ಮೆಲ್ಬೋರ್ನ್(ಡಿ.29): ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿ ರೋಚಕತ ಹೆಚ್ಚಿಸುತ್ತಿದೆ. ಮೆಲ್ಬೋರ್ನ್ ರೆನಿಗೇಡ್ಸ್ ಹಾಗೂ ಆಡಿಲೇಡ್ ಸ್ಟೈಕರ್ಸ್ ನಡುವಿನ ಪಂದ್ಯದಲ್ಲಿ ಹಾಸ್ಯ ಘಟನೆ ನಡೆದಿದೆ. ರಶೀದ್ ಖಾನ್ ಬೌಲಿಂಗ್‌ನಲ್ಲಿ ರೆನಿಗೇಡ್ಸ್ ತಂಡದ ಬ್ಯೂ ವೆಬ್‌ಸ್ಟರ್‌ ಡಿಫೆನ್ಸ್ ಮಾಡಿದರು. ಎಲ್‌ಬಿ ಮನವಿ ಮಾಡಿದ ರಶೀದ್ ಖಾನ್‌ಗೆ ಅಂಪೈರ್ ಗ್ರೆಗ್ ಡೇವಿಡ್ಸನ್ ಔಟ್ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ರಜಾ ದಿನ ಕೆಲಸ ಇಷ್ಟವಿಲ್ಲ; ಗಂಗೂಲಿಗೆ ಫ್ಯಾನ್ಸ್ ಭರ್ಜರಿ ಪ್ರತಿಕ್ರಿಯೆ!

ಅಂಪೈರ್ ಗ್ರೆಗ್ ಔಟ್ ತೀರ್ಪು ನೀಡಲು ಕೈ ಎತ್ತಿತ್ತಿದ್ದಾರೆ. ಅಷ್ಟರಲ್ಲೇ ಆಡಿಲೇಡ್ ಸ್ಟ್ರೈಕರ್ಸ್ ತಂಡ ಸಂಭ್ರಮಾಚರಣೆಯಲ್ಲಿ ಮುಳುಗಿತು. ಇತ್ತ ಸ್ಪಿನ್ನರ ರಶೀದ್ ಖಾನ್ ಡ್ಯಾನ್ಸ್ ಮೂಲಕ ಸಂಭ್ರಮಾಚರಣೆ ಆರಂಭಿಸಿದರು. ಇತ್ತ ಕೈ ಎತ್ತಿದ ಅಂಪೈರ್ ಕೊನೆ ಕ್ಷಣದಲ್ಲಿ ನಾಟೌಟ್ ಎಂದು ನಿರ್ಧಾರಕ್ಕೆ ಬಂದರು. ಇಷ್ಟೇ ಅಲ್ಲ ಎತ್ತಿದ ಕೈಯಿಂದ ಮೂಗು ಸವರಿ ತಪ್ಪನ್ನು ಮರೆಮಾಚಿದರು.

 

ಇದನ್ನೂ ಓದಿ: KPL ಬೆಟ್ಟಿಂಗ್ ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ! ಕ್ರಿಕೆಟ್ ಪ್ರಿಯರು ತತ್ತರ.

ಅಂಪೈರ್ ಔಟ್ ನೀಡಿದ್ದಾರೆ ಎಂದು ಆಡಿಲೇಡ್ ತಂಡ ಸಂಭ್ರಮ ಶುರು ಮಾಡಿತ್ತು.. ಇತ್ತ ಅಂಪೈರ್ ನಾನು ಔಟ್ ನೀಡಿಲ್ಲ. ನಾಟೌಟ್, ನಾಟೌಟ್ ಎಂದು ಆಡಿಲೇಡ್ ತಂಡ ಆಟಗಾರರನ್ನು ಕರೆದು ಕೂಗಿ ಕೂಗೇ ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.