ಮುಂಬೈ(ಮೇ.24):  ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1.3 ಲಕ್ಷ ದಾಟಿದೆ. ಇತ್ತ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 2000 ದಾಟಿದೆ. ಕೊರೋನಾ ವೈರಸ್‌ನಿಂದ ಕ್ರಿಕೆಟ್ ಸಂಪೂರ್ಣ ನೆಲಕಚ್ಚಿದೆ. ಇತ್ತ ಲಾಕ್‌ಡೌನ್ ಸಡಿಲಿಕೆ ಮಾಡಿ ಆರ್ಥಿಕ ಉತ್ತೇಜನಕ್ಕೆ ಸರ್ಕಾರ ಪ್ಲಾನ್ ಮಾಡಿದೆ. ಹೀಗಾಗಿ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸುರಕ್ಷಿತ ಸ್ಥಳದಲ್ಲಿ ಟ್ರೈನಿಂಗ್ ಕ್ಯಾಂಪ್ ಆಯೋಜಿಸಲು ಮುಂದಾಗಿದೆ.

ಟೆಸ್ಟ್ ಸರಣಿಗಾಗಿ ವರ್ಷಾಂತ್ಯದಲ್ಲಿ ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ಪ್ರವಾಸ?

ಟೀಂ ಇಂಡಿಯಾದ ಪ್ರತಿ ಪ್ರವಾಸ, ಸರಣಿಗೂ ಮುನ್ನ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಶಿಬಿರ ಆಯೋಜಿಸಲಾಗುತ್ತಿತ್ತು. ಆದರೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿರುವ ಕಾರಣ, ಇದೇ ಮೊದಲ ಬಾರಿಗೆ ಕ್ರಿಕೆಟಿಗರ ತರಬೇತಿ ಶಿಬಿರಿ ಬೆಂಗಳೂರಿನಿಂದ ಧರ್ಮಶಾಲಾಗೆ ಸ್ಥಳಾಂತರಗೊಂಡಿದೆ.

ಈ ವರ್ಷ ಐಪಿ​ಎಲ್‌ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿ​ವು

ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಆಯೋಜಿಸುವುದು ಕಷ್ಟ. ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಆಟಾಗಾರರ ಸುರಕ್ಷತೆಗೆ ಅಡ್ಡಿಯಾಗಲಿದೆ. ಹೀಗಾಗಿ ಧರ್ಮಶಾಲಾಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಬಿಸಿಸಿಐ ಹೇಳಿದೆ. ಅರುಣಾಚಲ ಪ್ರದೇಶದಲ್ಲೂ ಕೊರೋನಾ ಭೀತಿ ಇದೆ. ಆದರೆ ಪ್ರಮಾಣ ಕಡಿಮೆ ಇದೆ. ಧರ್ಮಶಾಲಾ ಬಳಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಆಟಗಾರರಿಗೂ ನೆರವಾಗಲಿದೆ ಎಂದು ಬಿಸಿಸಿಐ ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ಇದುವರೆಗೆ ಕೊರೋನಾ ವೈರಸ್ 150 ಕೇಸ್ ದಾಖಲಾಗಿದೆ. ಇಷ್ಟೇ ಅಲ್ಲ ಇಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಹೀಗಾಗಿ ಧರ್ಮಶಾಲಾಗೆ  ತರಬೇತಿ ಶಿಬಿರವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿದೆ.