2022ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಜರುಗಲಿದ್ದು, ಭಾರತ ಸೇರಿದಂತೆ 8 ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ದುಬೈ(ಏ.27): 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನ ಮಹಿಳಾ ಟಿ20 ಕ್ರಿಕೆಟ್‌ ಸ್ಪರ್ಧೆಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ ಎಂದು ಸೋಮವಾರ ಆಯೋಜಕರು ತಿಳಿಸಿದರು. 

ಐಸಿಸಿ ರಾರ‍ಯಂಕಿಂಗ್‌ ಆಧಾರದಲ್ಲಿ ಭಾರತ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆತಿಥೇಯ ಇಂಗ್ಲೆಂಡ್‌ ಹಾಗೂ ಕೆರಿಬಿಯನ್‌ ರಾಷ್ಟ್ರಗಳ ಪೈಕಿ ಒಂದು ತಂಡ ನೇರ ಅರ್ಹತೆ ಪಡೆದಿವೆ. ಕಾಮನ್‌ವೆಲ್ತ್‌ನಲ್ಲಿ ಕೆರಿಬಿಯನ್‌ ರಾಷ್ಟ್ರಗಳು ಪ್ರತ್ಯೇಕವಾಗಿ ಸ್ಪರ್ಧಿಸಲಿರುವ ಕಾರಣ, ವೆಸ್ಟ್‌ಇಂಡೀಸ್‌ ಹೆಸರಿನಲ್ಲಿ ತಂಡ ಆಡುವುದಿಲ್ಲ. 

Scroll to load tweet…

8ನೇ ತಂಡಕ್ಕಾಗಿ ಅರ್ಹತಾ ಟೂರ್ನಿ ನಡೆಯಲಿದ್ದು, 8 ತಂಡಗಳ ಪೈಕಿ ಒಂದಕ್ಕೆ ಅರ್ಹತೆ ಸಿಗಲಿದೆ. ಅರ್ಹತಾ ಟೂರ್ನಿಯಲ್ಲಿ ಆಡುವ ರಾಷ್ಟ್ರಗಳು ಯಾವುವು ಎನ್ನುವುದು ಸದ್ಯದಲ್ಲೇ ಅಂತಿಮಗೊಳ್ಳಲಿದೆ. ಈ ಕ್ರಿಕೆಟ್‌ ಪಂದ್ಯಾವಳಿಯು ಐತಿಹಾಸಿಕ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿದ್ದು, ಪಂದ್ಯಾವಳಿಯ ವೀಕ್ಷಣೆಗೆ ಈ ವರ್ಷಾಂತ್ಯದ ವೇಳೆಗೆ ಟಿಕೆಟ್‌ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ವರದಿಯಾಗಿದೆ.

2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಟೀಂ ಇಂಡಿಯಾ ರೆಡಿ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಮ್ಮ ಕ್ರಿಕೆಟ್ ಅರ್ಹತೆ ಗಿಟ್ಟಿಸಿಕೊಂಡಿದ್ದು ಖುಷಿಯ ಸಂಗತಿಯಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾವು ಫೈನಲ್‌ ಪ್ರವೇಶಿಸಿದ್ದೆವು. ಅದೇ ರೀತಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ನಾವು ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿರುವುದಾಗಿ ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.