* ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂಬರುವ ದಿನಗಳಲ್ಲಿ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆ * ಜಯ್ ಶಾ, ಏಷ್ಯಾ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ* ಸೌರವ್ ಗಂಗೂಲಿ ಐಸಿಸಿ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಸಾಧ್ಯತೆ

ನವದೆಹಲಿ(ಸೆ.15) ಮುಂದಿನ ತಿಂಗಳು ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು, ಆ ವೇಳೆ ಬಿಸಿಸಿಐ ಅಧ್ಯಕ್ಷರಾಗಿ ಜಯ್‌ ಶಾ ನೇಮಕಗೊಳ್ಳಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ಜಯ್ ಶಾ ಏಷ್ಯಾ ಕ್ರಿಕೆಟ್‌ ಸಂಸ್ಥೆ(ಎಸಿಸಿ) ಅಧ್ಯಕ್ಷರಾಗಿಯೂ ಕಾರ‍್ಯನಿರ್ವಹಿಸುತ್ತಿದ್ದಾರೆ. ಸೌರವ್‌ ಗಂಗೂಲಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ರ ಕಿರಿಯ ಸಹೋದರ, ಹಾಲಿ ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ರನ್ನು ಕಾರ‍್ಯದರ್ಶಿ ಹುದ್ದೆಗೆ ನೇಮಿಸಲಾಗುವುದು ಎನ್ನಲಾಗಿದೆ.

ಗಂಗೂಲಿ, ಶಾ ಇನ್ನೂ 3 ವರ್ಷ ಬಿಸಿಸಿಐನಲ್ಲೇ ಇರೋದು ಪಕ್ಕಾ!

ಬಿಸಿಸಿಐ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಚ್‌ ಬುಧವಾರ ಅನುಮತಿ ನೀಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಕೂಲಿಂಗ್‌ ಆಫ್‌ ಇಲ್ಲದೇ ಇನ್ನೂ 3 ವರ್ಷ ಅಧಿಕಾರದಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟಿದೆ. ನ್ಯಾ.ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾ.ಹಿಮಾ ಕೊಹ್ಲಿ ಅವರಿದ್ದ ದ್ವಿಸದಸ್ಯ ಪೀಠವು ಯಾವುದೇ ಪದಾಧಿಕಾರಿ ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತು ಬಿಸಿಸಿಐನಲ್ಲಿ ಒಟ್ಟು ಸತತ 12 ವರ್ಷ ಕಾಲ ಅಧಿಕಾರದಲ್ಲಿ ಇರಬಹುದು ಎಂದಿದ್ದು, ಆ ಬಳಿಕ 3 ವರ್ಷ ಕೂಲಿಂಗ್‌ ಆಫ್‌ ಅವಧಿಯಲ್ಲಿರಬೇಕು ಎಂದು ಆದೇಶಿಸಿದೆ.

ಒಬ್ಬ ಪದಾಧಿಕಾರಿ ರಾಜ್ಯ ಸಂಸ್ಥೆಯಲ್ಲಿ ಸತತ 2 ಬಾರಿ 3 ವರ್ಷಗಳ ಅವಧಿ ಬಳಿಕ ಕೂಲಿಂಗ್‌ ಆಫ್‌ ಇಲ್ಲದೇ ಬಿಸಿಸಿಐನಲ್ಲಿ ಸತತ ಎರಡು ಬಾರಿ 3 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬಹುದಾಗಿದೆ. ಆದರೆ 6 ವರ್ಷಗಳ ಬಳಿಕ ಬಿಸಿಸಿಐ ಇಲ್ಲವೇ ರಾಜ್ಯ ಸಂಸ್ಥೆಯಲ್ಲೇ ಮುಂದುವರಿಯಬೇಕಿದ್ದರೆ 3 ವರ್ಷ ಕೂಲಿಂಗ್‌ ಆಫ್‌ ಕಡ್ಡಾಯ ಎಂದು ಪುನರುಚ್ಚರಿಸಿದೆ.

ಸುಪ್ರೀಂ ಕೋರ್ಚ್‌ ನೇಮಿತ ನ್ಯಾ.ಲೋಧಾ ಸಮಿತಿ 3 ವರ್ಷಗಳ ಅಧಿಕಾರದ ಬಳಿಕ 3 ವರ್ಷ ಕೂಲಿಂಗ್‌ ಆಫ್‌ ಶಿಫಾರಸು ಮಾಡಿತ್ತು. ಆದರೆ ಬಿಸಿಸಿಐ ಕೂಲಿಂಗ್‌ ಆಫ್‌ ನಿಯಮವನ್ನೇ ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಚ್‌ಗೆ ಅರ್ಜಿ ಸಲ್ಲಿಸಿತ್ತು. ಬಿಸಿಸಿಐ ಪರ ವಾದ ಮಂಡಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ದೇಶದಲ್ಲಿ ಕ್ರಿಕೆಟ್‌ ಆಟವನ್ನು ಗಣನೀಯವಾಗಿ ಸುವ್ಯವಸ್ಥಿತಗೊಳಿಸಲಾಗಿದೆ. ಉಪನಿಯಮಗಳನ್ನು ನ್ಯಾಯಾಲಯದ ಅನುಮತಿ ಪಡೆದು ಬದಲಾವಣೆ ಮಾಡಬಹುದು ಎಂದು ಸುಪ್ರೀಂ ಕೋರ್ಚ್‌ ಹೇಳಿದೆ. ಬಿಸಿಸಿಐ ಸ್ವಾಯತ್ತ ಸಂಸ್ಥೆಯಾಗಿದ್ದು, ಎಲ್ಲಾ ಬದಲಾವಣೆಗಳನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದರು.

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ 2ನೇ ಅವಧಿಗೆ ಮುಂದುವರಿಯಲು ಸುಪ್ರೀಂ ಕೋರ್ಟ್ ಸಮ್ಮತಿ!

ಮಂಗಳವಾರ ನಡೆದ ವಿಚಾರಣೆ ವೇಳೆಯೇ ಕೂಲಿಂಗ್‌ ಆಫ್‌ ನಿಯಮವನ್ನು ರದ್ದು ಮಾಡಲು ಸಾಧ್ಯವಿಲ್ಲ. ಕೂಲಿಂಗ್‌ ಆಫ್‌ ನಿಯಮವಿರುವುದೇ ಕ್ರಿಕೆಟ್‌ ಆಡಳಿತದಲ್ಲಿ ಏಕಸ್ವಾಮ್ಯವಿರಬಾರದು ಎನ್ನುವ ಕಾರಣಕ್ಕೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು. ಇದೀಗ ತಿದ್ದುಪಡಿಗೆ ಕೋರ್ಚ್‌ ಅನುಮತಿ ನೀಡಿದೆ. 2019ರಲ್ಲಿ ಬಿಸಿಸಿಐ ಆಡಳಿತಕ್ಕೆ ಪಾದಾರ್ಪಣೆ ಮಾಡಿದ್ದ ಗಂಗೂಲಿ ಹಾಗೂ ಜಯ್‌ ಶಾ ಅವರ ಅಧಿಕಾರ ಅವಧಿ ಅಕ್ಟೋಬರ್‌ 23ಕ್ಕೆ ಅಂತ್ಯಗೊಳ್ಳಬೇಕಿತ್ತು. ಇದೀಗ ಇಬ್ಬರೂ ಇನ್ನೂ 3 ವರ್ಷ ಹುದ್ದೆಯಲ್ಲಿ ಇರಬಹುದಾಗಿದೆ.