Asianet Suvarna News Asianet Suvarna News

ಡೇ & ನೈಟ್ ಟೆಸ್ಟ್‌ಗೆ ಕ್ರೀಡಾಂಗಣ ನಿಗದಿ; ಬೆಂಗಳೂರಿಗೆ ದಾದಾ ಕೊಡುಗೆ!

ಟೀಂ ಇಂಡಿಯಾದ ಮುಂದಿನ ಡೇ ಅಂಡ್ ಟೆಸ್ಟ್ ಪಂದ್ಯಕ್ಕೆ ಕ್ರೀಡಾಂಗಣ  ನಿಗದಿಯಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕ್ರೀಡಾಂಗಣ ಆಯ್ಕೆ ಮಾಡಿದ್ದು, ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

BCCI president sourav ganguly picks 3 venue for team india next day night test
Author
Bengaluru, First Published Dec 28, 2019, 6:35 PM IST
  • Facebook
  • Twitter
  • Whatsapp

ಮುಂಬೈ(ಡಿ.28): ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಭಾರತೀಯ ಕ್ರಿಕೆಟ್‌ನಲ್ಲಿ ಬದಲಾವಣೆಯಾಗಿದೆ. ಈಗಾಗಲೇ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಯೋಜಿಸಿದ ಗಂಗೂಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ 2020ರಲ್ಲಿ ಟೀಂ ಇಂಡಿಯಾ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಡಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಇಷ್ಟೇ ಅಲ್ಲ ಮುಂದಿನ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಗಂಗೂಲಿ ಕ್ರೀಡಾಂಗಣ ನಿಗದಿ ಪಡಿಸಿದ್ದಾರೆ.

ಇದನ್ನೂ ಓದಿ: ತೆಂಡುಲ್ಕರ್‌ ಭದ್ರತೆ ಇಳಿಸಿ ಆದಿತ್ಯ ಠಾಕ್ರೆ ಭದ್ರತೆ ಹೆಚ್ಚಿಸಿದ ಮಹಾ ಸರ್ಕಾರ

ಕೋಲ್ಕತಾದಲ್ಲಿ ಚೊಚ್ಚಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಯೋಜಿಸಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈ ಹಾಗೂ ಗುಜರಾತ್‌ನಲ್ಲಿ ಡೇ ಅಂಡ್ ನೈಟ್ ಟೆಸ್ಟ್ ಆಯೋಜಿಸಲಾಗುವುದು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಗಂಗೂಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಗಲು ರಾತ್ರಿ ಪಂದ್ಯ ಆಯೋಜಿಸಲು ನಿರ್ಧರಿಸಿರುವು ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ.

ಇದನ್ನೂ ಓದಿ:  ಬುಮ್ರಾ ರಣಜಿ ಟೂರ್ನಿ ಆಡದಂತೆ ತಡೆದ ಸೌರವ್ ಗಂಗೂಲಿ..!

ಟೆಸ್ಟ್ ಕ್ರಿಕೆಟ್‌ಗೆ ಅಭಿಮಾನಿಗಳನ್ನು ಆಕರ್ಷಿಸಲು ಹೆಚ್ಚು ಹೆಚ್ಚು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಯೋಜಿಸಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ. ಗಂಗೂಲಿ ಈಗಾಗಲೇ ನಾಲ್ಕು ದೇಶಗಳ ಸೂಪರ್ ಸೀರಿಸ್ ಕ್ರಿಕೆಟ್ ಟೂರ್ನಿ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಮೂಲಕ ಬಿಸಿಸಿಐ ಆದಾಯ ಮೂಲವನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಗೆ ಕೈಹಾಕಿದ್ದಾರೆ.
 

Follow Us:
Download App:
  • android
  • ios