Asianet Suvarna News Asianet Suvarna News

ರಣಜಿ ಸೇರಿದಂತೆ ದೇಶಿ ಟೂರ್ನಿ ಆರಂಭ ದಿನಾಂಕ ಪ್ರಕಟಿಸಿದ ಬಿಸಿಸಿಐ!

ಕೊರೋನಾ ವೈರಸ್ ಕಾರಣ ಬಿಸಿಸಿಐ ವೇಳಾಪಟ್ಟಿ ಬುಡಮೇಲಾಗಿದೆ. ಕೆಲ ಟೂರ್ನಿಗಳು ರದ್ದಾಗಿದೆ. ಇದೀಗ ಸತತ ಪ್ರಯತ್ನದ ಮೂಲಕ ಐಪಿಎಲ್ ಟೂರ್ನಿ ಆಯೋಜನೆಗೆ ಸಿದ್ದತೆ ನಡೆಸಿದೆ. ದುಬೈನಲ್ಲಿ  ಐಪಿಎಲ್ ಟೂರ್ನಿ ಆಯೋಜಿಸಲಾಗಿದೆ. ಇದೀಗ ಬಿಸಿಸಿಐ ರಣಜಿ, ಸಯ್ಯದ್ ಮುಷ್ತಾಕ್ ಆಲಿ ಸೇರಿದಂತೆ ದೇಶಿ ಟೂರ್ನಿಗಳ ಆರಂಭ ದಿನಾಂಕ ನಿಗದಿ ಪಡಿಸಿದೆ.
 

BCCI announces tentative Ranji trophy and domestic cricket schedule
Author
Bengaluru, First Published Aug 9, 2020, 3:58 PM IST

ಮುಂಬೈ(ಆ.09): ಬಿಸಿಸಿಐ ಸದ್ಯ ಐಪಿಎಲ್ 2020 ಟೂರ್ನಿ ಆಯೋಜನೆ ಸಿದ್ಧತೆಯಲ್ಲಿದೆ. ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ವೈರಸ್ ಕಾರಣ ಮುಂದೂಡಿಕೆಯಾಗಿತ್ತು. ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣ ಬಾರದ ಹಿನ್ನಲೆಯಲ್ಲಿ ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಲಾಗುತ್ತಿದೆ. ಕೊರೋನಾ ಕಾರಣ ಆತಂಕದಲ್ಲಿದ್ದ ದೇಶಿ ಟೂರ್ನಿಗಳ ಆರಂಭಕ್ಕೆ ಬಿಸಿಸಿಐ ಮೂಹೂರ್ತ ಫಿಕ್ಸ್ ಮಾಡಿದೆ.

ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ಮುಂದಿನ ವರ್ಷ ಟಿ20 ವಿಶ್ವಕಪ್ ಭಾರತದಲ್ಲಿ..!.

ರಣಜಿ, ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಸೇರಿದಂತೆ ದೇಶಿ ಟೂರ್ನಿಗಳ ಆರಂಭಕ್ಕೆ ಬಿಸಿಸಿಐ ದಿನಾಂಕ ನಿಗದಿ ಪಡಿಸಿದೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ದೇಶಿ ಟೂರ್ನಿಗಳು ಆರಂಭಗೊಳ್ಳಲಿದೆ. ರಾಹುಲ್ ದ್ರಾವಿಡ್ ನೇತೃತ್ವದ ಸಮಿತಿ ದೇಶಿ ಟೂರ್ನಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ನವೆಂಬರ್ 19 ರಿಂದ ಡಿಸೆಂಬರ್ 7 ವರೆಗೆ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ನಡೆಯಲಿದೆ. 

ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!

ರಣಜಿ ಟೂರ್ನಿ ಡಿಸೆಂಬರ್ 13 ರಿಂದ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ. ಆದರೆ ದುಲೀಪ್ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿ ಟೂರ್ನಿ ನಡೆಯುವುದು ಅನುಮಾನವಾಗಿದೆ. ಸಿಕೆ ನಾಯ್ಡು ಸೇರಿದಂತೆ ಜ್ಯೂನಿಯರ್ ಕ್ರಿಕೆಟ್ ಟೂರ್ನಿ ಡಿಸೆಂಬರ್ 15 ರಿಂದ ಆರಂಭಗೊಳ್ಳಲಿದೆ. ರಣಜಿ ಟೂರ್ನಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಕೊರೋನಾ ವೈರಸ್ ಕಾರಣ ಪ್ರತಿ ಗುಂಪುಗಳು 2 ನಗರದ 2 ಮೈದಾನದಲ್ಲಿ ಪಂದ್ಯ ಆಡಲಿವೆ.   

Follow Us:
Download App:
  • android
  • ios