ಮುಂಬರುವ ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 22ರ ವರೆಗೂ ದುಲೀಪ್‌ ಟ್ರೋಫಿ ನಡೆಯಲಿದ್ದು, ಈ ಟೂರ್ನಿಗೂ ರಾಷ್ಟ್ರೀಯ ಆಯ್ಕೆಗಾರರೇ ತಂಡಗಳನ್ನು ಆಯ್ಕೆ ಮಾಡಲಿದ್ದಾರೆ. ಸೆಪ್ಟೆಂಬರ್ 19ರಿಂದ ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ.

ನವದೆಹಲಿ: ದೇಸಿ ಕ್ರಿಕೆಟ್‌ಗೆ ಹೆಚ್ಚಿನ ಮಹತ್ವ ನೀಡದಿದ್ದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ಭಾರತೀಯ ಆಟಗಾರರನ್ನು ಕೆಲ ತಿಂಗಳುಗಳ ಹಿಂದೆ ಎಚ್ಚರಿಸಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಇದೀಗ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಆಯ್ಕೆಯಾಗಲು ಬಯಸುವ ಆಟಗಾರರು ದುಲೀಪ್‌ ಟ್ರೋಫಿಯಲ್ಲಿ ಆಡಬೇಕು ಎಂದು ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಮುಂಬರುವ ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 22ರ ವರೆಗೂ ದುಲೀಪ್‌ ಟ್ರೋಫಿ ನಡೆಯಲಿದ್ದು, ಈ ಟೂರ್ನಿಗೂ ರಾಷ್ಟ್ರೀಯ ಆಯ್ಕೆಗಾರರೇ ತಂಡಗಳನ್ನು ಆಯ್ಕೆ ಮಾಡಲಿದ್ದಾರೆ. ಸೆಪ್ಟೆಂಬರ್ 19ರಿಂದ ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ.

ಇಂಗ್ಲೆಂಡ್‌ ಬೌಲಿಂಗ್‌ ಕೋಚ್‌ ಆಗಿ ಕಾರ್ಯಾರಂಭಿಸಿದ ಜಿಮ್ಮಿ!

ನಾಟಿಂಗ್‌ಹ್ಯಾಮ್‌: ಕೆಲ ದಿನಗಳ ಹಿಂದಷ್ಟೇ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾದ ದಿಗ್ಗಜ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌, ಇಂಗ್ಲೆಂಡ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ಕಾರ್ಯಾರಂಭಿಸಿದ್ದಾರೆ. ಗುರುವಾರದಿಂದ ವಿಂಡೀಸ್‌ ವಿರುದ್ಧದ 2ನೇ ಟೆಸ್ಟ್‌ ಆರಂಭಗೊಳ್ಳಲಿದ್ದು, ಮಂಗಳವಾರ ಇಂಗ್ಲೆಂಡ್‌ ತಂಡ ಅಭ್ಯಾಸ ನಡೆಸಿತ್ತು. 

ಈ ವೇಳೆ ಆ್ಯಂಡರ್‌ಸನ್‌ ತಂಡದ ಬೌಲರ್‌ಗಳಿಗೆ ಮಾರ್ಗದರ್ಶನ ನೀಡಿದರು. ಇನ್ನು 2012ರ ಬಳಿಕ ಇದೇ ಮೊದಲ ಬಾರಿಗೆ ತವರಿನ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಜೇಮ್ಸ್‌ ಆ್ಯಂಡರ್‌ಸನ್‌ ಹಾಗೂ ಸ್ಟುವರ್ಟ್‌ ಬ್ರಾಡ್‌ ಇಬ್ಬರೂ ಇಲ್ಲದೆ ಆಡಲಿದೆ. 2007ರ ಬಳಿಕ ಇಬ್ಬರೂ ಇಲ್ಲದೇ ಆಡಲಿರುವುದು ಕೇವಲ 2ನೇ ಬಾರಿ. ಇನ್ನು 2ನೇ ಟೆಸ್ಟ್‌ಗೆ ಆ್ಯಂಡರ್‌ಸನ್‌ ಬದಲು ಮಾರ್ಕ್‌ ವುಡ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಲಾಗಿದೆ.

ಕೊನೆಗೂ ತಪ್ಪೊಪ್ಪಿಕೊಂಡ ಕ್ರಿಕೆಟಿಗ ಅಮಿತ್ ಮಿಶ್ರಾ..!

ಚಾಂಪಿಯನ್ಸ್ ಟ್ರೋಫಿಯಲ್ಲಿ ವಾರ್ನರ್‌ರನ್ನು ಆಡಿಸುವ ಯೋಜನೆಯಿಲ್ಲ: ಜಾರ್ಜ್‌ ಬೈಲಿ

ಸಿಡ್ನಿ: ಹಿರಿಯ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಅವರನ್ನು 2025ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿಸುವ ಯೋಜನೆಯಿಲ್ಲ ಎಂದು ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್‌ ಬೈಲಿ ಸ್ಪಷ್ಟಪಡಿಸಿದ್ದಾರೆ. 

ಡೇವಿಡ್‌ ವಾರ್ನರ್‌ ಈಗಾಗಲೇ ಎಲ್ಲಾ 3 ಮಾದರಿ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗಿದ್ದಾರೆ. ಆದರೆ ಇತ್ತೀಚೆಗಷ್ಟೇ, ತಮಗೆ ಅವಕಾಶ ಸಿಕ್ಕರೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡುವುದಾಗಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೈಲಿ, ‘ವಾರ್ನರ್‌ ಈಗಾಗಲೇ ನಿವೃತ್ತಿಯಾಗಿದ್ದಾರೆ. ಅವರು 3 ಮಾದರಿಯಲ್ಲೂ ಯಶಸ್ಸು ಕಂಡಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಅವರನ್ನು ಆಯ್ಕೆ ಮಾಡುವ ಯೋಜನೆ ಇಲ್ಲ’ ಎಂದಿದ್ದಾರೆ.