Asianet Suvarna News Asianet Suvarna News

17 ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ..!

ಭಾರತ ಮಹಿಳಾ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟ
ಗ್ರೇಡ್‌ 'ಎ' ನಲ್ಲಿ ಮೂವರು ಆಟಗಾರ್ತಿಯರಿಗೆ ಸ್ಥಾನ

BCCI confirm 3 Grade A players in India Womens central contract list kvn
Author
First Published Apr 28, 2023, 11:02 AM IST

ನವದೆಹಲಿ(ಏ.28): ಭಾರತ ಮಹಿಳಾ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಗುರುವಾರ ಬಿಸಿಸಿಐ ಪ್ರಕಟಿಸಿದ್ದು, 17 ಆಟಗಾರ್ತಿಯರಿಗೆ ಸ್ಥಾನ ದೊರೆತಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂಧನಾ, ದೀಪ್ತಿ ಶರ್ಮಾಗೆ ‘ಎ’ ದರ್ಜೆಯಲ್ಲಿ ಸ್ಥಾನ ಸಿಕ್ಕಿದ್ದು, ವಾರ್ಷಿಕ 50 ಲಕ್ಷ ರು. ವೇತನ ಪಡೆಯಲಿದ್ದಾರೆ. 

ಇನ್ನು ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್‌ ‘ಬಿ’ ದರ್ಜೆಗೆ ಬಡ್ತಿ ಪಡೆದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ ‘ಎ’ ದರ್ಜೆಯಿಂದ ‘ಬಿ’ ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ. ಇದೇ ವೇಳೆ ಕಳೆದ ವರ್ಷ ‘ಎ’ ದರ್ಜೆಯಲ್ಲಿದ್ದ ಲೆಗ್‌ ಸ್ಪಿನ್ನರ್‌ ಪೂನಂ ಯಾದವ್‌ ಗುತ್ತಿಗೆ ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ. ‘ಬಿ’ ದರ್ಜೆಯಲ್ಲಿರುವ ಆಟಗಾರ್ತಿಯರಿಗೆ ತಲಾ 30 ಲಕ್ಷ ರು., ‘ಸಿ’ ದರ್ಜೆಯಲ್ಲಿರುವ ಆಟಗಾರ್ತಿಯರಿಗೆ ತಲಾ 10 ಲಕ್ಷ ರುಪಾಯಿ ವೇತನ ಸಿಗಲಿದೆ.

ಕೇಂದ್ರ ಗುತ್ತಿಗೆ ಪಡೆದ ಆಟಗಾರ್ತಿಯರ ವಿವರ ಹೀಗಿದೆ ನೋಡಿ:

ಗ್ರೇಡ್‌ ಎ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ ಹಾಗೂ ದೀಪ್ತಿ ಶರ್ಮಾ

ಗ್ರೇಡ್‌ ಬಿ: ರೇಣುಕಾ ಠಾಕೂರ್, ಜೆಮಿಯಾ ರೋಡ್ರಿಗ್ಸ್‌, ಶಫಾಲಿ ವರ್ಮಾ, ರಿಚಾ ಘೋಷ್, ರಾಜೇಶ್ವರಿ ಗಾಯಕ್ವಾಡ್.

ಗ್ರೇಡ್‌ ಸಿ: ಮೆಘನಾ ಸಿಂಗ್, ದೇವಿಕಾ ವೈದ್ಯ, ಶಬ್ಬಿನೇನಿ ಮೆಘಾನಾ, ಅಂಜಲಿ ಶರ್ವಾನಿ, ಪೂಜಾ ವಸ್ತ್ರಾಕರ್, ಸ್ನೆಹ್ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ.

ಏಕದಿನ ವಿಶ್ವ​ಕ​ಪ್‌: ನ್ಯೂಜಿ​ಲೆಂಡ್‌ ತಂಡಕ್ಕೆ ಕೇನ್‌ ಮೆಂಟ​ರ್‌?

ವೆಲ್ಲಿಂಗ್ಟ​ನ್‌: ಐಪಿ​ಎ​ಲ್‌ನ ಉದ್ಘಾ​ಟನಾ ಪಂದ್ಯ​ದಲ್ಲಿ ಫೀಲ್ಡಿಂಗ್‌ ವೇಳೆ ಬಲ ಮೊಣ​ಕಾ​ಲಿನ ಗಾಯಕ್ಕೆ ತುತ್ತಾ​ಗಿದ್ದ ನ್ಯೂಜಿ​ಲೆಂಡ್‌ನ ಕೇನ್‌ ವಿಲಿ​ಯ​ಮ್ಸನ್‌ ಮುಂಬ​ರುವ ಐಸಿಸಿ ಏಕದಿನ ವಿಶ್ವ​ಕಪ್‌ ವೇಳೆಗೆ ಫಿಟ್‌ ಆಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರು ಫಿಟ್‌ ಆಗ​ದಿ​ದ್ದರೆ ಟೂರ್ನಿ​ಯಲ್ಲಿ ನ್ಯೂಜಿ​ಲೆಂಡ್‌ ತಂಡದ ಮೆಂಟರ್‌ ಆಗಿ ಕಾಣಿ​ಸಿ​ಕೊ​ಳ್ಳ​ಲಿ​ದ್ದಾರೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. ಈ ಬಗ್ಗೆ ತಂಡದ ಕೋಚ್‌ ಗ್ಯಾರಿ ಸ್ಟೀಡ್‌ ಕೂಡಾ ಸುಳಿವು ನೀಡಿದ್ದು, ಮಹ​ತ್ವದ ಟೂರ್ನಿಯಲ್ಲಿ ಕೇನ್‌​ರನ್ನು ತಂಡ​ದಿಂದ ಹೊರ​ಗಿ​ಡಲು ಇಷ್ಟ​ವಿಲ್ಲ ಎಂದಿ​ದ್ದಾ​ರೆ. ಸದ್ಯ ಕೇನ್‌ ಪುನ​ಶ್ಚೇ​ತನ ಶಿಬಿ​ರ​ದ​ಲ್ಲಿ​ದ್ದಾ​ರೆ.

IPL 2023: ರಾಯಲ್ಸ್‌ ಬೋನಿಗೆ ಬಿದ್ದ ಸೂಪರ್‌ ಕಿಂಗ್ಸ್‌!

ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ 3 ಮೀಸಲು ಆಟಗಾರರು

ನವದೆಹಲಿ: ಜೂನ್ 7ರಿಂದ ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡಲಿರುವ ಭಾರತ ತಂಡಕ್ಕೆ ಮೂವರು ಮೀಸಲು ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಋುತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌ ಹಾಗೂ ಸರ್ಫರಾಜ್‌ ಖಾನ್‌ ಮೀಸಲು ಆಟಗಾರರಾಗಿ ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಚಿಕಿತ್ಸೆಗೆ ಬೆಲ್ಜಿ​ಯಂಗೆ ಹೋಗಿ ಬಂದ ಜೋಫ್ರಾ ಆರ್ಚರ್‌!

ಮುಂಬೈ: ಮುಂಬೈ ಇಂಡಿ​ಯನ್ಸ್‌ನ ತಾರಾ ವೇಗಿ ಜೋಫ್ರಾ ಆರ್ಚರ್‌ 16ನೇ ಆವೃತ್ತಿ ಐಪಿ​ಎಲ್‌ ನಡು​ವೆಯೇ ಬೆಲ್ಜಿ​ಯಂಗೆ ತೆರಳಿ ಮೊಣಕೈ ಗಾಯ​ಕ್ಕೆ ಚಿಕಿತ್ಸೆ ಪಡೆ​ದಿದ್ದು, ಈಗ ತಂಡಕ್ಕೆ ಮರ​ಳಿ​ದ್ದಾರೆ. ಏ.2ರಂದು ಆರ್‌​ಸಿಬಿ ವಿರುದ್ಧ ಆಡಿದ್ದ ಆರ್ಚರ್‌ ಬಳಿಕ ವಿದೇ​ಶಕ್ಕೆ ಪ್ರಯಾ​ಣಿ​ಸಿ​ದ್ದರು. ಹೀಗಾಗಿ 4 ಪಂದ್ಯ​ಗ​ಳನ್ನು ತಪ್ಪಿ​ಸಿ​ಕೊಂಡಿ​ದ್ದರು. ಆದರೆ ಭಾರ​ತಕ್ಕೆ ಮರಳಿ ಪಂಜಾಬ್‌ ವಿರುದ್ಧದ ಏ.22ರ ಪಂದ್ಯ​ದಲ್ಲಿ ಅವರು ಆಡಿದ್ದು, ಬಳಿಕ ಗುಜ​ರಾತ್‌ ಪಂದ್ಯಕ್ಕೆ ಮತ್ತೆ ಗೈರಾ​ಗಿ​ದ್ದರು. ಅವರು ಆಡಲು ಇನ್ನಷ್ಟೇ ಸಂಪೂರ್ಣ ಫಿಟ್‌ ಆಗ​ಬೇ​ಕಿ​ದ್ದು, ಏ.30ರಂದು ರಾಜ​ಸ್ಥಾನ ವಿರು​ದ್ಧ ಕಣ​ಕ್ಕಿ​ಳಿ​ಯುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

Follow Us:
Download App:
  • android
  • ios