ಭಾರತ-ಪಾಕ್ ಪಂದ್ಯದ ವೇಳೆ ಬೆಂಗಳೂರಿಗನಿಂದ 62 ಬಿರಿಯಾನಿ ಆರ್ಡರ್..! ನಾವು ಪಾರ್ಟಿಗೆ ಬರಬಹುದಾ ಎಂದ ಸ್ವಿಗ್ಗಿ ಮಾಲೀಕ!
ಬೆಂಗಳೂರಿನ ಕ್ರಿಕೆಟ್ ಅಭಿಮಾನಿಯೊಬ್ಬ, ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯ ನಡೆಯುವ ವೇಳೆಯಲ್ಲಿಯೇ ಸ್ವಿಗ್ಗಿಯಲ್ಲಿ 62 ಬಿರ್ಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಈ ಕುರಿತಂತೆ ಲಘು ಹಾಸ್ಯದ ಶೈಲಿಯಲ್ಲಿ ಟ್ವೀಟ್ ಮಾಡಿದೆ
ಬೆಂಗಳೂರು(ಸೆ.03): ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅದರ ಕ್ರೇಜ್ ಮುಗಿಲು ಮುಟ್ಟಿರುತ್ತದೆ. ಯಾಕೆಂದರೆ ಐಸಿಸಿ ಟೂರ್ನಿಗಳಲ್ಲಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡುತ್ತಿರುತ್ತವೆ. ಇದೀಗ ಸೆಪ್ಟೆಂಬರ್ 02ರಂದು ಕೊಲಂಬೋದ ಪಲ್ಲೆಕೆಲೆ ಮೈದಾನದಲ್ಲಿ ಏಷ್ಯಾಕಪ್ ಟೂರ್ನಿಯ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಇದೇ ವೇಳೆ ಬೆಂಗಳೂರಿನ ಸೂಪರ್ ಫ್ಯಾನ್ ಒಬ್ಬ ಏಕಕಾಲದಲ್ಲಿ 62 ಬಿರ್ಯಾನಿ ಆರ್ಡರ್ ಮಾಡುವ ಮೂಲಕ ಸುದ್ದಿಯಾಗಿದ್ದಾನೆ. ಇದರ ಬೆನ್ನಲ್ಲೇ ಫುಡ್ ಡೆಲಿವರಿ ಅಪ್ಲಿಕೇಷನ್ ಸ್ವಿಗ್ಗಿ, ವಿನೂತನವಾಗಿ ಟ್ವೀಟ್ ಮಾಡಿ ಗಮನ ಸೆಳೆದಿದೆ.
ಬೆಂಗಳೂರಿನ ಕ್ರಿಕೆಟ್ ಅಭಿಮಾನಿಯೊಬ್ಬ, ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯ ನಡೆಯುವ ವೇಳೆಯಲ್ಲಿಯೇ ಸ್ವಿಗ್ಗಿಯಲ್ಲಿ 62 ಬಿರ್ಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಈ ಕುರಿತಂತೆ ಲಘು ಹಾಸ್ಯದ ಶೈಲಿಯಲ್ಲಿ ಟ್ವೀಟ್ ಮಾಡಿರುವ ಸ್ವಿಗ್ಗಿ, "ಬೆಂಗಳೂರಿನ ವ್ಯಕ್ತಿಯೊಬ್ಬರು ಈಗಷ್ಟೇ 62 ಬಿರ್ಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಯಾರು ನೀವು? ನೀವೀಗ ಸರಿಯಾಗಿ ಎಲ್ಲಿದ್ದೀರಾ? ನೀವೇನಾದರೂ ಭಾರತ vs ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾರ್ಟಿಯನ್ನು ನೀಡುತ್ತಿದ್ದೀರಾ? ನಾನು ನಿಮ್ಮ ಪಾರ್ಟಿಗೆ ಬರಬಹುದಾ ಎಂದು ಸ್ವಿಗ್ಗಿ ಟ್ವೀಟ್ ಮಾಡಿದೆ. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
'ದೋಸ್ತಿ ಮೈದಾನದ ಹೊರಗಡೆ ಇಟ್ಕೊಳ್ಳಿ': ಇಂಡೋ-ಪಾಕ್ ಕ್ರಿಕೆಟಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಇಂಡೋ-ಪಾಕ್ ನಡುವಿನ ಏಷ್ಯಾಕಪ್ ಹಣಾಹಣಿ ಮಳೆಗೆ ಬಲಿಯಾಯಿತು. ವಿಶ್ವಕಪ್ ಸಿದ್ಧತೆಗೆ ಈ ಟೂರ್ನಿಯನ್ನು ಬಳಸಿಕೊಳ್ಳುತ್ತಿರುವ ಎರಡೂ ತಂಡಗಳು ಕೆಲ ಧನಾತ್ಮಕ ಬೆಳವಣಿಗೆಗಳನ್ನು ಕಂಡವು. ಬಹಳ ಸಮಯದ ಬಳಿಕ ಭಾರತದ ಮಧ್ಯಮ ಕ್ರಮಾಂಕ ದಿಟ್ಟ ಹೋರಾಟ ಪ್ರದರ್ಶಿಸಿದರೆ, ಪಾಕಿಸ್ತಾನದ ವೇಗಿಗಳು ಲಯ ಮುಂದುವರಿಸಿದರು.
World Cup 2023: ವಿಶ್ವಕಪ್ ಟೂರ್ನಿಗೆ ಇಂದೇ ಭಾರತ ತಂಡ ಪ್ರಕಟ..? ರೋಹಿತ್ ಪಡೆಯಲ್ಲಿ ಯಾರಿಗೆಲ್ಲಾ ಸ್ಥಾನ?
4 ವರ್ಷ ಬಳಿಕ ಏಕದಿನ ಮಾದರಿಯಲ್ಲಿ ಮುಖಾಮುಖಿಯಾದ ಬದ್ಧವೈರಿಗಳ ನಡುವೆ ನಿರೀಕ್ಷೆಯಂತೆಯೇ ಭರ್ಜರಿ ಸ್ಪರ್ಧೆ ಏರ್ಪಟ್ಟಿತ್ತು. ಆಗಾಗ ಮಳೆ ಸುರಿದ ಹೊರತಾಗಿಯೂ ಮೊದಲ ಇನ್ನಿಂಗ್ಸ್ ಪೂರ್ತಿಗೊಂಡಿತು. ಆದರೆ ಪಂದ್ಯ ಪೂರ್ತಿಯಾಗಲು ಮಳೆರಾಯ ಅವಕಾಶ ನೀಡಲಿಲ್ಲ.
ಆರಂಭಿಕ ಆಘಾತಕ್ಕೆ ಗುರಿಯಾದರೂ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಉತ್ಕೃಷ್ಟ ಗುಣಮಟ್ಟದ ಬ್ಯಾಟಿಂಗ್ ನೆರವಿನಿಂದ ಭಾರತ 48.5 ಓವರಲ್ಲಿ 266 ರನ್‌ಗೆ ಆಲೌಟ್ ಆಯಿತು. ಆದರೆ ನಿರಂತರ ಮಳೆಯಿಂದಾಗಿ ಪಾಕಿಸ್ತಾನದ ಬ್ಯಾಟಿಂಗ್ ಆರಂಭಗೊಳ್ಳಲಿಲ್ಲ. ಪಂದ್ಯ ರದ್ದುಗೊಂಡ ಪರಿಣಾಮ, ಎರಡೂ ತಂಡಗಳಿಗೆ ಅಂಕ ಹಂಚಲಾಯಿತು. ಮೊದಲ ಪಂದ್ಯದಲ್ಲಿ ನೇಪಾಳವನ್ನು ಸುಲಭವಾಗಿ ಸೋಲಿಸಿದ್ದ ಪಾಕಿಸ್ತಾನ ಮತ್ತೊಂದು ಅಂಕ ಸೇರ್ಪಡೆಯೊಂದಿಗೆ ಸೂಪರ್-4 ಹಂತಕ್ಕೆ ಪ್ರವೇಶಿಸಿತು. ನೇಪಾಳ ವಿರುದ್ಧ ಭಾರತ ಗೆದ್ದರೆ ಸೂಪರ್-4ಗೇರಲಿದೆ.