Asianet Suvarna News Asianet Suvarna News

CWG 2022 ಕಾಮನ್‌ವೆಲ್ತ್‌ ಗೇಮ್ಸ್‌ ಕ್ರಿಕೆಟ್‌: Ind vs Pak ಒಂದೇ ಗುಂಪಲ್ಲಿ ಭಾರತ-ಪಾಕ್‌!

* 2022ರ ಕಾಮನ್‌ವೆಲ್ತ್‌ ಗೇಮ್ಸ್‌ನ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ

* ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಪಾಕಿಸ್ತಾನ ಹಾಗೂ ಭಾರತ ತಂಡ

* ಕಾಮನ್‌ವೆಲ್ತ್‌ ಗೇಮ್ಸ್ ಉದ್ಘಾಟನಾ ಪಂದ್ಯದಲ್ಲಿ ಭಾರತ-ಆಸೀಸ್‌ ಮುಖಾಮುಖಿ

Birmingham Commonwealth Games 2022 India vs Pakistan Womens cricket match date announced kvn
Author
Bengaluru, First Published Nov 13, 2021, 9:13 AM IST

ಲಂಡನ್‌(ನ.13): 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ (Commonwealth Games 2022) ಮಹಿಳಾ ಟಿ20 ಕ್ರಿಕೆಟ್‌ (Women's T20 Cricket) ನಡೆಯಲಿದ್ದು, ಶುಕ್ರವಾರ ವೇಳಾಪಟ್ಟಿ ಪ್ರಕಟಗೊಂಡಿತು. ಎಡ್ಜ್‌ ಬಾಸ್ಟನ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಜುಲೈ 29ರಿಂದ ಆಗಸ್ಟ್ 07ರವರೆಗೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ.

ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜುಲೈ 31ರಂದು ಸೆಣಸಲಿವೆ. ಇದೇ ಗುಂಪಿನಲ್ಲಿ ಆಸ್ಪ್ರೇಲಿಯಾ ಹಾಗೂ ಬಾರ್ಬೊಡಾಸ್‌ ತಂಡಗಳು ಸಹ ಇವೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜುಲೈ 29ರಂದು ಆಸ್ಪ್ರೇಲಿಯಾ ವಿರುದ್ಧ ಆಡಲಿದ್ದು, ಆಗಸ್ಟ್‌ 3ರಂದು ಬಾರ್ಬೊಡಾಸ್‌ ವಿರುದ್ಧ ಸೆಣಸಲಿದೆ. ಇನ್ನು ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾಕ್ಕೆ ಸ್ಥಾನ ನೀಡಲಾಗಿದ್ದು, ಮತ್ತೊಂದು ಸ್ಥಾನ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡಕ್ಕೆ ಸಿಗಲಿದೆ. ಚಿನ್ನ ಹಾಗೂ ಕಂಚಿನ ಪದಕದ ಪಂದ್ಯಗಳು ಆಗಸ್ಟ್‌ 7ರಂದು ನಡೆಯಲಿವೆ.

ಕಾಮನ್‌ವೆಲ್ತ್‌ ಗೇಮ್ಸ್‌‌ 2022: ಭಾರತ ಸೇರಿ 8 ಕ್ರಿಕೆಟ್ ತಂಡಗಳು ಕಣಕ್ಕೆ

ಕಳೆದ ಕೆಲ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್‌ ಅದ್ಭುತ ಬೆಳವಣಿಗೆಯನ್ನು ಸಾಧಿಸಿದೆ. ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಆಯೋಜನೆಗೊಂಡಿರುವುದು ಮಹಿಳಾ ಕ್ರಿಕೆಟ್‌ ತಂಡದ ಬೆಳವಣಿಗೆಯ ಮತ್ತೊಂದು ಮಜಲು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ಕಾರ್ಯನಿರ್ವಾಹಕಾಧಿಕಾರಿ ಜೆಫ್‌ ಅಲಾರ್ಡೈನ್‌ ಅಭಿಪ್ರಾಯಪಟ್ಟಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ನ ಉದ್ಘಾಟನಾ ಕ್ರಿಕೆಟ್ ಪಂದ್ಯದಲ್ಲಿ 2020ರ ಐಸಿಸಿ ಟಿ20 ವಿಶ್ವಕಪ್‌ ವಿನ್ನರ್ ಆಸ್ಟ್ರೇಲಿಯಾ ಹಾಗೂ ರನ್ನರ್ ಅಪ್ ಭಾರತ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ಗೆ ಅವಕಾಶ ಕಲ್ಪಿಸಿದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ (Birmingham Commonwealth Games 2022) ಆಯೋಜರಿಗೆ ಧನ್ಯವಾದಗಳನ್ನು ಜೆಫ್‌ ಅಲಾರ್ಡೈನ್‌ ಅರ್ಪಿಸಿದ್ದಾರೆ. 

ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಂದೆ ಸರಿದ ಭಾರತ ಹಾಕಿ ತಂಡ..!

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಟಿ20 ಕ್ರಿಕೆಟ್ ಮಾದರಿಯನ್ನು ಪರಿಚಯಿಸಲಾಗಿದೆ. ಅದೇ ರೀತಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ತಂಡಗಳ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಮೊದಲು 1998ರಲ್ಲಿ ಕೌಲಲಾಂಪುರದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 50 ಓವರ್‌ಗಳ ಕ್ರಿಕೆಟ್ ಟೂರ್ನಿ ನಡೆದಿತ್ತು.

ಸೆಮೀಸ್‌ ಸೋಲು ನಮಗೆ ಪಾಠವಾಗಬೇಕು: ಆಜಂ

ದುಬೈ: ತಂಡದ ಸೋಲಿಗೆ ಯಾರೂ ಕೂಡಾ ಯಾವ ಆಟಗಾರನನ್ನೂ ಗುರಿಯಾಗಿಸಬಾರದು ಎಂದು ಪಾಕಿಸ್ತಾನದ ನಾಯಕ ಬಾಬರ್‌ ಆಜಂ (Babar Azam) ತಮ್ಮ ಸಹ ಆಟಗಾರರರಿಗೆ ಕಿವಿ ಮಾತು ಹೇಳಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ ತಂಡವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ 5 ವಿಕೆಟ್‌ಗಳ ಅಂತರದ ರೋಚಕ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. 

T20 World Cup: ಕ್ಯಾಚ್‌ ಬಿಟ್ಟ ಹಸನ್ ಅಲಿ ವ್ಯಾಪಕ ಟ್ರೋಲ್; ಮ್ಯಾಚ್ ಫಿಕ್ಸಿಂಗ್ ಆರೋಪ..!

ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೋಲಿನ ಬಳಿಕ ಡ್ರೆಸ್ಸಿಂಗ್‌ ಕೋಣೆಯಲ್ಲಿ ಮಾತನಾಡಿದ ಆಜಂ, ‘ಎಲ್ಲರೂ ಸೋಲಿನ ನೋವಿನಲ್ಲಿದ್ದೀರಿ. ನಾವು ಎಲ್ಲಿ ಎಡವಿದ್ದೇವೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ನಮ್ಮ ತಪ್ಪುಗಳಿಂದ ಕಲಿಯಬೇಕು. ನಮ್ಮಲ್ಲಿರುವ ಒಗ್ಗಟ್ಟು ಯಾವತ್ತೂ ಮುರಿಯಬಾರದು. ಯಾರೂ ಕೂಡಾ ಯಾವುದೇ ಆಟಗಾರನ ಪ್ರದರ್ಶನವನ್ನು ಗುರಿಯಾಗಿಸಿ ಅವರತ್ತ ಕೈ ತೋರಿಸಬಾರದು. ಈ ತಂಡ ಕಟ್ಟಲು ತುಂಬಾ ಕಷ್ಟಪಟ್ಟಿದ್ದೇವೆ. ಪ್ರಯತ್ನ ಮಾತ್ರ ನಮ್ಮ ಕೈಯಲ್ಲಿದೆ, ಫಲಿತಾಂಶವಲ್ಲ’ ಎಂದಿದ್ದಾರೆ.
 

Follow Us:
Download App:
  • android
  • ios