Asianet Suvarna News Asianet Suvarna News

IPL Media Rights: ಬಿಸಿಸಿಐನಿಂದ ಟೆಂಡರ್ ಆಹ್ವಾನ

* 2023-2027ರ ಅವಧಿಯ ಐಪಿಎಲ್‌ ಮಾಧ್ಯಮ ಹಕ್ಕು ಹರಾಜಿಗೆ ಬಿಸಿಸಿಐ ಟೆಂಡರ್ ಆಹ್ವಾನ

* ಟೆಂಡರ್‌ ಖರೀದಿಸಲು ಮೇ 10ರವರೆಗೆ ಗಡುವು

* ಪ್ರತೀ ಟೆಂಟರ್‌ಗೆ 25 ಲಕ್ಷ ರುಪಾಯಿ ಬೆಲೆ ನಿಗದಿ

BCCI floats tender invitation for IPL media rights 2023 to 2027 kvn
Author
Bengaluru, First Published Mar 30, 2022, 7:56 AM IST

ಮುಂಬೈ(ಮಾ.30): 2023-2027ರ ಅವಧಿಯ ಐಪಿಎಲ್‌ ಮಾಧ್ಯಮ ಹಕ್ಕು (IPL Media Rights) ಹರಾಜಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) (BCCI) ಮಂಗಳವಾರ ಟೆಂಡರ್‌ ಆಹ್ವಾನಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿದ ಬಿಸಿಸಿಐ, ಟೆಂಟರ್‌ ಖರೀದಿಸಲು ಮೇ 10ರ ವರೆಗೆ ಸಮಯ ನೀಡಿದೆ. ಅಲ್ಲದೇ ಪ್ರತೀ ಟೆಂಟರ್‌ಗೆ 25 ಲಕ್ಷ ರುಪಾಯಿ ಬೆಲೆ ನಿಗದಿ ಮಾಡಿದ್ದು, ಹರಾಜು ಪ್ರಕ್ರಿಯೆಯನ್ನು ಜೂನ್‌ 12ರಿಂದ ನಡೆಸಲಾಗುವುದು ಎಂದು ಮಾಹಿತಿ ನೀಡಿದೆ.

ಬಿಸಿಸಿಐ ಮಾಧ್ಯಮ ಹಕ್ಕು ವಿತರಣೆ ಮೂಲಕ 50,000 ಕೋಟಿ ರು.ಗೂ ಹೆಚ್ಚು ಬಂಪರ್‌ ಮೊತ್ತ ನಿರೀಕ್ಷಿಸಿದ್ದು, ಹರಾಜು ಪ್ರಕ್ರಿಯೆಯನ್ನು ಟಿವಿ, ಡಿಜಿಟಲ್‌ ಹಕ್ಕು ಸೇರಿದಂತೆ 4 ವಿಭಾಗಗಳಲ್ಲಿ ನಡೆಸುವ ಸಾಧ್ಯತೆ ಇದೆ. ಈ ಬಾರಿ ಲಖನೌ ಸೂಪರ್‌ ಜೈಂಟ್ಸ್‌ (Lucknow Supergiants) ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಗಳು ಸೇರ್ಪಡೆಯಾಗಿದ್ದು, ಪಂದ್ಯಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಜಾಹೀರಾತು ಮೂಲಕ ಹರಿದುಬರುವ ಹಣ ಮತ್ತಷ್ಟು ಏರಿಕೆಯಾಗಲಿದೆ. ಹೀಗಾಗಿ ಹರಾಜಿನಲ್ಲಿ ಹಲವು ಕಂಪೆನಿಗಳು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಮೊದಲು 2018ರಲ್ಲಿ ಸ್ಟಾರ್‌ ಇಂಡಿಯಾ 16,347.5 ಕೋಟಿ ರು.ಗೆ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದರ ಅವಧಿ 2022 ಐಪಿಎಲ್‌ಗೆ ಮುಕ್ತಾಯಗೊಳ್ಳಲಿದೆ.

ಏಕದಿನ ರ‍್ಯಾಂಕಿಂಗ್‌: 6ನೇ ಸ್ಥಾನಕ್ಕೇರಿದ ಮಿಥಾಲಿ ರಾಜ್‌

ದುಬೈ: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ ಹಾಗೂ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಮಿಥಾಲಿ 2ನೇ ಸ್ಥಾನ ಮೇಲಕ್ಕೇರಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಮೃತಿ ಮಂಧನಾ 10ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಗೋಸ್ವಾಮಿ ಬೌಲಿಂಗ್‌ ರಾರ‍ಯಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೆ ಪ್ರಗತಿ ಸಾಧಿಸಿದ್ದಾರೆ. ಆದರೆ ಆಲ್ರೌಂಡ್‌ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ದೀಪ್ತಿ ಶರ್ಮಾ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮೊದಲ ಏಕದಿನ: ಪಾಕ್‌ ಸೋಲುಣಿಸಿದ ಆಸೀಸ್‌

ಲಾಹೋರ್‌: ಆತಿಥೇಯ ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಪ್ರೇಲಿಯಾ 88 ರನ್‌ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ ನಿಗದಿತ 50 ಓವರಲ್ಲಿ 7 ವಿಕೆಟ್‌ ಕಳೆದುಕೊಂಡು 313 ರನ್‌ ಕಲೆ ಹಾಕಿತು. ಟ್ರ್ಯಾವಿಸ್‌ ಹೆಡ್‌(72 ಎಸೆತಗಳಲ್ಲಿ 101) ಆಕರ್ಷಕ ಶತಕ ಸಿಡಿಸಿದರೆ, ಬೆನ್‌ ಮೆಕ್‌ಡೆರ್ಮೊಟ್‌(55) ಅರ್ಧಶತಕ ಬಾರಿಸಿದರು. ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ 45.2 ಓವರ್‌ಗಳ್ಲಲಿ 225 ರನ್‌ ಗಳಿಸಿ ಆಲೌಟಾಯಿತು. ಇಮಾಮ್‌-ಉಲ್‌-ಹಕ್‌(103) ಶತಕ ಬಾರಿಸಿದರೆ, ಬಾಬರ್‌ ಆಜಂ 57 ರನ್‌ ಗಳಿಸಿದರು. ಆ್ಯಡಂ ಜಂಪಾ 38 ರನ್‌ಗೆ 4 ವಿಕೆಟ್‌ ಕಿತ್ತರು.

ಐಪಿಎಲ್‌ ಮಾಧ್ಯಮ ಹಕ್ಕು ಜೂನ್‌ 12ಕ್ಕೆ ಹರಾಜು ಸಾಧ್ಯತೆ..!

ಏಕದಿನ: ನೆದರ್‌ಲೆಂಡ್ಸ್‌ ವಿರುದ್ಧ ಕಿವೀಸ್‌ಗೆ ಜಯ

ಮೌಂಟ್‌ ಮಾಂಗನುಯಿ: ವಿಲ್‌ ಯಂಗ್‌ ಶತಕದ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್‌ ತಂಡ ನೆದರ್‌ಲೆಂಡ್ಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ನೆದರ್‌ಲೆಂಡ್ಸ್‌ 49.4 ಓವರ್‌ಗಳಲ್ಲಿ 202 ರನ್‌ಗೆ ಆಲೌಟಾಯಿತು. ಮೈಕಲ್‌ ರಿಪ್ಪನ್‌(67) ಅರ್ಧಶತಕ ಬಾರಿಸಿದರೆ, ನಾಯಕ ಪೀಟರ್‌ ಸೀಲರ್‌ 43 ರನ್‌ ಕೊಡುಗೆ ನೀಡಿದರು. ಸಾಧಾರಣ ಗುರಿ ಬೆನ್ನತ್ತಿದ ಕಿವೀಸ್‌ 38.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ಹೆನ್ರಿ ನಿಕೋಲ್ಸ್‌ 57 ರನ್‌ ಗಳಿಸಿದರೆ, ಯಂಗ್‌ 103 ರನ್‌ ಸಿಡಿಸಿ ಔಟಾಗದೆ ಉಳಿದರು.

Follow Us:
Download App:
  • android
  • ios