BCCI ಒಂದೇ ತಪ್ಪಿಗೆ ಡೆಕ್ಕನ್ ಚಾರ್ಜರ್ಸ್‌ಗೆ 4800 ಕೋಟಿ ಪರಿಹಾರ..!
ಅವಧಿಗಿಂತ ಮೊದಲೇ ಟೂರ್ನಿಯಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಕಿಕೌಟ್ ಮಾಡಿದ ತಪ್ಪಿಗೆ ಇದೀಗ ಬಿಸಿಸಿಐ ಬರೋಬ್ಬರಿ 4 ಸಾವಿರ ಕೋಟಿ ರುಪಾಯಿಗೂ ಅಧಿಕ ದಂಡ ತೆರಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಜು.20): 2009ರ ಐಪಿಎಲ್ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್‌ಗೆ 4800 ಕೋಟಿ ರುಪಾಯಿ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್‌ನಿಂದ ನೇಮಕಗೊಂಡಿದ್ದ ಮಧ್ಯಸ್ಥಗಾರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ.ಕೆ.ಥಾಕ್ಕರ್ ಆದೇಶಿಸಿದ್ದಾರೆ. ಈ ಆದೇಶದ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
2012ರಲ್ಲಿ ಫ್ರಾಂಚೈಸಿ ಮೊತ್ತ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಐಪಿಎಲ್ನಿಂದ ಹೊರಹಾಕಿತ್ತು. ಆದರೆ ಗಡುವು ಮುಕ್ತಾಯಗೊಳ್ಳಲು ಇನ್ನೂ 30 ದಿನಗಳು ಇದ್ದರೂ, ಫ್ರಾಂಚೈಸಿ ರದ್ದುಗೊಳಿಸಿದ್ದಾಗಿ ಆರೋಪಿಸಿ ಡೆಕ್ಕನ್ ಸಂಸ್ಥೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥ ಸಾಬಾ ಕರೀಮ್‌ಗೆ ಗೇಟ್ ಪಾಸ್ ನೀಡಿದ ಬಿಸಿಸಿಐ!
ಈ ತೀರ್ಪಿನ ಬಗ್ಗೆ ನಮಗಿನ್ನು ತೀರ್ಪಿನ ಪ್ರತಿ ಲಭ್ಯವಾಗಿಲ್ಲ, ತೀರ್ಪಿನಲ್ಲಿ ಏನೆಂದು ಆದೇಶಿಸಿದೆ ಎನ್ನುವುದನ್ನು ನೋಡಿದ ಬಳಿಕವಷ್ಟೇ ನಾವೇನು ಮಾಡಲು ಸಾಧ್ಯ ಎನ್ನುವುದನ್ನು ತೀರ್ಮಾನಿಸುತ್ತೇವೆ ಎಂದು ಬಿಸಿಸಿಐ ಮಧ್ಯಂತರ ಕಾರ್ಯ ನಿರ್ವಾಹಕ ಅಧಿಕಾರಿ ಹೇಮಾಂಗ್ ಆಮಿನ್ ಹೇಳಿದ್ದಾರೆ.
ಆಡಂ ಗಿಲ್‌ಕ್ರಿಸ್ಟ್ ನೇತೃತ್ವದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವು ಎರಡನೇ ಆವೃತ್ತಿಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಐಪಿಎಲ್ ಜಗತ್ತಿನ ಖ್ಯಾತ ಟೂರ್ನಿಯಾಗಿ ಹೊರಹೊಮ್ಮಿದ್ದರು, ವಿವಾದಗಳಿಂದ ಹೊರತಾಗಿಲ್ಲ. ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳು ಟೂರ್ನಿಯ ಪ್ರಖ್ಯಾತಿಗೆ ಮಸಿ ಬಳಿದಿವೆ.