Asianet Suvarna News Asianet Suvarna News

ಕ್ರಿಕೆಟ್‌ ಸಲಹಾ ಸಮಿತಿಗೆ ಗಂಭೀರ್‌, ಮದನ್‌ ಲಾಲ್‌!

ಕ್ರಿಕೆಟ್ ಸಲಹಾ ಸಮಿತಿಗೆ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಹೀರೋಗಳಾದ ಮದನ್ ಲಾಲ್, ಗೌತಮ್ ಗಂಭೀರ್ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

BCCI likely to appoint Madan Lal Gautam Gambhir as CAC members
Author
New Delhi, First Published Jan 13, 2020, 12:59 PM IST
  • Facebook
  • Twitter
  • Whatsapp

ನವದೆಹಲಿ(ಜ.13): ಕ್ರಿಕೆಟ್‌ ಸಲಹಾ ಸಮಿತಿಗೆ (ಸಿಎಸಿ) ಮಾಜಿ ಕ್ರಿಕೆಟಿಗರಾದ ಗೌತಮ್‌ ಗಂಭೀರ್‌ ಹಾಗೂ ಮದನ್‌ ಲಾಲ್‌ರನ್ನು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ. 

BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

ಸಮಿತಿಯ 3ನೇ ಸದಸ್ಯರಾಗಿ ಮುಂಬೈನ ಮಹಿಳಾ ಕ್ರಿಕೆಟರ್‌ ಸುಲಕ್ಷಣಾ ನಾಯ್ಕ್ ಅವರನ್ನು ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸಿಎಸಿ 2020ರಿಂದ ಮುಂದಿನ 4 ವರ್ಷಗಳಿಗೆ ರಾಷ್ಟ್ರೀಯ ತಂಡಗಳ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡಲಿದೆ. ಈ ಸಮಿತಿ ಶೀಘ್ರದಲ್ಲೇ ಸಭೆ ಸೇರಲಿದ್ದು, ಭಾರತ ಪುರುಷರ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ಚರ್ಚಿಸಲಿದೆ.

ರಣಜಿ ಟ್ರೋಫಿ: ಪೂಜಾರ ದ್ವಿಶತಕ ಸಂಭ್ರಮ

1983ರ ಏಕದಿನ ವಿಶ್ವಕಪ್ ಹೀರೋ ಮದನ್ ಲಾಲ್  ಕ್ರಿಕೆಟ್‌ ಸಲಹಾ ಸಮಿತಿ ಮುಖ್ಯಸ್ಥರಾಗಿರಲಿದ್ದು, 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಗೌತಮ್ ಗಂಭೀರ್ ಸಹಾಯಕ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಎಂ.ಎಸ್‌.ಕೆ.ಪ್ರಸಾದ್‌ ಅವರ ಕಾರ್ಯಾವಧಿ ಮುಕ್ತಾಯಗೊಂಡಿದ್ದು, ಅವರ ಬದಲಿಗೆ ಹೊಸಬರನ್ನು ಆರಿಸಬೇಕಿದೆ. ಆಯ್ಕೆ ಸಮಿತಿ ಸದಸ್ಯ ಗಗನ್‌ ಖೋಡಾ ಜಾಗಕ್ಕೂ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಕಿರಿಯರ ತಂಡಗಳ ಆಯ್ಕೆ ಸಮಿತಿಯಲ್ಲೂ ಬದಲಾವಣೆ ಆಗಬೇಕಿದೆ.

Follow Us:
Download App:
  • android
  • ios