ನವದೆಹಲಿ(ಅ.31): ಭಾರತ ವಿರುದ್ದದ ಟಿ20 ಸರಣಿಗಾಗಿ ಬಾಂಗ್ಲಾದೇಶ ತಂಡ ನವದೆಹಲಿಯಲ್ಲಿ ಬೀಡು ಬಿಟ್ಟಿದೆ. ನ.3 ರಂದು ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣ(ಫಿರೋಜ್ ಶಾ ಕೋಟ್ಲಾ)ದಲ್ಲಿ ನಡೆಯಲಿದೆ. ಆದರೆ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿದ್ದು, ಧೂಳು ಮಿಶ್ರಿತ ವಾತವಾರಣ ಹಲವರ ಉಸಿರಾಟದ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಧರಿಸಿ ಅಭ್ಯಾಸ ಆರಂಭಿಸಿದ್ದಾರೆ.

ಇದನ್ನೂ ಓದಿ: ನವ​ದೆ​ಹ​ಲಿಗೆ ಬಂದಿ​ಳಿದ ಬಾಂಗ್ಲಾಕ್ರಿಕೆಟ್‌ ತಂಡಕ್ಕೆ ಧೂಳಿನ ಸ್ವಾಗತ!

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಲಿಟ್ಟನ್ ದಾಸ್ ಅಭ್ಯಾಸ ಆರಂಭಿಸಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿ ಮೈದಾನದಲ್ಲಿ ಫೀಲ್ಡಿಂಗ್ ಪ್ರಾಕ್ಟೀಸ್ ಮಾಡಿದರು. ಕಳೆದ ವಾರದಿಂದಲೇ ದೆಹಲಿ ಧೂಳು ಮಿಶ್ರಿತ ವಾತಾವರಣದಿಂದ ತುಂಬಿ ಹೋಗಿದೆ. ಇದರ ಬೆನ್ನಲ್ಲೇ ದೀಪಾವಳಿಗೆ ಸಿಡಿಸಿದ ಪಟಾಕಿ ಹೊಗೆ ಕೂಡ ಸೇರಿಕೊಂಡಿದೆ. ಇದು ದೆಹಲಿ ವಾತಾವರಣವನ್ನು ಮತ್ತಷ್ಟು ಮಲಿನಗೊಳಿಸಿದೆ.

 

ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!

ಮೊದಲ ಟಿ20 ಪಂದ್ಯವನ್ನು ದೆಹಲಿಯಿಂದ ಸ್ಥಳಾಂತರಗೊಳಿಸಬೇಕು ಅನ್ನೋ ಒತ್ತಾಯಗಳು ಕೇಳಿಬರುತ್ತಿದೆ. ಈ ಹಿಂದೆ ಭಾರತ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟಿಗರು ಮಾಸ್ಕರ್ ಧರಿಸಿ ಆಡಿದ್ದರು. ಈ ಪಂದ್ಯದ ಮೂಲಕ ಭಾರತದ ಮಾಲಿನ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ 2ನೇ ಬಾರಿಗೆ ದೆಹಲಿ ಮಾಲಿನ್ಯ ಕ್ರಿಕೆಟ್ ಪಂದ್ಯಕ್ಕೆ ಮಾರಕವಾಗುವ ಲಕ್ಷಣಗಳು ಗೋಚರಿಸುತ್ತಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಕೂಡ ದೆಹಲಿಯಲ್ಲಿ ಬೀಡುಬಿಟ್ಟಿದೆ. ಆದರೆ ಮೈದಾನದಲ್ಲಿನ ಅಭ್ಯಾಸ ರದ್ದು ಮಾಡಿರುವ ಟೀಂ ಇಂಡಿಯಾ, ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾಕ್ಟೀಸ್ ನಡೆಸಿದೆ.