Asianet Suvarna News Asianet Suvarna News

ಇಂಗ್ಲೆಂಡ್ ತವರಿನ ಸರಣಿ ವೇಳಾಪಟ್ಟಿ: ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

* 2022ರಲ್ಲಿ ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

* ಇಂಗ್ಲೆಂಡ್ ಎದುರು 6 ಪಂದ್ಯಗಳ ಸೀಮಿತ ಓವರ್‌ಗಳ ಸರಣಿ ಆಡಲಿರುವ ಭಾರತ

* ಸದ್ಯ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿಯನ್ನಾಡುತ್ತಿರುವ ಭಾರತ

England Cricket announces home summer fixtures for 2022 Team India will Play 6 Limited Over Games kvn
Author
London, First Published Sep 9, 2021, 11:41 AM IST

ಲಂಡನ್(ಸೆ.09)‌: ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು 2022ರಲ್ಲಿ ತವರಿನಲ್ಲಾಡುವ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಂತೆ ಇಂಗ್ಲೆಂಡ್ ವಿರುದ್ದ ಸದ್ಯ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಂದಿನ ವರ್ಷ ಜುಲೈನಲ್ಲಿ 6 ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಲಿದೆ. 

ಭಾರತ ಕ್ರಿಕೆಟ್‌ ತಂಡ 2022ರ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿದೆ. ಬುಧವಾರ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) 2022ರ ತವರಿನ ವೇಳಾಪಟ್ಟಿಯನ್ನು ಪ್ರಕಟಗೊಳಿಸಿತು. 

ಸದ್ಯದ ವೇಳಾಪಟ್ಟಿ ಪ್ರಕಾರ ಜುಲೈ 1ರಿಂದ ಟಿ20 ಸರಣಿ ನಡೆಯಲಿದ್ದು, ಮ್ಯಾಂಚೆಸ್ಟರ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಜುಲೈ3ಕ್ಕೆ ನಾಟಿಂಗ್‌ಹ್ಯಾಮ್‌ನಲ್ಲಿ 2ನೇ ಟಿ20, ಜುಲೈ 6ಕ್ಕೆ ಸೌಥಾಂಪ್ಟನ್‌ನಲ್ಲಿ 3ನೇ ಟಿ20 ನಡೆಯಲಿದೆ. ಇನ್ನು ಜುಲೈ 9ಕ್ಕೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಜುಲೈ 12ಕ್ಕೆ ಲಂಡನ್‌ನ ದಿ ಓವಲ್‌ನಲ್ಲಿ 2ನೇ, ಜುಲೈ 14ಕ್ಕೆ ಲಏಕದಿನ ಸರಣಿ ಆರಂಭಗೊಳ್ಳಲಿದೆ. ಜುಲೈ 14ರಂದು ಲಂಡನ್‌ನ ಲಾರ್ಡ್ಸ್‌ನಲ್ಲಿ 3ನೇ ಏಕದಿನ ಪಂದ್ಯ ನಡೆಯಲಿದೆ.

ಪೀಪಿ ಟ್ರೋಲ್‌: ಕೊಹ್ಲಿ ಪರ ಬ್ಯಾಟ್‌ ಬೀಸಿದ ಇಂಗ್ಲೆಂಡ್ ಮಾಜಿ ನಾಯಕ ವಾನ್‌..!

2022ರ ಆರಂಭದಲ್ಲಿ ಜೋ ರೂಟ್‌ ಪಡೆಯು ಜೂನ್‌ 02ರಿಂದ ಜೂನ್ 27ರ ವರೆಗೆ ನ್ಯೂಜಿಲೆಂಡ್ ಎದುರು ತವರಿನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದಾದ ಬಳಿಕ ಭಾರತ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ. ಬಳಿಕ ದಕ್ಷಿಣ ಆಫ್ರಿಕಾ ವಿರುದ್ದ ತವರಿನಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯನ್ನು ಆಡಲಿದೆ. 

Follow Us:
Download App:
  • android
  • ios