ಐಪಿಎಲ್ ಟೂರ್ನಿಯಲ್ಲಿನ ರೂಲ್ಸ್ ಬದಲಾಗಿದೆ. ಇಷ್ಟು ದಿನ LBWಗೆ ಡಿಆರ್‌ಎಸ್ ಪಡೆಯಲು ಅವಕಾಶವಿತ್ತು. ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ವೈಡ್, ನೋ ಬಾಲ್‌ಗೂ ಡಿಆರ್‌ಎಸ್ ಪಡೆಯಲು ಅವಕಾಶವಿದೆ.

ಮುಂಬೈ(ಮಾ.06): ಮಹಿಳಾ ಐಪಿಎಲ್ ಟೂರ್ನಿ ಅದ್ಧರಿಯಾಗಿ ಆರಂಭಗೊಂಡಿದ್ದರೆ, ಪುರುಷರ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ಬಿಸಿಸಿಐ ಐಪಿಎಲ್ ಟೂರ್ನಿ ನೀತಿಯಲ್ಲಿ ಕೆಲ ಬದಲಾವಣೆ ಮಾಡಿದೆ. ಕ್ರಿಕೆಟ್‌ನಲ್ಲಿ ಡಿಆರ್‌ಎಸ್(decision review system) ನಿಯಮ ಹೊಸದೇನಲ್ಲ. ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಡಿಆರ್‌ಎಸ್ ನಿಯವಿದೆ. ಆದರೆ ಇದರ ಪರಿಮಿತಿ ಸೀಮಿತವಾಗಿತ್ತು. ಇದೀಗ ಬಿಸಿಸಿಐ ಡಿಆರ್‌ಎಸ್ ನಿಯಮದ ವ್ಯಾಪ್ತಿಯನ್ನು ಹೆಚ್ಚಿಸಿದ್ದಾರೆ. ಕೇವಲ ಎಲ್‌ಬಿಡಬ್ಲೂಗೆ ಮಾತ್ರ ಪಡೆಯಲಾಗುತ್ತಿದ್ದ ಡಿಆರ್‌ಎಸ್ ನಿಯಮ ಇನ್ನು ಮುಂದೆ ವೈಡ್, ನೋ ಬಾಲ್‌ಗೂ ಪಡೆಯಬಹುದು. ಈಗಾಗಲೇ ಈ ಹೊಸ ನಿಯಮವನ್ನು ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. 2023ರ ಐಪಿಎಲ್ ಟೂರ್ನಿಯಲ್ಲಿ ಈ ನಿಯಮ ಜಾರಿಗೆ ಬರುತ್ತಿದೆ.

ಹೆಚ್ಚುವರಿ ಬೌನ್ಸ್ ಎಸೆತವನ್ನು ವೈಡ್ ಎಂದು ಘೋಷಿಸಲಾಗುತ್ತದೆ. ಇತ್ತ ವೇಸ್ಟ್ ಮೇಲೆಕ್ಕೆ ಎಸೆದ ಎಸೆತ, ಹೆಚ್ಚಾಗಿ ಫುಲ್ ಟಾಸ್ ಎಸೆತ ಸೊಂಟಕ್ಕೂ ಮೇಲೆ ಇದ್ದರೆ ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ. ಈ ಎರಡು ಅಂಪೈರ್ ತೀರ್ಪುಗಳು ಹಲವು ಬಾರಿ ವಿವಾದಕ್ಕೆ ಕಾರಣವಾಗಿದೆ. ಸೋಲು ಗೆಲುವಿನ ಬಳಿಕ ಒಬ್ಬರ ಪರವಾಗಿ ತೀರ್ಪು ನೀಡಲಾಗಿದೆ ಅನ್ನೋ ವಿವಾದ ಹೊಸದೇನಲ್ಲ. ಇದೀಗ ಬಿಸಿಸಿಐ ಹೊಸ ನಿಯಮ ಪ್ರಕಾರ, ವೈಡ್ ಅಥವಾ ನೋ ಬಾಲ್ ಎಸೆತವನ್ನು ಡಿಆರ್‌ಎಸ್ ಮೂಲಕ ಪ್ರಶ್ನಿಸಲು ಸಾಧ್ಯವಿದೆ. 

WPL 2023: RCB ಮೊದಲ ಪಂದ್ಯ ದೇವರಿಗೆ ಅರ್ಪಣೆ..!

ಅಂಪೈರ್ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್ ಪಡೆದುಕೊಳ್ಳಬಹುದು. ಈ ಮೂಲಕ ವೈಡ್ ಅಥವಾ ನೋ ಬಾಲ್ ಪ್ರಶ್ನಿಸಿ ಖಚಿತಪಡಿಸಿಕೊಳ್ಳಬಹುದು. ವೈಡ್ ನೋ ಬಾಲ್ ಡಿಆರ್‌ಎಸ್ ತೀರ್ಪು ಪ್ರಶ್ನಿಸಿ ತಪ್ಪಾದರೆ ಎರಡು ಅವಕಾಶಗಳಿವೆ. ಇನ್ನು ಲೈಗ್ ಬೈ ಸೇರಿದಂತೆ ಇತರ ಕೆಲ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. 

ಈಗಾಗಲೇ ಮಹಿಳಾ ಐಪಿಎಲ್ ಪಂದ್ಯದಲ್ಲಿ ಹೊಸ ಡಿಆರ್‌ಎಸ್ ಅವಕಾಶ ನೀಡಲಾಗಿದೆ. ಮಾರ್ಚ್ 4 ರಿಂದ ಮಹಿಳಾ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಆದರೆ ಮಹಿಳಾ ಟೂರ್ನಿಯಲ್ಲಿ ರಾಯಲ್‌ ಚಾಲೆಂಜ​ರ್‍ಸ್ ಬೆಂಗ​ಳೂ​ರು​(​ಆ​ರ್‌​ಸಿ​ಬಿ) ಹೀನಾಯ ಸೋಲಿನ ಆರಂಭ ಪಡೆದಿದೆ. ಶಫಾಲಿ ವರ್ಮಾ, ಮೆಗ್‌ ಲ್ಯಾನಿಂಗ್‌ರ ಸ್ಫೋಟಕ ಬ್ಯಾಟಿಂಗ್‌ ನೆರ​ವಿ​ನಿಂದ ಡೆಲ್ಲಿ ಕ್ಯಾಪಿ​ಟಲ್ಸ್‌ ತಂಡ ಆರ್‌​ಸಿಬಿ ವಿರುದ್ಧ 60 ರನ್‌ ಗೆಲುವು ಸಾಧಿ​ಸಿತು.ಭಾನು​ವಾರ ಪಂದ್ಯ ಮೊದಲ ಆವೃ​ತ್ತಿ ಐಪಿ​ಎ​ಲ್‌​ನ ಆರ್‌​ಸಿಬಿ ಪಂದ್ಯವನ್ನು ನೆನ​ಪಿ​ಸಿತು. 2008ರಲ್ಲಿ ಪುರುಷರ ಐಪಿಎಲ್‌ನ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ 222 ರನ್‌ ಚಚ್ಚಿಸಿಕೊಂಡಿದ್ದ ಆರ್‌ಸಿಬಿ, ಬಳಿಕ ಕೇವಲ 82ಕ್ಕೆ ಆಲೌ​ಟಾ​ಗಿ​ತ್ತು. ಇದೀಗ ಮಹಿಳಾ ತಂಡ ಕೂಡಾ ಮೊದಲ ಪಂದ್ಯ​ದಲ್ಲಿ 223 ರನ್‌ ಬಿಟ್ಟುಕೊಟ್ಟಿದೆ.

WPL: ಆರ್‌ಸಿಬಿ ವಿರುದ್ಧ ಐವರು ವಿದೇಶಿ ಆಟಗಾರ್ತಿಯರನ್ನು ಆಡಿಸಿ ನಿಯಮ ಮೀರಿತಾ ಡೆಲ್ಲಿ!