ನೈಟ್‌ಕ್ಲಬ್‌ನಲ್ಲಿ ರಗ್ಬಿ ಆಟಗಾರನೊಂದಿಗಿನ ವಿವಾದದ ನಂತರ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಗಸ್ ಆಟ್ಕಿನ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದ್ದು, ಅವರ ಬದಲಿಗೆ ಜೋ ರೂಟ್ ತಂಡದ ನಾಯಕತ್ವ ವಹಿಸಲಿದ್ದಾರೆ.

ಲಂಡನ್‌: ಇತ್ತೀಚೆಗೆ ನೈಟ್‌ಕ್ಲಬ್‌ನಲ್ಲಿ ರಗ್ಬಿ ಆಟಗಾರನ ಜೊತೆಗಿನ ವಾಗ್ವಾದ, ಹಲ್ಲೆ ಘಟನೆ ಬೆನ್ನಲ್ಲೇ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಹಾಗೂ ವೇಗದ ಬೌಲರ್‌ ಗಸ್‌ ಆಟ್ಕಿನ್ಸನ್‌ ತಂಡದಿಂದ ಹೊರಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯೂಜಿಲೆಂಡ್‌ ವಿರುದ್ಧ ಜೂ.17ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೆ ಪ್ರಕಟಗೊಂಡ 15 ಆಟಗಾರರ ತಂಡದಲ್ಲಿ ಇವರಿಬ್ಬರಿಗೂ ಸ್ಥಾನ ಲಭಿಸಿಲ್ಲ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯು ವಿವಾದದ ಬಗ್ಗೆ ತನಿಖೆ ನಡೆಸುತ್ತಿರುವುರಿಂದ ಸ್ಟೋಕ್ಸ್‌ರನ್ನು ತಂಡದಿಂದ ಹೊರಗಿಡಲಾಗಿದೆ. ಅವರ ಬದಲು ಹಿರಿಯ ಆಟಗಾರ ಜೋ ರೂಟ್‌ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಜೋಫ್ರಾ ಆರ್ಚರ್‌ ಹಾಗೂ ಜೋರ್ಡನ್‌ ಕಾಕ್ಸ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ:

ಜೋ ರೂಟ್(ನಾಯಕ), ರೆಹಾನ್ ಅಹಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಶೋಯೆಬ್ ಬಷೀರ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಜೋರ್ಡನ್ ಕಾಕ್ಸ್, ಬೆನ್ ಡಕೆಟ್, ಮ್ಯಾಥ್ಯೂ ಫಿಶರ್, ಎಮಿಲಿಯೋ ಗೇ, ಜೇಮ್ಸ್‌ ರೀವ್, ಓಲಿ ರಾಬಿನ್‌ಸನ್, ಜೇಮಿ ಸ್ಮಿತ್, ಜೋಶ್ ಟಂಗ್

ಟೆಸ್ಟ್‌ಗೆ ಬೆನ್‌ ಸ್ಟೋಕ್ಸ್‌ ನಿವೃತ್ತಿ?

ಲಂಡನ್: ನೈಟ್‌ಕ್ಲಬ್‌ ವಿವಾದದ ಬೆನ್ನಲ್ಲೇ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ರಾತ್ರಿ ಸಹ ಆಟಗಾರ ಗಸ್‌ ಆಟ್ಕಿನ್ಸನ್‌ ಜೊತೆ ಸ್ಟೋಕ್ಸ್‌ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ರಗ್ಬಿ ಆಟಗಾರ ಜೊತೆ ವಾಗ್ವಾದ ನಡೆದಿದೆ. ಹಲ್ಲೆಯೂ ನಡೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ತನಿಖೆ ಆರಂಭಿಸಿದೆ. ಇದರ ಬೆನ್ನಲ್ಲೇ ಸ್ಟೋಕ್ಸ್‌ ತಮ್ಮ ನಾಯಕತ್ವ ತೊರೆಯುವುದರ ಜೊತೆಗೆ ಟೆಸ್ಟ್‌ ಕ್ರಿಕೆಟ್‌ಗೇ ವಿದಾಯ ಘೋಷಿಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಅಭ್ಯಾಸ ಪಂದ್ಯದಲ್ಲಿ ಸೋತ ಭಾರತ

ಕಾರ್ಡಿಫ್: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸಿದ್ಧತೆಗಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಬುಧವಾರ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಸೋಲನುಭವಿಸಿದೆ. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 6 ವಿಕೆಟ್‌ಗೆ 171 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಭಾರತ 19.5 ಓವರ್‌ಗಳಲ್ಲಿ 166 ರನ್‌ಗೆ ಆಲೌಟಾಗಿ, 5 ರನ್‌ಗಳಿಂದ ವೀರೋಚಿತ ಸೋಲುಕಂಡಿತು. ಶುಕ್ರವಾರ ವಿಶ್ವಕಪ್‌ ಆರಂಭಗೊಳ್ಳಲಿದೆ.