ಬಾಂಗ್ಲಾ ಕ್ರಿಕೆಟ್ ಫ್ಯಾನ್‌ಗೆ ಭಾರತೀಯರು ಹೊಡೆದಿಲ್ಲ: ಹಲ್ಲೆ ಸುದ್ದಿ ನಿರಾಕರಿಸಿದ ಕಾನ್ಪುರ ಪೊಲೀಸರು
ಕಾನ್ಪುರದಲ್ಲಿ ನಡೆಯುತ್ತಿರುವ ಇಂಡಿಯಾ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ವೇಳೆ ಬಾಂಗ್ಲಾದೇಶ ಕ್ರಿಕೆಟ್ ಟೀಂನ ಅಭಿಮಾನಿ ಮೇಲೆ ಭಾರತೀಯ ಕ್ರಿಕೆಟ್ ಫ್ಯಾನ್‌ಗಳು ಹಲ್ಲೆ ಮಾಡಿದ್ದರು ಎಂದು ವರದಿಯಾಗಿತ್ತು ಆದರೆ ಈ ಸುದ್ದಿಯನ್ನು ಕಾನ್ಪುರ ಪೊಲೀಸರು ನಿರಾಕರಿಸಿದ್ದಾರೆ.
ಕಾನ್ಪುರದಲ್ಲಿ ನಡೆಯುತ್ತಿರುವ ಇಂಡಿಯಾ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ವೇಳೆ ಬಾಂಗ್ಲಾದೇಶ ಕ್ರಿಕೆಟ್ ಟೀಂನ ಅಭಿಮಾನಿ ಮೇಲೆ ಭಾರತೀಯ ಕ್ರಿಕೆಟ್ ಫ್ಯಾನ್‌ಗಳು ಹಲ್ಲೆ ಮಾಡಿದ್ದರು ಎಂದು ವರದಿಯಾಗಿತ್ತು. ಭಾರತದ ಕ್ರಿಕೆಟ್ ಅಭಿಮಾನಿಗಳು ಮಾಡಿದ ಹಲ್ಲೆಯಿಂದ ಬಾಂಗ್ಲಾ ಕ್ರಿಕೆಟ್ ಪ್ರೇಮಿ ಟೈಗರ್ ರೋಬಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಯನ್ನು ಈಗ ಕಾನ್ಪುರ ಪೊಲೀಸರು ನಿರಾಕರಿಸಿದ್ದಾರೆ. ಕ್ರೀಡಾಂಗಣದಲ್ಲಿ ದೈಹಿಕ ಹಲ್ಲೆಯಿಂದ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿ ಆಗಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕಾನ್ಪುರ ಪೊಲೀಸರು ಯಾರು ಕೂಡ ಬಾಂಗ್ಲಾ ಕ್ರಿಕೆಟ್ ಪ್ರೇಮಿ ಮೇಲೆ ಹಲ್ಲೆ ಮಾಡಿಲ್ಲ, ಆತ ಮೈದಾನದಲ್ಲಿ ಹಠಾತ್ ಆಗಿ ಕುಸಿದು ಬಿದ್ದ, ಕೂಡಲೇ ಆತನನ್ನು ಪೊಲೀಸರು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಲ್ಯಾಣ್‌ಪುರ ಎಸಿಪಿ ಅಭಿಷೇಕ್ ಪಾಂಡೆ, ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿ ಟೈಗರ್ ರೋಬಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಲ್ಲೆ ಮಾಡಿದರು ಎಂಬ ವರದಿಯನ್ನು ನಿರಾಕರಿಸಿದರು. ಅವರ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
"ನಂಗಿರೋದು ಎರಡೇ ಕೈಗಳು": ಹೋಟೆಲ್ ಸಿಬ್ಬಂದಿ ಮೇಲೆ ಸಿಟ್ಟು ಹೊರಹಾಕಿದ ವಿರಾಟ್ ಕೊಹ್ಲಿ!
ಮ್ಯಾಚ್ ವೇಳೆ ಟೈಗರ್ ಹೆಸರಿನ ಯುವಕ ಆರೋಗ್ಯ ಸ್ಥಿತಿ ಸಡನ್ ಆಗಿ ಹದಗೆಟ್ಟಿತ್ತು. ಹೀಗಾಗಿ ಅಲ್ಲಿದ ವೈದ್ಯಕೀಯ ತಂಡದ ಸಹಾಯದಿಂದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈಗ ಆತ ಆರೋಗ್ಯವಾಗಿದ್ದಾನೆ. ಎಲ್ಲಾದರೂ ಆತನಿಗೆ ಮತ್ತೆ ಹಠಾತ್ ಆಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಎಂಬ ಕಾರಣಕ್ಕೆ ಆತನ ಜೊತೆ ಅಧಿಕಾರಿಯೊಬ್ಬರನ್ನು ಬಿಡಲಾಗಿದೆ. ಆದರೆ ಯಾವುದೇ ಹಲ್ಲೆಯಂತಹ ಘಟನೆ ನಡೆದಿಲ್ಲ ಎಂದು ಎಸಿಪಿ ಅಭಿಷೇಕ್ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಸುದ್ದಿಸಂಸ್ಥೆ ಎಎನ್‌ಐ ಪೋಸ್ಟ್ ಮಾಡಿದ ವೀಡಿಯೋವೊಂದರಲ್ಲಿ ಮೈದಾನದಲ್ಲಿ ಅಸ್ವಸ್ಥನಾದ ಮತ್ತೊಬ್ಬ ಕ್ರಿಕೆಟ್ ಅಭಿಮಾನಿಯನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಗೆ ಸೇರಿದವನು ಎಂದು ವರದಿಯಾಗಿದೆ.
ಭಾರತದ ಸರಣಿಗೂ ತಟ್ಟಿದ ಬಾಂಗ್ಲಾ ಹಿಂಸಾಚಾರ ಬಿಸಿ! ಸ್ಟೇಡಿಯಂ ಸುತ್ತ ಬಿಗಿ ಭದ್ರತೆ
ಇತ್ತ ಕಾನ್ಪುರದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ನ ಮೊದಲ ಪಂದ್ಯದಲ್ಲಿ ಕೆಟ್ಟ ಬೆಳಕಿನ ಕಾರಣಕ್ಕೆ 35 ಓವರ್‌ಗಳು ಮಾತ್ರ ಸಾಧ್ಯವಾಗಿದೆ. ಪ್ರವಾಸಿ ತಂಡ ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದಾರೆ. ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಬಾಂಗ್ಲಾದೇಶ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶದ್ಮನ್ ಇಸ್ಲಾಂ ಮತ್ತು ಝಾಕಿರ್ ಹಸನ್ ಅವರನ್ನು ಆಕಾಶ್ ದೀಪ್ ವಿಕೆಟ್ ಪಡೆದರೆ ನಜ್ಮುಲ್ ಹೊಸೈನ್ ಶಾಂಟೊ ಅವರನ್ನು ಆರ್ ಅಶ್ವಿನ್ ಔಟ್ ಮಾಡಿದರು.