ಮುಂಬೈ(ಮಾ.04): ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕನ್ನಡಿಗ ಸುನಿಲ್ ಜೋಶಿ ಹೆಸರು ಅಂತಿಮಗೊಂಡಿದೆ. ಕ್ರಿಕೆಟ್ ಸಲಹಾ ಸಮಿತಿ(CAC) ಸುನಿಲ್ ಜೋಶಿ ಹೆಸರನ್ನು ಅಂತಿಮಗೊಳಿಸಿ ಬಿಸಿಸಿಐಗೆ ಶಿಫಾರಸು ಮಾಡಿದೆ. 

ಇದನ್ನೂ ಓದಿ: ಭಾರತಕ್ಕೆ ಬಂದಾಗ ನಿಮ್ಮನ್ನು ನೋಡ್ಕೊತೀನಿ ಎಂದ ವಿರಾಟ್ ಕೊಹ್ಲಿ!

ಇಂದು(ಮಾ.04) ನಡೆದ ಸಂದರ್ಶದಲ್ಲಿ ಕ್ರಿಕೆಟ್ ಸಲಹಾ ಸಮಿತಿ, ಕನ್ನಡಿಗ ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ಎಲ್ ಶಿವರಾಮಕೃಷ್ಣನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಒಟ್ಟು 44 ಮಾಜಿ ಹಾಗೂ ದಿಗ್ಗಜ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಸುನಿಲ್ ಜೋಶಿ ಹೆಸರನ್ನು CAC ಅಂತಿಮಗೊಳಿಸಿದೆ.

 

1997ರಿಂದ 2001ರ ವರೆಗೆ ಟೀಂ ಇಂಡಿಯಾ ಪರ ಆಡಿದ್ದ ಹರ್ವಿಂದರ್ ಸಿಂಗ್ ಆಯ್ಕೆ ಸಮಿತಿ ಸದಸ್ಯ ಸ್ಥಾನಕ್ಕೆ ಕ್ರಿಕೆಟ್ ಸಲಹಾ ಸಮಿತಿ ಅಂತಿಮಗೊಳಿಸಿದೆ. CAC ಅಂತಿಮ ಪಟ್ಟಿಯನ್ನು ಬಿಸಿಸಿಐಗೆ ರವಾನಿಸಿದೆ. ಇದೀಗ ಬಿಸಿಸಿಐ  ಶೀಘ್ರದಲ್ಲೇ ಅಧೀಕೃತ ಪ್ರಕಟಣೆ ಹೊರಡಿಸಲಿದೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"