Asianet Suvarna News Asianet Suvarna News

NCA ಮತ್ತೆ ಎಡವಟ್ಟು; ಬೆಂಗಳೂರಿಗೆ ಬರಲು ಬುಮ್ರಾ, ಹಾರ್ದಿಕ್ ನಕಾರ!

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಟೀಂ ಇಂಡಿಯಾಗೆ ಆಗಮಿಸಿದ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಮತ್ತೆ ಗಾಯಗೊಂಡಿದ್ದಾರೆ. NCA ತರಬೇತಿ ದಾರರ ನಿರ್ಲಕ್ಷ್ಯದಿಂದ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ನಿರ್ಧಾರ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

Bengaluru NCA under scanner after Bhuvneshwar kumar injury
Author
Bengaluru, First Published Dec 15, 2019, 1:00 PM IST

ನವದೆಹಲಿ(ಡಿ.15): ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಟ್ರೈನರ್‌ಗಳಿಂದ ಮತ್ತೆ ಎಡವಟ್ಟು ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸುಮಾರು 3 ತಿಂಗಳುಗಳ ಕಾಲ ಬೆಂಗಳೂರಲ್ಲಿರುವ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಭುವನೇಶ್ವರ್‌ ಕುಮಾರ್‌, ವಿಂಡೀಸ್‌ ವಿರುದ್ಧ ಟಿ20 ಸರಣಿಗೆ ತಂಡಕ್ಕೆ ವಾಪಸಾಗಿದ್ದರು. ಆದರೆ ಒಂದೇ ವಾರದಲ್ಲಿ ಮತ್ತೆ ಗಾಯಗೊಂಡಿದ್ದಾರೆ. 

ಇದನ್ನೂ ಓದಿ: ಬೆಂಗ್ಳೂರಲ್ಲಿ ಗಂಗೂಲಿ-ದ್ರಾವಿಡ್ ಸುದೀರ್ಘ ಚರ್ಚೆ; NCAಗೆ ಹೊಸ ರೂಪ!

ವೇಗಿ ಭವನೇಶ್ವರ್ ಕುಮಾರ್ ವಿಂಡೀಸ್‌ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಭುವನೇಶ್ವರ್‌ ಗಾಯದ ಸಮಸ್ಯೆಯನ್ನು ಸರಿಯಾಗಿ ಪತ್ತೆ ಮಾಡುವಲ್ಲಿ ಎನ್‌ಸಿಎ ಟ್ರೈನರ್‌ಗಳು ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕೆ ಜಸ್‌ಪ್ರೀತ್‌ ಬೂಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ, ಪುನಶ್ಚೇತನ ಶಿಬಿರಕ್ಕೆ ಎನ್‌ಸಿಎಗೆ ಆಗಮಿಸಲು ನಿರಾಕರಿಸಿದ್ದರು ಎನ್ನುವ ವಿಷಯ ಬಹಿರಂಗಗೊಂಡಿದೆ. 

ಇದನ್ನೂ ಓದಿ: ರಣಜಿ ಟ್ರೋಫಿ: 2ನೇ ಪಂದ್ಯಕ್ಕೂ ಮುನ್ನ ಕರ್ನಾಟಕ ತಂಡಕ್ಕೆ ಭಾರೀ ಹಿನ್ನಡೆ!.

ಬಿಸಿಸಿಐ ಗುತ್ತಿಗೆ ಹೊಂದಿರುವ ಆಟಗಾರರು ಗಾಯಗೊಂಡಾಗ ಎನ್‌ಸಿಎಗೆ ಆಗಮಿಸಬೇಕು. ಆದರೆ ಬೂಮ್ರಾ ಹಾಗೂ ಹಾರ್ದಿಕ್‌, ಖಾಸಗಿ ಫಿಸಿಯೋ ಹಾಗೂ ಟ್ರೈನರ್‌ಗಳ ಸಹಾಯದಿಂದ ಫಿಟ್ನೆಸ್‌ ಕಂಡುಕೊಳ್ಳಲು ಇಚ್ಛಿಸಿದರು. ಈ ಇಬ್ಬರು ಆಟಗಾರರ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿತು ಎನ್ನಲಾಗಿದೆ.

Follow Us:
Download App:
  • android
  • ios