Asianet Suvarna News Asianet Suvarna News

Ashes Test: ಕೈಕೊಟ್ಟ ಲಿಫ್ಟ್‌, 55 ನಿಮಿಷ ಹೋಟೆಲ್‌ ಲಿಫ್ಟ್‌ನೊಳಗೆ ಸಿಲುಕಿದ್ದ ಸ್ಟೀವ್‌ ಸ್ಮಿತ್‌!

* ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ಗೆ ಕೈ ಕೊಟ್ಟ ಲಿಫ್ಟ್‌

* ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಆಸೀಸ್‌ ಮಾಜಿ ನಾಯಕ

* 55 ನಿಮಿಷಗಳ ಬಳಿಕ ಕೊನೆಗೂ ಲಿಫ್ಟ್‌ನಿಂದ ಹೊರಬಂದ ಸ್ಟೀವ್ ಸ್ಮಿತ್

Australian Cricketer Steve Smith gets stuck in hotel lift for an hour Video Goes Viral kvn
Author
Bengaluru, First Published Dec 31, 2021, 3:56 PM IST

ಮೆಲ್ಬರ್ನ್(ಡಿ.31)‌: ಆಸ್ಪ್ರೇಲಿಯಾದ ತಾರಾ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ (Steve Smith) ಗುರುವಾರ ಇಲ್ಲಿನ ಹೋಟೆಲ್‌ನ ಲಿಫ್ಟ್‌ನಲ್ಲಿ 55 ನಿಮಿಷಗಳ ಕಾಲ ಸಿಲುಕಿದ್ದ ಪ್ರಸಂಗ ನಡೆದಿದೆ. ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕರಾಗಿರುವ ಸ್ಟೀವ್ ಸ್ಮಿತ್, ಇಲ್ಲಿನ ಪಾರ್ಕ್‌ ಹ್ಯಾಟ್‌ ಎನ್ನುವ ಹೋಟೆಲ್‌ನ ಲಿಫ್ಟ್‌ನಲ್ಲಿ 55 ನಿಮಿಷ ಸಿಲುಕಿಕೊಂಡಿದ್ದರು. ಲಿಫ್ಟ್‌ನೊಳಗೆ ಏನೇನಾಗುತ್ತಿದೆ ಎನ್ನುವುದರ ಇಂಚಿಂಚು ಮಾಹಿತಿಯನ್ನು ಇನ್‌ಸ್ಟಾಗ್ರಾಂ ಲೈವ್ ಮೂಲಕ ಮಾಹಿತಿ ನೀಡಿದ್ದಾರ. 

ತಾವು ಲಿಫ್ಟ್‌ನೊಳಗೆ ಸಿಕ್ಕಿಹಾಕಿಕೊಂಡಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ ಸ್ಮಿತ್‌, ತಮ್ಮನ್ನು ಹೊರತರಲು ಅವರ ಸ್ನೇಹಿತ, ಸಹ ಆಟಗಾರ ಮಾರ್ನಸ್‌ ಲಬುಶೇನ್‌(Marnus Labuschagne) ಹೋಟೆಲ್‌ ಸಿಬ್ಬಂದಿ ಜೊತೆ ನಡೆಸುತ್ತಿದ್ದ ಪ್ರಯತ್ನಗಳ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನೂ ನೀಡುತ್ತಿದ್ದರು. ಸುಮಾರು ಒಂದು ಗಂಟೆ ಬಳಿಕ ಸ್ಮಿತ್‌ ಲಿಫ್ಟ್‌ನಿಂದ ಹೊರಬರುತ್ತಿದ್ದಂತೆ ಜೋರಾಗಿ ಚಪ್ಪಾಳೆ ತಟ್ಟುತ್ತಾ ಆಸ್ಪ್ರೇಲಿಯಾ ತಂಡದ ಆಟಗಾರರು ಅವರನ್ನು ಸ್ವಾಗತಿಸಿದರು. ‘ಇಂತಹ ಅನುಭವ ನನ್ನ ಜೀವನದಲ್ಲಿ ಮತ್ತೆ ಸಿಗುವುದಿಲ್ಲ ಎನಿಸುತ್ತದೆ’ ಎಂದು ಸ್ಮಿತ್‌ ಪ್ರತಿಕ್ರಿಯಿಸಿದ್ದಾರೆ.

ನಾನೀಗ ಪ್ಲೋರ್‌ನಲ್ಲಿದ್ದೇನೆ. ಲಿಫ್ಟ್‌ ಬಾಗಿಲು ತೆರೆಯಲು ನಾನು ಸಾಕಷ್ಟು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಲಿಲ್ಲ ಎಂದು ಸ್ಟೀವ್ ಸ್ಮಿತ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಮತ್ತೊಂದು ಕಡೆಯಿಂದ ಸಹ ಆಟಗಾರ ಮಾರ್ನಸ್‌ ಲಬುಶೇನ್ ಕೂಡಾ ಲಿಫ್ಟ್‌ ಬಾಗಿಲು ತೆರೆಯಲು ಸಾಕಷ್ಟು ಪ್ರಯತ್ನಿಸಿದರು. ಅವರಿಗೂ ಅದು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದಾಗಿ ಕೆಲ ಸಮಯಗಳ ಬಳಿಕ ಮಾರ್ನಸ್‌ ಲಬುಶೇನ್ ಹೋಟೆಲ್‌ ಸಿಬ್ಬಂದಿಗಳ ಸಹಾಯದಿಂದ ಲಿಫ್ಟ್‌ ಬಾಗಿಲು ತೆರೆಸುವಲ್ಲಿ ಯಶಸ್ವಿಯಾದರು. 

ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ನಾಯಕ ಪ್ಯಾಟ್‌ ಕಮಿನ್ಸ್‌ (Pat Cummins) ಕೋವಿಡ್ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಅಡಿಲೇಡ್ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದರು. ಆಗ ಸ್ಟೀವ್ ಸ್ಮಿತ್‌ ಪಿಂಕ್ ಬಾಲ್ ಟೆಸ್ಟ್‌ (Pink Ball Test) ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನತ್ತ ಕೊಂಡೊಯ್ಯದಿದ್ದರು. 2018ರ ಬಾಲ್‌ ಟ್ಯಾಂಪರಿಂಗ್ (Ball Tampering) ಪ್ರಕರಣದ ಬಳಿಕ ಸ್ಟೀವ್ ಸ್ಮಿತ್ ಮೊದಲ ಬಾರಿಗೆ ನಾಯಕರಾಗಿ ಆಸೀಸ್ ತಂಡವನ್ನು ಮುನ್ನಡೆಸಿದ್ದರು.

ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ಈಗಾಗಲೇ ಇಂಗ್ಲೆಂಡ್ ಎದುರು 3-0 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇದೀಗ ನಾಲ್ಕನೇ ಟೆಸ್ಟ್ ಪಂದ್ಯವು ಜನವರಿ 05ರಿಂದ ಆರಂಭವಾಗಲಿದ್ದು, ಸ್ಟೀವ್ ಸ್ಮಿತ್ ಸರಣಿಯಲ್ಲಿ ಚೊಚ್ಚಲ ಶತಕ ಬಾರಿಸಲು ಎದುರು ನೋಡುತ್ತಿದ್ದಾರೆ.

ವರ್ಷದ ಮಹಿಳಾ ಟಿ20 ಕ್ರಿಕೆಟರ್‌ ರೇಸಲ್ಲಿ ಸ್ಮೃತಿ ಮಂಧನಾ

ದುಬೈ: ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಐಸಿಸಿ ವರ್ಷದ ಶ್ರೇಷ್ಠ ಮಹಿಳಾ ಟಿ20 ಆಟಗಾರ್ತಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಗುರುವಾರ ನಾಮನಿರ್ದೇಶನಗೊಂಡಿರುವ ಆಟಗಾರ್ತಿಯರ ಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಇಂಗ್ಲೆಂಡ್‌ನ ಟ್ಯಾಮಿ ಬ್ಯುಯೊಮೊಂಟ್‌, ನಥಾಲಿ ಶೀವರ್‌ ಹಾಗೂ ಐರ್ಲೆಂಡ್‌ನ ಗ್ಯಾಬಿ ಲೀವಿಸ್‌ ಇದ್ದಾರೆ.

Ashes 2021-22: ಟ್ರಾವಿಸ್ ಹೆಡ್‌ಗೆ ಕೋವಿಡ್ ಪಾಸಿಟಿವ್, ಆಸೀಸ್ ತಂಡದಲ್ಲಿ ಮಹತ್ವದ ಬದಲಾವಣೆ..!

ಇದೇ ವೇಳೆ ಪುರುಷರ ವಿಭಾಗದಲ್ಲಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಆಟಗಾರರ ಪಟ್ಟಿಯನ್ನೂ ಐಸಿಸಿ ಪ್ರಕಟ ಮಾಡಿದ್ದು, ಪಾಕಿಸ್ತಾನದ ಬಾಬರ್‌ ಆಜಂ, ಐರ್ಲೆಂಡ್‌ನ ಪಾಲ್‌ ಸ್ಟರ್ಲಿಂಗ್‌, ದಕ್ಷಿಣ ಆಫ್ರಿಕಾದ ಯಾನೆಮಾನ್‌ ಮಲಾನ್‌ ಹಾಗೂ ಬಾಂಗ್ಲಾದ ಶಕೀಬ್‌ ಅಲ್‌ ಹಸನ್‌ ಸ್ಥಾನ ಪಡೆದಿದ್ದಾರೆ.

Follow Us:
Download App:
  • android
  • ios