ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತುಗಳು 2021ರ ಪಶ್ಚಿಮ ಬಂಗಾಳ ಚುನಾವಣೆ ಸಮಯದಿಂದಲೂ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ಘಟನೆಗಳು ನಡೆದಿದೆ. ಇದೀಗ ಮತ್ತೆ ದಾದಾ ರಾಜಕೀಯ ಎಂಟ್ರಿ ಮಾತು ಭುಗಿಲೆದ್ದಿದೆ. ಇದಕ್ಕೆ ಕಾರಣ ಸೌರವ್ ಗಂಗೂಲಿಯಲ್ಲಿ ದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭೇಟಿಯಾಗಿದ್ದಾರೆ.

ನವದೆಹಲಿ(ಆ.15): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ಸೇರಿಕೊಳ್ಳುತ್ತಾರಾ? ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಾರಾ? ಈ ರೀತಿ ಹಲವು ಪ್ರಶ್ನೆಗಳು ಕಳೆದ 2 ವರ್ಷದಿಂದ ಪದೇ ಪದೇ ಕೇಳಿಬರುತ್ತಲೇ ಇದೆ. ಇದೀಗ ಮತ್ತೆ ಸೌರವ್ ಗಂಗೂಲಿ ರಾಜಕೀಯ ಇನ್ನಿಂಗ್ಸ್ ಮಾತು ಆರಂಭಗೊಂಡಿದೆ. ಇದಕ್ಕೆ ಕಾರಣ ಇಂದು ಸೌರವ್ ಗಂಗೂಲಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಇಬ್ಬರು ನಾಯಕರನ್ನು ಭೇಟಿಯಾಗಿರುವುದು ಸೌರವ್ ಗಂಗೂಲಿ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡಿದೆ. ಯಾವ ಕಾರಣಕ್ಕೆ ಗಂಗೂಲಿ, ಪ್ರಧಾನಿ ಹಾಗೂ ಅಮಿತ್ ಶಾ ಭೇಟಿಯಾಗಿದ್ದಾರೆ ಅನ್ನೋ ಮಾಹಿತಿ ಸ್ಪಷ್ಟವಾಗಿಲ್ಲ. ಆದರೆ ಇದು ರಾಜಕೀಯ ಇನ್ನಿಂಗ್ಸ್ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. 

ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವಧಿ ಇದೇ ಸೆಪ್ಟೆಂಬರ್ ತಿಂಗಳಿಗೆ ಅಂತ್ಯವಾಗಲಿದೆ. ಹೀಗಾಗಿ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆಗೆ ಗಂಗೂಲಿ ಮುಂದಾಗಿದ್ದಾರೆ ಅನ್ನೋ ಮಾತುಗಳು ಇವೆ. ಇದರ ಜೊತೆಗೆ ಎರಡನೇ ಬಾರಿಗೆ ಬಿಸಿಸಿಐ ಅಧಿಕಾರದಲ್ಲಿ ಮುಂದುವರಿಯುವ ಕಸರತ್ತುಗಳು ನಡೆಯುತ್ತಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಈ ಬೆಳವಣಿಗೆಗಳ ನಡುವೆ ಸೌರವ್ ಗಂಗೂಲಿ ಹಾಗೂ ಮೋದಿ , ಶಾ ಭೇಟಿ ಕುತೂಹಲ ಕೆರಳಿಸಿದೆ.

75ನೇ ಸ್ವಾತಂತ್ರ್ಯೋತ್ಸವಕ್ಕೆ ದಿಗ್ಗಜರ ಕ್ರಿಕೆಟ್ ಧಮಾಕ.! ದಾದಾಗಿರಿ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ರೆಡಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಈಗಿನಿಂದಲೇ ಕಸರತ್ತು ಆರಂಭಗೊಂಡಿದೆ. ಇದಕ್ಕಾಗಿ ಬಂಗಾಳದಲ್ಲಿ ಪಕ್ಷವನ್ನು ಬಲಪಡಿಸಲು ಹಲವು ಯೋಜನೆಗಳನ್ನು ಬಿಜೆಪಿ ಜಾರಿಗೆ ತಂದಿದೆ. ಗಂಗೂಲಿ ಬಿಜೆಪಿ ಸೇರಿಕೊಂಡರೆ ಬಂಗಾಳದಲ್ಲಿ ರಾಜಕೀಯ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ. ಇಷ್ಟೇ ಅಲ್ಲ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ವಿರುದ್ಧ ಭರ್ಜರಿ ಗೆಲುವಿಗೆ ಪ್ಲಾನ್ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಿಗೆ ಬಿಸಿಸಿಐ ಅಧ್ಯಕ್ಷ ಅಧಿಕಾರ ಅವಧಿ ಅಂತ್ಯಗೊಳ್ಳುತ್ತಿರುವ ಕಾರಣ ಗಂಗೂಲಿಯನ್ನು ಪಶ್ಚಿಮ ಬಂಗಳಾದ ಪ್ರಮುಖ ನಾಯಕನಾಗಿ ಪಕ್ಷ ಸೇರಿಸಿಕೊಳ್ಳಲು ಬಿಜೆಪಿ ಈ ಹಿಂದೆಯೂ ಪ್ರಯತ್ನಿಸಿದೆ. ಇದೀಗ ಬಿಜೆಪಿ ಪ್ರಯತ್ನಗಳು ಕೈಗೂಡಿದಂತೆ ಕಾಣುತ್ತಿದೆ.

ಕಳೆದ ವರ್ಷ ಸೌರವ್ ಗಂಗೂಲಿ ಅಂದಿನ ಸ್ಪೀಕರ್ ಜಗದೀಪ್ ಧನಕರ್ ಭೇಟಿಯಾಗಿದ್ದರು. ದಿಢೀರ್ ಭೇಟಿಯಿಂದ ಗಂಗೂಲಿ ರಾಜಕೀಯಕ್ಕೆ ಎಂಟ್ರಿಕೊಡಲಿದ್ದಾರೆ ಅನ್ನೋ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಸದ್ಯ ಜಗದೀಪ್ ಧನಕರ್ ಉಪ ರಾಷ್ಟ್ರಪತಿಯಾಗಿದ್ದಾರೆ.

ಮೋದಿಯ ಉತ್ತರಾಧಿಕಾರಿ ರೇಸಲ್ಲಿ 3 ನಾಯಕರು: ಭಾರತೀಯರ ಆಯ್ಕೆ ಯಾರು..?

ಬಿಸಿಸಿಐ ಅರ್ಜಿ: ಆ್ಯಮಿಕಸ್‌ ಕ್ಯೂರಿ ನೇಮಿಸಿದ ಸುಪ್ರೀಂ
ಪದಾಧಿಕಾರಿಗಳ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಮಂಡಳಿಯ ನಿಯಮಾವಳಿಯ ಪರಿಷ್ಕರಣೆಗೆ ಕೋರಿ ಬಿಸಿಸಿಐ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಚ್‌ ಆ್ಯಮಿಕಸ್‌ ಕ್ಯೂರಿ(ನ್ಯಾಯಾಲಯ ಮಿತ್ರ)ಯನ್ನು ನೇಮಕ ಮಾಡಿದೆ. ನ್ಯಾಯಮೂರ್ತಿ ಎನ್‌.ವಿ.ರಮಣ, ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿ, ಹಿರಿಯ ವಕೀಲ ಮನೀಂದರ್‌ ಸಿಂಗ್‌ರನ್ನು ಆ್ಯಮಿಕಸ್‌ ಕ್ಯೂರಿಯಾಗಿ ನೇಮಿಸಿತು. ಮಂಡಳಿಯ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಸೇರಿದಂತೆ ಇನ್ನೂ ಕೆಲ ಪದಾಧಿಕಾರಿಗಳ ಅಧಿಕಾರಾವಧಿಯ ಕುರಿತು ಇರುವ ನಿಯಮವನ್ನು ಪರಿಷ್ಕರಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.