ನವದೆಹಲಿ(ಏ.09): ಭಾರತ ಟೆಸ್ಟ್‌ ತಂಡದ ತಾರಾ ಆಟಗಾರರು ಮುಂದಿನ 2 ತಿಂಗಳು ಐಪಿಎಲ್‌ನಲ್ಲಿ ತೊಡಗಲಿದ್ದು, ಇದೇ ಸಂದರ್ಭದಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಯಾರಿ ನಡೆಸಲು ಬಿಸಿಸಿಐ ವ್ಯವಸ್ಥೆ ಕಲ್ಪಿಸುವ ಪ್ರಸ್ತಾಪವಿರಿಸಿದೆ. 

ಐಪಿಎಲ್‌ ಮುಕ್ತಾಯಗೊಂಡ ಕೇವಲ 20 ದಿನಗಳಲ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಡೆಯಲಿದೆ. ಹೀಗಾಗಿ, ಆಟಗಾರರು ಇಚ್ಛಿಸಿದರೆ ‘ಡ್ಯೂಕ್‌’ ಕೆಂಪು ಚೆಂಡುಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ. ವಿಶ್ವ ಚಾಂಪಿಯನ್‌ನ ಫೈನಲ್‌ನಲ್ಲಿ ಭಾರತ, ನ್ಯೂಜಿಲೆಂಡ್‌ ವಿರುದ್ಧ ಸೌಥಾಂಪ್ಟನ್‌ನಲ್ಲಿ ಆಡಲಿದೆ. 

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಪಂದ್ಯಗಳಿಗೆ ‘ಡ್ಯೂಕ್‌’ ಬ್ರಾಂಡ್‌ನ ಚೆಂಡುಗಳನ್ನು ಬಳಕೆ ಮಾಡಲಿದ್ದು, ಭಾರತದಲ್ಲಿ ಬಳಸುವ ‘ಎಸ್‌ಜಿ’ ಚೆಂಡಿಗಿಂತ ವಿಭಿನ್ನವಾಗಿರಲಿದೆ. ಹೀಗಾಗಿ, ಆ ಚೆಂಡಿನೊಂದಿಗೆ ಅಭ್ಯಾಸ ನಡೆಸಿದರೆ ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ಬಿಸಿಸಿಐ, ಆಟಗಾರರಿಗೆ ಆಯ್ಕೆ ನೀಡಿದೆ.

ಇಂದಿನಿಂದ ಐಪಿಎಲ್‌ ಟಿ20 ಕದನ ಶುರು; ಹ್ಯಾಟ್ರಿಕ್‌ ಟ್ರೋಫಿ ಮೇಲೆ ಮುಂಬೈ ಕಣ್ಣು..!

ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್‌ 09ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.