Asianet Suvarna News Asianet Suvarna News

ಕೊಹ್ಲಿ ತೂಕವೆಷ್ಟು? Google ನಲ್ಲಿ ತಮ್ಮ ಬಗ್ಗೆ ಅತಿಹೆಚ್ಚು ಹುಡುಕಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಕಿಂಗ್ ಕೊಹ್ಲಿ..!

34ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ನಾಯಕ ವಿರಾಟ್ ಕೊಹ್ಲಿ
ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡಿದ ಮಾಜಿ ನಾಯಕ
ಗೂಗಲ್‌ನಲ್ಲಿ ಕೊಹ್ಲಿ ಬಗ್ಗೆ ಹುಡುಕಿದ ಪ್ರಶ್ನೆಗಳಿಗೆ ಸ್ವತಃ ಕೊಹ್ಲಿ ಉತ್ತರ

Birthday Boy Virat Kohli Answers Most Googled Questions About Him Video goes viral kvn
Author
First Published Nov 5, 2022, 4:27 PM IST

ಸಿಡ್ನಿ(ನ.05): ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು(ನ.05, 2022) ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ, ಚುಟುಕು ಕ್ರಿಕೆಟ್ ವಿಶ್ವಕಪ್ ಆಡಲು ಕಾಂಗರೂ ನಾಡಿನಲ್ಲಿದ್ದು, ತಮ್ಮ ಹುಟ್ಟುಹಬ್ಬವನ್ನು ಟೀಂ ಇಂಡಿಯಾ ಸಹ ಆಟಗಾರರ ಜತೆ ಆಚರಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಪ್ರಸಾರದ ಹಕ್ಕನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಇದೀಗ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ವಿರಾಟ್  ಹಲವು ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.

ಹೌದು, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸರ್ಚ್‌ ಇಂಜಿನ್ ಗೂಗಲ್‌ನಲ್ಲಿ ತಮ್ಮ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಅತಿಹೆಚ್ಚು ಹುಡುಕಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮೊದಲಿಗೆ ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ(G.O.A.T)ನೇ ಎನ್ನುವ ಪ್ರಶ್ನೆಯಿಂದ ಆರಂಭವಾಗಿದೆ. ಇದಕ್ಕೆ ಕೊಹ್ಲಿ, ಇಲ್ಲ, ನನಗೆ ಹಾಗೆ ಅನಿಸುತ್ತಿಲ್ಲ. ನನ್ನನ್ನು ನಾನು G.O.A.T ಎಂದು ಭಾವಿಸುವುದಿಲ್ಲ. ನನ್ನ ಪ್ರಕಾರ ಸಚಿನ್ ತೆಂಡುಲ್ಕರ್ ಹಾಗೂ ವಿವಿನ್ ರಿಚರ್ಡ್‌ಸನ್ ಇವರಿಬ್ಬರೇ ಕ್ರಿಕೆಟ್‌ನ G.O.A.T ಎಂದಿದ್ದಾರೆ.

ವಿಡಿಯೋದಲ್ಲಿ ಕಂಡು ಬಂದ ಇತರೇ ಕುತೂಹಲಕಾರಿ ಪ್ರಶ್ನೆಗಳು ಹೀಗಿವೆ..

 

ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿಯ ನೆಚ್ಚಿನ ಮೈದಾನ?
ದ ಅಡಿಲೇಡ್ ಓವಲ್

ವಿರಾಟ್ ಕೊಹ್ಲಿಯ ನೆಚ್ಚಿನ ಸಿಹಿತಿಂಡಿ ಯಾವುದು?
ದಕ್ಷಿಣ ಆಫ್ರಿಕಾದಲ್ಲಿ ಮಾಡಲಾಗುವ ಮಾಲ್ವಾ ಪುಡ್ಡಿಂಗ್

Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ..!

ವಿರಾಟ್ ಕೊಹ್ಲಿಯ ನೆಚ್ಚಿನ ದೇಸಿ ಸಿಹಿತಿಂಡಿ ಯಾವುದು?
ಕ್ಯಾರೆಟ್‌ನಿಂದ ಮಾಡಲಾದ ಹಲ್ವಾ

ವಿರಾಟ್ ಕೊಹ್ಲಿ ಎತ್ತರ ಹಾಗೂ ತೂಕವೆಷ್ಟು..?
ಎತ್ತರ 5 ಅಡಿ 11 ಇಂಚು, ತೂಕ 74.5 ರಿಂದ 75 ಕೆಜಿ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ 4 ಪಂದ್ಯಗಳಿಂದ 3 ಅರ್ಧಶತಕ ಸಹಿತ 220 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅದರಲ್ಲೂ ಅಕ್ಟೋಬರ್ 23ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. 

Follow Us:
Download App:
  • android
  • ios