ಮುಂಬೈ(ಜ.30): ಒಂದಲ್ಲ, ಎರಡಲ್ಲ, ಬರೋಬ್ಬರಿ 87 ವರ್ಷದ ಭಾರತೀಯ ದೇಶಿ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ ರದ್ದಾಗಿದೆ. ಹೌದು, ಈ ಬಾರಿ ರಣಜಿ ಟೂರ್ನಿ ಆಯೋಜನೆಯಾಗುತ್ತಿಲ್ಲ. ರಣಜಿ ಟೂರ್ನಿ ಕ್ಯಾನ್ಸಲ್ ಸುದ್ದಿಯನ್ನು ಬಿಸಿಸಿಐ ಖಚಿತಪಡಿಸಿದೆ.

14ನೇ ಆವೃತ್ತಿ ಐಪಿಎಲ್‌ಗೂ ಟೈಟಲ್ ಪ್ರಾಯೋಜಕತ್ವ ಬಿಕ್ಕಟ್ಟು..?

ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಬಳಿಕ ಆಯೋಜನೆಯಾಗಬೇಕಿದ್ದ ರಣಜಿ ಟೂರ್ನಿಯನ್ನು ರದ್ದು ಮಾಡಲಾಗಿದ್ದು, ಇದರ ಬದಲಾಗಿ ವಿಜಯ್ ಹಜಾರೆ ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ ನಲ್ಲಿ ಆಯೋಜನೆಯಾಗುತ್ತಿದೆ.  ಹೀಗಾಗಿ ಸದ್ಯ ಕೇವಲ ತಿಂಗಳ ಲಭ್ಯತೆಯಲ್ಲಿ ರಣಜಿ ಟೂರ್ನಿ ಆಯಜನೆ ಸಾಧ್ಯವಿಲ್ಲ. ಹೀಗಾಗಿ ಬಿಸಿಸಿಐ ರಣಜಿ ಟೂರ್ನಿ ರದ್ದು ಮಾಡಿದೆ.

ಬಿಸಿಸಿಐ ಸಭೆಯಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆ ಸೇರಿದಂತೆ ಎಲ್ಲಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ತಮ್ಮ ಅಭಿಪ್ರಾಯ ಹೇಳಿತ್ತು. ಎಲ್ಲಾ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.