ವಿಲೇಜ್ ಲೀಗ್ ಕ್ರಿಕೆಟ್ ಟೂರ್ನಿಯೊಂದರಲ್ಲಿ ಫನ್ನಿ ಕ್ಯಾಚ್ಕೈಚೆಲ್ಲಿದ ಕ್ಯಾಚ್ ಎರಡನೇ ಪ್ರಯತ್ನದಲ್ಲಿ ಹಿಡಿದು ಮಿಂಚಿದ ಅಲೆಕ್ಸ್ ರೈಡರ್ಅಲೆಕ್ಸ್ ರೈಡರ್ ಹಿಡಿದ ಕ್ಯಾಚ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಬೆಂಗಳೂರು(ಜೂ.21): ಕ್ರಿಕೆಟ್‌ನಲ್ಲಿ ಕ್ಯಾಚ್ ಹಿಡಿಯಬೇಕಿದ್ದರೆ ಏಕಾಗ್ರತೆ ಹಾಗೂ ಅಭ್ಯಾಸ ಸಾಕಷ್ಟು ಮಹತ್ವದ್ದಾಗುತ್ತದೆ. ಕ್ಯಾಚ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸುತ್ತವೇ ಎನ್ನುವ ಮಾತೊಂದು ಇದೆ. ಅದೇ ರೀತಿ ವಿಶ್ವದ ಶ್ರೇಷ್ಟ ಫೀಲ್ಡರ್‌ಗಳು ಕೂಡಾ ಒಮ್ಮೊಮ್ಮೆ ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇಲ್ಲೊಬ್ಬ ಆಸಾಮಿ ಹೀಗೂ ಕೈಚೆಲ್ಲಿದ್ದ ಕ್ಯಾಚನ್ನು ಹಿಡಿಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು, 16 ವರ್ಷದ ಕ್ರಿಕೆಟ್ ಆಟಗಾರ ಅಲೆಕ್ಸ್ ರೈಡರ್ ಹಿಡಿದ ಕ್ಯಾಚ್ ಈಗ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೋಡುಗರು ಹೊಟ್ಟೆ ಹುಣ್ಣಾಗುವಂತ ನಗು ಬರುವಂತೆ ಮಾಡಿದೆ. ಅಲೆಕ್ಸ್ ರೈಡರ್ ಹಿಡಿದ ಕ್ಯಾಚ್ ಅನ್ನು greatest dropped catch ever ಎಂದು ಬಣ್ಣಿಸಲಾಗುತ್ತಿದೆ. ವಿಲೇಜ್ ಲೀಗ್ ಕ್ರಿಕೆಟ್ ಟೂರ್ನಿಯೊಂದರಲ್ಲಿ ಅಲ್ಡವಿಕ್ ಕ್ರಿಕೆಟ್ ಕ್ಲಬ್ ತಂಡವನ್ನು ಪ್ರತಿನಿಧಿಸುತ್ತಿರುವ ಅಲೆಕ್ಸ್ ರೈಡರ್, ಲಿಂಗ್‌ಫೀಲ್ಡ್ ಕ್ರಿಕೆಟ್ ಕ್ಲಬ್ ಎದುರಿನ ಪಂದ್ಯದಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿ ಆ ಬಳಿಕ ರೋಚಕವಾಗಿ ಕ್ಯಾಚ್ ಪಡೆದು ಗಮನ ಸೆಳೆದಿದ್ದಾರೆ.
ಎದುರಾಳಿ ಬ್ಯಾಟರ್ ಬಾರಿಸಿದ ಚೆಂಡನ್ನು ಸುಲಭವಾಗಿ ಹಿಡಿಯುವ ಅವಕಾಶವಿದ್ದರೂ ಸಹಾ ಅದನ್ನು ಕೈಚೆಲ್ಲಿದ ರೈಡರ್, ಚೆಂಡು ನೆಲ ಸೇರುವ ಮುನ್ನ ಕಾಲಿನಿಂದ ಒದ್ದು ಎರಡನೇ ಪ್ರಯತ್ನದಲ್ಲಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಯಾಚ್ ಹಿಡಿಯುವ ವಿಡಿಯೋ ಸ್ಟಂಪ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಂಡದ ಸಹ ಆಟಗಾರರು ಜೋರಾಗಿ ನಕ್ಕು ಸಂತಸ ವ್ಯಕ್ತಪಡಿಸಿದ್ದಾರೆ.
Aus vs SL: ಅಂಪೈರ್ ಎನ್ನುವುದನ್ನೂ ಮರೆತು ಕ್ಯಾಚ್ ಹಿಡಿಯಲು ಮುಂದಾದ ಧರ್ಮಸೇನಾ..! ವಿಡಿಯೋ ವೈರಲ್
ಈ ವಿಡಿಯೋ ಕ್ಲಿಪ್ ಅನ್ನು 'That's so Village' ಎನ್ನುವ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಮಂದಿ ಟ್ವಿಟರ್‌ನಲ್ಲಿ ವೀಕ್ಷಿಸಿದ್ದಾರೆ.
ಈ ವಿಡಿಯೋ ವೀಕ್ಷಿಸಿದ ನೆಟ್ಟಿಗನೊಬ್ಬ, ಜೀವನದಲ್ಲಿ ಮತ್ತೊಂದು ಅವಕಾಶ ಸಿಕ್ಕಿದರೇ ಈ ರೀತಿಯಲ್ಲಿ ಹಿಡಿದುಕೊಳ್ಳಬೇಕು ಎಂದು ಅಲೆಕ್ಸ್ ರೈಡರ್ ಹಿಡಿದ ಕ್ಯಾಚ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ
ಅಂಪೈರ್ ಎನ್ನುವುದನ್ನು ಮರೆತು ಕ್ಯಾಚ್ ಹಿಡಿಯಲು ಮುಂದಾಗಿದ್ದ ಕುಮಾರ ಧರ್ಮಸೇನಾ
ಕೊಲಂಬೊ: ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಅಲೆಕ್ಸ್ ಕ್ಯಾರಿ, ಚೆಂಡನ್ನು ಲೆಗ್ ಸ್ಕ್ವೇರ್‌ನತ್ತ ಬಾರಿಸಿದರು. ಈ ವೇಳೆ ಲೆಗ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಧರ್ಮಸೇನಾ ತಮ್ಮತ್ತ ಬರುತ್ತಿದ್ದ ಚೆಂಡನ್ನು ಕ್ಯಾಚ್ ಹಿಡಿಯಲು ಮುಂದಾಗಿ ಕೊನೆಯ ಕ್ಷಣದಲ್ಲಿ ಸುಮ್ಮನಾದರು. ಚೆಂಡು ತಮ್ಮತ್ತ ಬರುತ್ತಿದ್ದಂತೆಯೇ ಕ್ಯಾಚ್‌ಗೆ ಯತ್ನಿಸಿದ್ದ ಧರ್ಮಸೇನಾಗೆ ತಾವು ಆಟಗಾರನಲ್ಲ ಬದಲಾಗಿ ಅಂಪೈರ್ ಎಂದು ಕೊನೆಯ ಕ್ಷಣದಲ್ಲಿ ಜ್ಞಾಪಕ ಬಂದಂತೆ ಕಂಡುಬಂದಿದೆ. ಚೆಂಡು ಹಿಡಿಯುವ ಕೊನೆಯ ಕ್ಷಣದಲ್ಲಿ ಧರ್ಮಸೇನಾ ಹಿಂದೆ ಸರಿದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
