Asianet Suvarna News Asianet Suvarna News

ಮೊದಲ ಬಾರಿಗೆ ಕಿವೀಸ್‌ ವಿರುದ್ಧ ಟಿ20 ಸರಣಿ ಗೆದ್ದ ಬಾಂಗ್ಲಾದೇಶ

* ಟಿ20 ಸರಣಿಯಲ್ಲಿ ಮತ್ತೊಂದು ಭರ್ಜರಿ ಯಶಸ್ಸು ಗಳಿಸಿದ ಬಾಂಗ್ಲಾದೇಶ

* ನ್ಯೂಜಿಲೆಂಡ್ ಎದುರು ಟಿ20 ಸರಣಿ ಕೈವಶ ಮಾಡಿಕೊಂಡ ಬಾಂಗ್ಲಾ

* ಆಸ್ಟ್ರೇಲಿಯಾ ಹಾಗೂ ಕಿವೀಸ್‌ ಮಣಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ

Bangladesh Cricket Team Clinch First T20 Series Win Over New Zealand kvn
Author
Dhaka, First Published Sep 9, 2021, 12:14 PM IST

ಢಾಕಾ(ಸೆ.09): ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿಸುತ್ತಿರುವ ಮೊಹಮ್ಮದುಲ್ಲಾ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ತವರಿನಲ್ಲಿ ಮತ್ತೊಂದು ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಕೆಲದಿನಗಳ ಹಿಂದಷ್ಟೇ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು ಟಿ20 ಸರಣಿ ಗೆದ್ದಿದ್ದ ಬಾಂಗ್ಲಾದೇಶ, ಇದೀಗ ಕಿವೀಸ್‌ ಕಿವಿ ಹಿಂಡುವಲ್ಲಿ ಯಶಸ್ವಿಯಾಗಿದೆ. 

ನ್ಯೂಜಿಲೆಂಡ್‌ ವಿರುದ್ಧ 4ನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ ಗೆಲುವು ಸಾಧಿಸಿದ ಬಾಂಗ್ಲಾದೇಶ 5 ಪಂದ್ಯಗಳ ಸರಣಿಯಲ್ಲಿ 3-1ರ ಮುನ್ನಡೆ ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು. ಕಿವೀಸ್‌ ವಿರುದ್ಧ ಬಾಂಗ್ಲಾಗಿದು ಮೊದಲ ಟಿ20 ಸರಣಿ ಜಯವಾಗಿದೆ.

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್ ತಂಡವು ಮುಷ್ತಾಫಿಜುರ್ ರೆಹಮಾನ್ ಹಾಗೂ ನಸುಮ್ ಮೊಹಮ್ಮದ್ ಮಾರಕ ದಾಳಿಗೆ ತತ್ತರಿಸಿ 19.3 ಓವರಲ್ಲಿ ಕೇವಲ 93 ರನ್‌ಗೆ ಆಲೌಟ್‌ ಆಯಿತು. ನಸುಮ್ ಅಹಮ್ಮದ್ 4 ಓವರ್‌ ಬೌಲಿಂಗ್‌ ಮಾಡಿ 2 ಮೇಡನ್ ಸಹಿತ ಕೇವಲ 10 ರನ್‌ ನೀಡಿ 4 ವಿಕೆಟ್ ಕಬಳಿಸಿದರೆ, ಎಡಗೈ ವೇಗಿ ಮುಷ್ತಾಫಿಜುರ್ 12 ರನ್‌ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಕಿವೀಸ್‌ ತಂಡವನ್ನು ನೂರು ರನ್‌ಗಳೊಳಗಾಗಿ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. 

ಇಂಗ್ಲೆಂಡ್ ತವರಿನ ಸರಣಿ ವೇಳಾಪಟ್ಟಿ: ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

ಇನ್ನು ಸಾದಾರಣ ಗುರಿ ಬೆನ್ನತ್ತಿದ ಬಾಂಗ್ಲಾ 19.1 ಓವರಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಮೊಹಮ್ಮದುಲ್ಲಾ ಅಜೇಯ 43 ರನ್‌ ಬಾರಿಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದುರು

ದ.ಆಫ್ರಿಕಾ ವಿರುದ್ಧ ಲಂಕಾಕ್ಕೆ ಏಕದಿನ ಸರಣಿ ಗೆಲುವು

ಕೊಲಂಬೊ: ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 78 ರನ್‌ಗಳ ಗೆಲುವು ಸಾಧಿಸಿದ ಶ್ರೀಲಂಕಾ 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಲಂಕಾ 50 ಓವರಲ್ಲಿ 9 ವಿಕೆಟ್‌ಗೆ 203 ರನ್‌ ಗಳಿಸಿತು. ದಕ್ಷಿಣ ಆಫ್ರಿಕಾ 30 ಓವರಲ್ಲಿ 125 ರನ್‌ಗೆ ಆಲೌಟ್‌ ಆಯಿತು.

Follow Us:
Download App:
  • android
  • ios