ಕ್ಲಾಸಿಕ್ ಬ್ಯಾಟರ್​. ವಿಕೆಟ್ ಮುಂದೆ ಮಾತ್ರವಲ್ಲ. ವಿಕೆಟ್ ಹಿಂದೆಯೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಕನ್ನಡಿಗ ಕೆ ಎಲ್ ರಾಹುಲ್‌ಗೆ ಇದೀಗ ಬಿಸಿಸಿಐ ಶಾಕ್ ನೀಡಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

ಬೆಂಗಳೂರು: ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆದ್ಮೇಲೆ ಕೆಲ ಆಟಗಾರರಿಗೆ ಅಚ್ಚರಿಯಾದ್ರೆ, ಕೆಲ ಆಟಗಾರರಿಗೆ ಆಘಾತವಾಗುತ್ತಿದೆ. ಕ್ಯಾಪ್ಟನ್ಸಿ ರೇಸ್​ನಲ್ಲಿದ್ದವನಿಗೆ ಕ್ಯಾಪ್ಟನ್ಸಿ ಸಿಗಲ್ಲ. ಆಟಗಾರನಾಗಿ ಸ್ಥಾನ ಪಡೆಯಬೇಕಿದ್ದವನಿಗೆ ಟೀಮ್‌ನಲ್ಲಿ ಪ್ಲೇಸೇ ಇಲ್ಲ. ವೈಸ್ ಕ್ಯಾಪ್ಟನ್ಸಿ ರೇಸ್​ನಲ್ಲಿದ್ದವನು ಕೇವಲ ಆಟಗಾರನಾಗಿ ಸ್ಥಾನ ಪಡೆದಿದ್ದಾನೆ. ಏನಿದು. ಎಲ್ಲಾ ಗೊಂದಲವಾಗಿದೆ ಅಂತ ಕನ್ಫ್ಯೂಸ್ ಆಗ್ತಿದ್ಯಾ..? ಈ ಸ್ಟೋರಿ ನೋಡಿ ಎಲ್ಲದಕ್ಕೂ ಕ್ಲಾರಿಟಿ ಸಿಗಲಿದೆ.

ರಾಹುಲ್ ಕೊನೆಯ ಆಸೆಯೂ ನುಚ್ಚುನೂರು..!

ಕೆ ಎಲ್ ರಾಹುಲ್​​ ಸ್ಟೈಲೀಶ್​ ಬ್ಯಾಟರ್. ಕನ್ನಡಿಗ ಹೊಡೆಯೋ ಶಾಟ್​​ಗಳನ್ನ ಕಿಂಗ್ ಕೊಹ್ಲಿಯಿಂದಲೂ ಹೊಡೆಯಲು ಸಾಧ್ಯವಿಲ್ಲ. ಕ್ಲಾಸಿಕ್ ಬ್ಯಾಟರ್​. ವಿಕೆಟ್ ಮುಂದೆ ಮಾತ್ರವಲ್ಲ. ವಿಕೆಟ್ ಹಿಂದೆಯೂ ಅದ್ಭುತ ಪ್ರದರ್ಶನ ನೀಡ್ತಾರೆ. ವಿಕೆಟ್ ಕೀಪರ್ ಆಗಿಯೂ ಸಕ್ಸಸ್ ಆಗಿದ್ದು, ದಶಕದಿಂದ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ.

ರಾಹುಲ್ ಅದ್ಭುತ ಪ್ಲೇಯರ್ ಅನ್ನೋದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಅವರೊಬ್ಬರ ಅನ್‌ಫಿಟ್ ಪ್ಲೇಯರ್ ಅನ್ನೋದು. ಕೆರಿಯರ್ ಆರಂಭದಲ್ಲಿ ಉತ್ತಮ ಆಟಗಾರನಾಗಿದ್ದರೂ ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆಯಲು ಕಾಂಪಿಟೇಶನ್ ಹೆಚ್ಚಿದ್ದರಿಂದ ಬೆಂಚ್ ಕಾಯಬೇಕಾಯ್ತು. ಬಳಿಕ ಪ್ಲೇಯಿಂಗ್-11ನಲ್ಲಿ ಖಾಯಂ ಸ್ಥಾನ ಆಯ್ತು ಅನ್ನುವಷ್ಟರಲ್ಲಿ ಗಾಯ ಎಂಬ ಪೆಡಂಭೂತ ಬೆನ್ನೇರಿತು. ಆ ಬಳಿಕ ಅವರ ಕೆರಿಯರ್ ಡೋಲಾಯಮನವಾಯ್ತು. ಒಂದು ಸರಣಿ ಆಡೋದು. ಮತ್ತೊಂದು ಸರಣಿಯಿಂದ ಹೊರಗುಳಿಯೋದು ಕಾಮನ್ ಆಯ್ತು. ಇದೇ ಅವರ ಕೆರಿಯರ್‌ಗೆ ಮುಳುವಾಯ್ತು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 'ಆ್ಯಂಟಿ ಸೆಕ್ಸ್‌ ಬೆಡ್‌'; ವಿಡಿಯೋ ಹಂಚಿಕೊಂಡ ಅಸೀಸ್ ಲೇಡಿ ಅಥ್ಲೀಟ್ಸ್‌

ಟಿ20 ತಂಡದಲ್ಲಿ ಸ್ಥಾನ ಹೋಯ್ತು, ಒನ್​ಡೇ ವೈಸ್ ಕ್ಯಾಪ್ಟನ್ಸಿಯೂ ಹೋಯ್ತು..!

2021ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ರಾಹುಲ್ ಅವರನ್ನ ಟಿ20 ತಂಡದಿಂದ ಕೈಬಿಡಲಾಗಿತ್ತು. ಈ ಸಲ ಟಿ20 ವರ್ಲ್ಡ್‌ಕಪ್ ಆಡಲ್ಲ. ಅಲ್ಲಿಗೆ ಅವರ ಟಿ20 ಕೆರಿಯರ್ ಕ್ಲೋಸ್ ಆಗಿದೆ. ಒನ್​ಡೇಯಲ್ಲಿ ವೈಸ್ ಕ್ಯಾಪ್ಟನ್ಸಿ ಮೇಲೆ ಕಣ್ಣಿಟ್ಟಿದ ಅವರ ಕನಸು ಸಹ ನುಚ್ಚುನೂರಾಗಿದೆ. ಶುಭ್‌ಮನ್ ಗಿಲ್‌ಗೆ ಉಪನಾಯಕತ್ವ ಪಟ್ಟ ಕಟ್ಟಿ ರಾಹುಲ್ ಆಸೆಗೆ ಬಿಸಿಸಿಐ ಎಳ್ಳು ನೀರು ಬಿಟ್ಟಿದೆ. ಇದರ ನಡುವೆ ಮತ್ತೊಂದು ಆಘಾತ ಕನ್ನಡಿಗನಿಗೆ ಎದುರಾಗಿದೆ.

ರಾಹುಲ್ ಕೈತಪ್ಪಲಿದೆ ಟೆಸ್ಟ್ ವೈಸ್ ಕ್ಯಾಪ್ಟನ್ಸಿ..!

ಒನ್​ಡೇ ವೈಸ್ ಕ್ಯಾಪ್ಟನ್ಸಿ ಹೋದ್ಮೇಲೆ ಟೆಸ್ಟ್ ವೈಸ್ ಕ್ಯಾಪ್ಟನ್ಸಿಯಾದ್ರೂ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದರು ರಾಹುಲ್. ಆದ್ರೆ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮಾತು, ಕನ್ನಡಿಗನ ಕನಸು ಭಗ್ನಗೊಳ್ಳುವಂತೆ ಮಾಡಿದೆ. ಶುಭ್‌ಮನ್ ಗಿಲ್ ಮೂರು ಮಾದರಿ ಆಟಗಾರ. ನಿಧಾನವಾಗಿ ನಾಯಕತ್ವದ ಗುಣಗಳನ್ನ ಕಲಿಯುತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್​ ಯಾದವ್ ಅವರಿಂದ ನಾಯಕತ್ವದ ಬಗ್ಗೆ ಕಲಿಯಲಿದ್ದಾರೆ ಎಂದು ಅಗರ್ಕರ್ ಹೇಳಿದ್ದಾರೆ.

ಭಾರತ ತಂಡದ ಆಟಗಾರರಿಗೆ ಕೋಚ್‌ ಗೌತಮ್‌ ಗಂಭೀರ್‌ ಖಡಕ್‌ ಎಚ್ಚರಿಕೆ!

ಅಜಿತ್ ಅಗರ್ಕರ್ ಹೇಳಿಕೆಯಲ್ಲಿ ಅಂತದ್ದೇನಿದೆ ಅಂತ ನೀವು ಕೇಳಬಹುದು. ಗಿಲ್ ನಾಯಕತ್ವದ ಗುಣಗಳನ್ನ ಕಲಿಯುತ್ತಿದ್ದಾರೆ ಅಂದ್ರೆ ಅಲ್ಲಿಗೆ ಮುಗಿಯಿತು. ಅವರೇ ಟೆಸ್ಟ್​ ತಂಡದ ಉಪನಾಯಕ​. ಮೂರು ಮಾದರಿಗೆ ಗಿಲ್ ಅವರನ್ನೇ ವೈಸ್ ಕ್ಯಾಪ್ಟನ್ ಮಾಡಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ಭಾರತ-ಬಾಂಗ್ಲಾದೇಶ ಟೆಸ್ಟ್​ ಸರಣಿ ನಡೆಯಲಿದೆ. ಆ ಸಿರೀಸ್‌ಗೆ ಟೀಂ ಇಂಡಿಯಾ ಆನೌನ್ಸ್ ಆಗೋದನ್ನೇ ಎಲ್ಲರೂ ಕಾಯ್ತಿದ್ದಾರೆ. ಆಗ ಗೊತ್ತಾಗಲಿದೆ ರಾಹುಲ್ ಭವಿಷ್ಯ. ಒಟ್ನಲ್ಲಿ ಟಿ20ಯಿಂದ ಡ್ರಾಪ್ ಆಗಿರೋ ಕನ್ನಡಿಗ, ಇನ್ಮುಂದೆ ಕೇವಲ ಆಟಗಾರನಾಗಿ ಟೆಸ್ಟ್​​-ಒನ್​ಡೇ ಆಡಬೇಕು ಅಷ್ಟೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್