ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ಮುಂದಿನ ವರ್ಷ ಟಿ20 ವಿಶ್ವಕಪ್ ಭಾರತದಲ್ಲಿ..!
ಐಪಿಎಲ್ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಆ.08): 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಯಾರು ಆತಿಥ್ಯ ವಹಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ಐಸಿಸಿ ತೆರೆ ಎಳೆದಿದೆ. ಈ ಹಿಂದೆ ನಿಗದಿಯಾದಂತೆ 2021ರಲ್ಲಿ ಭಾರತದಲ್ಲೇ ಚುಟುಕು ವಿಶ್ವಕಪ್ ಟೂರ್ನಿ ಜರುಗಲಿದೆ ಎಂದು ಐಸಿಸಿ ಖಚಿತಪಡಿಸಿದೆ.
ಹೌದು, ಈ ವರ್ಷ ಅಂದರೆ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು 2022ಕ್ಕೆ ಮುಂದೂಡಲಾಗಿದ್ದು, ಆಸ್ಟ್ರೇಲಿಯಾವೇ ಆತಿಥ್ಯವನ್ನು ವಹಿಸಲಿದೆ. ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಟಿ20 ವಿಶ್ವಕಪ್ ಟೂರ್ನಿಗಳ ಆಯೋಜನೆ ಬಗ್ಗೆ ಶುಕ್ರವಾರ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಪ್ರೇಲಿಯಾ ಚರ್ಚೆ ನಡೆಸಿ ಒಪ್ಪಂದ ಮಾಡಿಕೊಂಡವು. ಬಳಿಕ ಐಸಿಸಿ ನಿರ್ಧಾರ ಪ್ರಕಟಿಸಿತು. ಇದೇ ವೇಳೆ 2023ರ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸುವುದು ಖಚಿತವಾಗಿದೆ.
ಧೋನಿಗೆ ಸರಿಸಾಟಿ ಯಾರೂ ಇಲ್ಲವೆಂದ ಹಿಟ್‌ಮ್ಯಾನ್..!
ಇನ್ನು 2021ರ ಫೆಬ್ರವರಿ 6ರಿಂದ ಮಾರ್ಚ್ 7ರ ವರೆಗೂ ನ್ಯೂಜಿಲೆಂಡ್ನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯನ್ನು 2022ರ ವರೆಗೂ ಮುಂದೂಡಲಾಗಿದೆ ಎಂದು ಐಸಿಸಿ ತಿಳಿಸಿದೆ.
ಭಾರತೀಯ ಅಭಿಮಾನಿಗಳಿಗೆ ಗುಡ್ ನ್ಯೂಸ್: ಹೌದು ಕೊರೋನಾದಿಂದ ಕಂಗೆಟ್ಟಿದ್ದ ಭಾರತೀಯ ಅಭಿಮಾನಿಗಳಿಗೆ ಈ ವರ್ಷ ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂದಿದೆ. ಇನ್ನು ಮುಂದಿನ ವರ್ಷ ಟಿ20 ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿರುವುದು ಅಭಿಮಾನಿಗಳಿಗೆ ಮತ್ತಷ್ಟು ಮುದ ನೀಡಲಿದೆ. ಇನ್ನೊಂದು ವರ್ಷ ಕಳೆದರೆ ಅಂದರೆ 2023ರಲ್ಲಿ ಏಕದಿನ ವಿಶ್ವಕಪ್ ಕೂಡಾ ಭಾರತದಲ್ಲಿ ನಡೆಯುವುದರಿಂದ ಕ್ರಿಕೆಟ್ ವೈಭವ ಭಾರತದಲ್ಲಿ ಮತ್ತಷ್ಟು ಹೆಚ್ಚಲಿದೆ.