* ಯುಎಇ ಚರಣದ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭ* 30 ಸಾವಿರ RT-PCR ಟೆಸ್ಟ್‌ ಮಾಡಲು ಬಿಸಿಸಿಐ ತೀರ್ಮಾನ* ಯುಎಇ ಚರಣದಲ್ಲಿ 31 ಐಪಿಎಲ್ ಪಂದ್ಯಗಳು ನಡೆಯಲಿವೆ

ದುಬೈ(ಸೆ.09): ಐಪಿಎಲ್‌ 14ನೇ ಆವೃತ್ತಿಯ ಉಳಿದ 31 ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸುತ್ತಿರುವ ಬಿಸಿಸಿಐ, ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಕೋವಿಡ್‌ ಪರೀಕ್ಷೆಯ ಸಂಖ್ಯೆಯನ್ನು ಏರಿಕೆ ಮಾಡಿದೆ. ಯುಎಇ ಚರಣದ ಐಪಿಎಲ್‌ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ

ಐಪಿಎಲ್‌ ಟೂರ್ನಿಯ ಭಾಗ-2ರ ವೇಳೆ ಸುಮಾರು 30,000 ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲು ಬಿಸಿಸಿಐ ವೈದ್ಯಕೀಯ ಸಂಸ್ಥೆಯೊಂದರ ನೆರವು ಪಡೆಯಲಿದೆ. ಆಟಗಾರರು, ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರತಿ 3 ದಿನಕ್ಕೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತದೆ. ಏಪ್ರಿಲ್‌, ಮೇ ತಿಂಗಳಲ್ಲಿ ಭಾರತದಲ್ಲಿ ನಡೆದಾಗ ಪ್ರತಿ 5 ದಿನಕ್ಕೊಮ್ಮೆ ಪರೀಕ್ಷೆ ನಡೆಸಲಾಗುತ್ತಿತ್ತು. ಈ ಬಾರಿ ತಂಡಗಳು ಉಳಿದುಕೊಂಡಿರುವ ಹೋಟೆಲ್‌ಗಳಲ್ಲೇ ವೈದ್ಯಕೀಯ ಸಿಬ್ಬಂದಿಯೂ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

T20 World Cup ಎಂ ಎಸ್ ಧೋನಿ ಟೀಂ ಇಂಡಿಯಾದ ಮುಂದಿನ ಪ್ರಧಾನ ಕೋಚ್‌?

ಈಗಾಗಲೇ ಯುಎಇಗೆ ಬಂದಿಳಿದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರು ಕೋವಿಡ್‌ ಟೆಸ್ಟ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಯುಎಇನಲ್ಲಿ ಪ್ರತಿದಿನ 2,000 ಪಿಸಿಆರ್ ಟೆಸ್ಟ್‌ ಮಾಡುವ ಸಾಮರ್ಥ್ಯವನ್ನು ವೈದ್ಯಕೀಯ ಸಂಸ್ಥೆ ಹೊಂದಿದೆ. ಐಪಿಎಲ್‌ ಮುಗಿದ ಬೆನ್ನಲ್ಲೇ ಯುಎಇನಲ್ಲಿಯೇ ಟಿ20 ವಿಶ್ವಕಪ್ ಟೂರ್ನಿಯು ಜರುಗಲಿದ್ದು, ಸುರಕ್ಷತೆಗೆ ಬಿಸಿಸಿಐ ಹೆಚ್ಚಿನ ಒತ್ತು ನೀಡಿದೆ.