ಕೋಲ್ಕತಾ(ಏ.07): ನಿರಂತರವಾಗಿ ಬಯೋ ಬಬಲ್‌ನೊಳಗೆ ಇದ್ದುಕೊಂಡು, ಕ್ರಿಕೆಟ್‌ ಆಡುವುದು ಬಹಳ ಕಷ್ಟ. ಆದರೆ ಭಾರತೀಯ ಕ್ರಿಕೆಟಿಗರಿಗೆ ತಾಳ್ಮೆ ಜಾಸ್ತಿ ಇದೆ.

ಮಾನಸಿಕ ಆರೋಗ್ಯದ ವಿಚಾರದಲ್ಲಿ ಆಸ್ಪ್ರೇಲಿಯಾ, ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಹೋಲಿಸಿದರೆ ಭಾರತೀಯರು ಹೆಚ್ಚು ಸದೃಢರಾಗಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

ಕೋವಿಡ್‌ನಿಂದಾಗಿ ಆಟಗಾರರ ಜೀವನ ಕೇವಲ ಹೋಟೆಲ್‌ ಹಾಗೂ ಕ್ರೀಡಾಂಗಣಗಳಿಗಷ್ಟೇ ಸೀಮಿತವಾಗಿದೆ. ಯಾರನ್ನೂ ಭೇಟಿಯಾಗುವಂತಿಲ್ಲ.

ಎಲ್ಲೂ ಹೋಗುವಂತಿಲ್ಲ ಎನ್ನುವ ನಿಯಮ ಮಾನಸಿಕವಾಗಿ ಕುಗ್ಗಿಸಲಿದೆ ಎಂದು ಅಭಿಪ್ರಾಯಿಸಿರುವ ಗಂಗೂಲಿ, ಭಾರತೀಯ ಆಟಗಾರರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.