Asianet Suvarna News Asianet Suvarna News

ಬರ್ತ್‌ ಡೇ ಬಾಯ್ ಕೊಹ್ಲಿಗೆ ಸೆಂಚುರಿ ಸಂಭ್ರಮ; ಈಡನ್‌ ಗಾರ್ಡನ್ಸ್‌ನಲ್ಲಿ ತೆಂಡುಲ್ಕರ್ ದಾಖಲೆ ಸರಿಸಮ..!

ಸಚಿನ್ ತೆಂಡುಲ್ಕರ್ 463 ಪಂದ್ಯಗಳ 452 ಇನಿಂಗ್ಸ್‌ಗಳನ್ನಾಡಿ 49 ಏಕದಿನ ಶತಕ ಸಿಡಿಸದರೆ, ಆಧುನಿಕ ಕ್ರಿಕೆಟ್‌ನ ರನ್ ಮಷೀನ್ ವಿರಾಟ್ ಕೊಹ್ಲಿ ಕೇವಲ 289 ಪಂದ್ಯಗಳ 277 ಇನಿಂಗ್ಸ್‌ಗಳನ್ನಷ್ಟೇ ಆಡಿ 49ನೇ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.

Birthday Boy Virat Kohli hits 49th ODI Century equals Sachin Tendulkar All time record kvn
Author
First Published Nov 5, 2023, 5:45 PM IST

ಕೋಲ್ಕತಾ(ನ.05): ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ತಮ್ಮ ಹುಟ್ಟುಹಬ್ಬದಂದೇ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ 49ನೇ ಏಕದಿನ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದಶಕಗಳ ಕಾಲ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅತಿಹೆಚ್ಚು ಏಕದಿನ ಶತಕ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಸಚಿನ್ ತೆಂಡುಲ್ಕರ್ 463 ಪಂದ್ಯಗಳ 452 ಇನಿಂಗ್ಸ್‌ಗಳನ್ನಾಡಿ 49 ಏಕದಿನ ಶತಕ ಸಿಡಿಸಿದರೆ, ಆಧುನಿಕ ಕ್ರಿಕೆಟ್‌ನ ರನ್ ಮಷೀನ್ ವಿರಾಟ್ ಕೊಹ್ಲಿ ಕೇವಲ 289 ಏಕದಿನ ಪಂದ್ಯಗಳ 277 ಇನಿಂಗ್ಸ್‌ಗಳನ್ನಷ್ಟೇ ಆಡಿ 49ನೇ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ತಮ್ಮ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಬರ್ತ್‌ಡೇ ಬಾಯ್ ವಿರಾಟ್ ಕೊಹ್ಲಿ, ಕಗಿಸೋ ರಬಾಡ ಬೌಲಿಂಗ್‌ನಲ್ಲಿ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ರನ್ ಖಾತೆ ತೆರೆದರು. ಆರಂಭದಿಂದಲೇ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಹುಟ್ಟುಹಬ್ಬದಂದೇ 50+ ರನ್ ಬಾರಿಸಿದ ಭಾರತದ ಆರನೇ ಬ್ಯಾಟರ್ ಎನಿಸಿಕೊಂಡರು. 

ಹ್ಯಾಪಿ ಬರ್ತ್ ಡೇ ವಿರಾಟ್ ಕೊಹ್ಲಿ..! ಬರ್ತ್ ಡೇ ದಿನ ಬರುತ್ತಾ 49ನೇ ಶತಕ..?

ಏಕದಿನ ಕ್ರಿಕೆಟ್‌ನಲ್ಲಿ ಹುಟ್ಟುಹಬ್ಬದಂದು 50+ ರನ್ ಬಾರಿಸಿದ ಭಾರತ ಬ್ಯಾಟರ್‌ಗಳಿವರು:

ಸಚಿನ್ ತೆಂಡುಲ್ಕರ್(25ನೇ ಹುಟ್ಟುಹಬ್ಬ)
ವಿನೋದ್ ಕಾಂಬ್ಳಿ(21ನೇ ಹುಟ್ಟುಹಬ್ಬ)
ನವಜೋತ್ ಸಿಂಗ್ ಸಿಧು(31ನೇ ಹುಟ್ಟುಹಬ್ಬ)
ಇಶಾನ್ ಕಿಶನ್(23ನೇ ಹುಟ್ಟುಹಬ್ಬ)
ಯೂಸುಫ್ ಪಠಾಣ್(26ನೇ ಹುಟ್ಟುಹಬ್ಬ)
ವಿರಾಟ್ ಕೊಹ್ಲಿ(35ನೇ ಹುಟ್ಟುಹಬ್ಬ)

ಅರ್ಧಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಕೊಂಚ ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಇದರ ಬೆನ್ನಲ್ಲೇ ದೊಡ್ಡ ಹೊಡೆತಕ್ಕೆ ಯತ್ನಿಸಿ ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ವಿಕೆಟ್ ಒಪ್ಪಿಸಿದರು. ಇದಾದ ನಂತರವಂತೂ ಕೆಲ ಓವರ್‌ಗಳಲ್ಲಿ ಕೊಹ್ಲಿ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಕೊಹ್ಲಿ 62ರಿಂದ 92 ರನ್ ಬಾರಿಸಲು ಬರೋಬ್ಬರಿ 35 ಎಸೆತಗಳನ್ನು ತೆಗೆದುಕೊಂಡರು. ಅಂತಿಮವಾಗಿ ವಿರಾಟ್ ಕೊಹ್ಲಿ 119 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ ಮೂರಂಕಿ ಮೊತ್ತ ದಾಖಲಿಸಿ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು. ಅಂತಿಮವಾಗಿ ವಿರಾಟ್ ಕೊಹ್ಲಿ 121 ಎಸೆತಗಳನ್ನು ಎದುರಿಸಿ 101 ರನ್ ಗಳಿಸಿ ಅಜೇಯರಾಗುಳಿದರು.

ತಮ್ಮ ಜನ್ಮದಿನದಂದೇ ಶತಕ ಸಿಡಿಸಿದ ಬ್ಯಾಟರ್‌ಗಳಿವರು

ವಿನೋದ್ ಕಾಂಬ್ಳಿ(21ನೇ ಬರ್ತ್‌ಡೇ)
ಸಚಿನ್ ತೆಂಡುಲ್ಕರ್(25ನೇ ಬರ್ತ್‌ಡೇ)
ಸನತ್ ಜಯಸೂರ್ಯ(39ನೇ ಬರ್ತ್‌ಡೇ)
ರಾಸ್ ಟೇಲರ್(27ನೇ ಬರ್ತ್‌ಡೇ)
ಟಾಮ್ ಲೇಥಮ್(30ನೇ ಬರ್ತ್‌ಡೇ)
ಮಿಚೆಲ್ ಮಾರ್ಷ್(32ನೇ ಬರ್ತ್‌ಡೇ)
ವಿರಾಟ್ ಕೊಹ್ಲಿ(35ನೇ ಬರ್ತ್‌ಡೇ)
 

Follow Us:
Download App:
  • android
  • ios