮ್ಮದಾಬಾದ್‌ನಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಸದ್ಯ ಫೈನಲ್ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಿಧಾನವಾಗಿ ಮಳೆ ಆರಂಭಗೊಂಡಿದೆ. ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವು ಸಾಧ್ಯತೆ ಹೆಚ್ಚು. ಭಾರಿ ಮಳೆಯಿಂದ ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ, ಇಂದಿನ ಪಂದ್ಯ ರದ್ದು ಮಾಡಿ ಮೀಸಲು ದಿನದಲ್ಲಿ ಪಂದ್ಯ ಆಯೋಜಿಸಲಾಗುತ್ತದೆ. ಮಳೆ ಬಂದು ಇಂದಿನ ಪಂದ್ಯ ರದ್ದಾದರೆ ನಾಳೆ (ಜೂನ್ 04) ರ ಮೀಸಲು ದಿನದಲ್ಲಿ ಐಪಿಎಲ್ ಫೈನಲ್ ನಡೆಯಲಿದೆ.