ನವದೆಹಲಿ(ಡಿ.03): ದೇಶೀಯ ಕ್ರಿಕೆಟ್‌ ಟೂರ್ನಿ ಆಯೋಜಿಸಲು ಮುಂದಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಸಲಹೆ ಗಳ ಬಳಿಕ ಆಯಾ ರಾಜ್ಯಗಳ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದೆ. 

ಇದರ ಭಾಗವಾಗಿ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಹಾಗೂ ಖಜಾಂಚಿ ಅರುಣ್‌ ಧುಮಾಲ್‌, ಪಂಜಾಬ್‌ ಕ್ರಿಕೆಟ್‌ ಸಂಸ್ಥೆ (ಪಿಸಿಎ) ಮತ್ತು ಚಂಡೀಗಢದ ಯುಟಿ ಕ್ರಿಕೆಟ್‌ ಸಂಸ್ಥೆಯ 16 ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಿಸಿಸಿಐ ಬಯೋ-ಬಬಲ್‌ನಲ್ಲಿ ದೇಶೀಯ ಟೂರ್ನಿಗಳಾದ ರಣಜಿ ಟ್ರೋಫಿ, ವಿಜಯ್‌ ಹಜಾರೆ ಸೇರಿದಂತೆ ಇತರೆ ಟೂರ್ನಿಗಳನ್ನು ನಡೆಸಲು ಉತ್ಸಾಹ ತೋರಿದೆ.

ಎಲ್ಲಾ ಟೂರ್ನಿ ನಡೆಸಲು ಬಿಸಿಸಿಐಗೆ ಕೆಎಸ್‌ಸಿಎ ಸಲಹೆ

ಇದೊಂದು ಉತ್ತಮ ಸಭೆಯಾಗಿತ್ತು. ಇಲ್ಲಿ ಜಗತ್ತಿನ ಅತ್ಯುತ್ತಮ ಸ್ಟೇಡಿಯಂ ರೂಪಿಸುವ ಜಯ್ ಶಾ ಅವರ ದೂರಾಲೋಚನೆ ನಮಗೆ ಇಷ್ಟವಾಯಿತು. ಅವರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆವು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಜೀಂದರ್ ಗುಪ್ತ ಹೇಳಿದ್ದಾರೆ.  ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಎಲ್ಲಾ ದೇಶಿಯ ಟೂರ್ನಿಗಳನ್ನು ಆಯೋಜಿಸುವಂತೆ ಬಿಸಿಸಿಐಗೆ ಸಲಹೆಯನ್ನು ನೀಡಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.