ಮುಂಬೈ(ಡಿ.29): ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಭರಾತದ ಕ್ರಿಕೆಟ್ ತ್ವರಿತಗತಿಯಲ್ಲಿ ಬದಲಾವಣೆ ಕಾಣುತ್ತಿದೆ. ಈಗಾಗಲೇ ಟೀಂ ಇಂಡಿಯಾದಲ್ಲಿ ಯೋ-ಯೋ ಫಿಟ್ನೆಸ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಇದಕ್ಕೆ ಹಲವು ಹಿರಿಯ ಕ್ರಿಕೆಟಿಗರು ವಿರೋಧ ವ್ಯಕ್ತಪಡಸಿದ್ದರು. ಈ ಕುರಿತು ಸೌರವ್ ಗಂಗೂಲಿ ಸ್ಪಷ್ಟ ಉತ್ತರ ನೀಡೋ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಧೋನಿ ಭವಿಷ್ಯ; ಗಂಗೂಲಿ ಹೇಳಿಕೆಯಿಂದ ಹೆಚ್ಚಿದ ಆತಂಕ!

ಯೋ-ಯೋ ಟೆಸ್ಟ್ ಕಡ್ಡಾಯ ಮಾಡಬೇಕೇ ಬೇಡವೇ ಕುರಿತು ಹಲವು ದಿನಗಳಿಂದ ಚರ್ಚೆಯಾಗುತ್ತಿದೆ. ಇದೀಗ ಸೌರವ್ ಗಂಗೂಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಹಾಗೂ ಟೀಂ ಮ್ಯಾನೇಜ್ಮೆಂಟ್ ಯೋ-ಯೋ ಟೆಸ್ಟ್ ಕಡ್ಡಾಯ ಮಾಡಿದೆ. ಇದರಲ್ಲಿ ಬಿಸಿಸಿಐ ಮಧ್ಯ ಪ್ರವೇಶಿಸುವುದಿಲ್ಲ ಎಂದು ಗಂಗೂಲಿ ಹೇಳಿದ್ದಾರೆ. ಈ ಮೂಲಕ ಫಿಟ್ನೆಸ್ ಟೆಸ್ಟ್ ಕಡ್ಡಾಯ ಅನ್ನೋದನ್ನು ಬಹಿರಂಗವಾಗಿ ಸೂಚಿಸಿದ್ದಾರೆ.

ಇದನ್ನೂ ಓದಿ: ಡೇ & ನೈಟ್ ಟೆಸ್ಟ್‌ಗೆ ಕ್ರೀಡಾಂಗಣ ನಿಗದಿ; ಬೆಂಗಳೂರಿಗೆ ದಾದಾ ಕೊಡುಗೆ!.

ತಂಡ ಯೋ ಯೋ ಟೆಸ್ಟ್ ಅಳವಡಿಸಿಕೊಂಡಿದೆ. ಇದರಲ್ಲಿ ಬಿಸಿಸಿಐ ಯಾವುದೇ ಬದಲಾವಣೆ ತರುವುದಿಲ್ಲ. ಇದು ಟೀಂ ಮ್ಯಾನೇಜ್ಮೆಂಟ್ ನಿರ್ಧಾರ ಎಂದು ಗಂಗೂಲಿ ಹೇಳಿದ್ದಾರೆ. ಯುವರಾಜ್ ಸಿಂಗ್, ಅಂಬಾಟಿ ರಾಯುಡು, ಮೊಹಮ್ಮದ್ ಶಮಿ ಸೇರದಂತೆ ಕೆಲ ಕ್ರಿಕೆಟಿಗರು ಫಿಟ್ನೆಸ್ ಟೆಸ್ಟ್ ಪಾಸಾಗದೇ ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಯೋ-ಯೋ ಟೆಸ್ಟ್ ಅವಶ್ಯತೆ ಕುರಿತು ಪ್ರಶ್ನೆ ಎದ್ದಿತ್ತು.