* ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗನಿಗೆ ಕೊರೋನಾ ಪಾಸಿಟಿವ್* ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ ಪೀಟರ್‌ ಹ್ಯಾಂಡ್ಸ್‌ಕಂಬ್‌ಗೆ ಕೋವಿಡ್ 19 ದೃಢ* ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಮಿಡಲ್‌ಸೆಕ್ಸ್‌ ತಂಡದ ನಾಯಕ ಹ್ಯಾಂಡ್ಸ್‌ಕಂಬ್

ಲಂಡನ್‌(ಜು.12): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ಪೀಟರ್ ಹ್ಯಾಂಡ್ಸ್‌ಕಂಬ್ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಕೌಂಟಿ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಲಿಸೆಸ್ಟರ್‌ಶೈರ್ ವಿರುದ್ದದ ಪಂದ್ಯದಿಂದ ಅನಿವಾರ್ಯವಾಗಿ ಹೊರಬಿದ್ದಿದ್ದಾರೆ.

30 ವರ್ಷದ ಹ್ಯಾಂಡ್ಸ್‌ಕಂಬ್ ಈ ಆವೃತ್ತಿಯ ಕೌಂಟಿ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಮಿಡಲ್‌ಸೆಕ್ಸ್‌ ತಂಡದ ನಾಯಕರಾಗಿದ್ದಾರೆ. ಪೀಟರ್‌ ಹ್ಯಾಂಡ್ಸ್‌ಕಂಬ್ ಅವರಿಗೆ ಕೋವಿಡ್ 19 ಸೋಂಕು ದೃಢಪಡುತ್ತಿದ್ದಂತೆಯೇ ಆಸ್ಟ್ರೇಲಿಯಾ ಕ್ರಿಕೆಟಿಗ ಐಸೋಲೇಷನ್‌ಗೆ ಒಳಗಾಗಿದ್ದಾರೆ. 

Scroll to load tweet…

ಐರ್ಲೆಂಡ್ ಕ್ರಿಕೆಟಿಗ ಟಿಮ್‌ ಮೊರ್ತಾಗ್‌ ಮಿಡಲ್‌ಸೆಕ್ಸ್‌ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೊದಲ ದಿನದಾಟ ಮುಕ್ತಾಯದ ವೇಳೆಗೆ ಲಿಸೆಸ್ಟರ್‌ಶೈರ್ ಕ್ರಿಕೆಟ್ ತಂಡವು 3 ವಿಕೆಟ್ ಕಳೆದುಕೊಂಡು 280 ರನ್‌ ಬಾರಿಸಿದೆ ಎಂದು ದ ವೆಸ್ಟ್‌ ಆಸ್ಟ್ರೇಲಿಯಾ ಮಾಧ್ಯಮ ವರದಿ ಮಾಡಿದೆ.

ಇಂಗ್ಲೆಂಡ್‌ ಕೌಂಟಿ: ಸರ್ರೆ ಪರ ಕಣಕ್ಕಿಳಿದು ದಾಖಲೆ ಬರೆದ ರವಿಚಂದ್ರನ್ ಅಶ್ವಿನ್‌

ಪೀಟರ್‌ ಹ್ಯಾಂಡ್ಸ್‌ಕಂಬ್‌ ಸದ್ಯ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದು, ಮಿಡಲ್‌ಸೆಕ್ಸ್‌ ಪರ ಕಳೆದ 13 ಪಂದ್ಯಗಳಲ್ಲಿ ಒಮ್ಮೆಯೂ 50+ ರನ್‌ ದಾಖಲಿಸಲು ಸಾಧ್ಯವಾಗಿಲ್ಲ. ಇನ್ನು 2019ರ ಜನವರಿಯಲ್ಲಿ ಭಾರತ ವಿರುದ್ದ ಪೀಟರ್‌ ಹ್ಯಾಂಡ್ಸ್‌ಕಂಬ್‌ ಕಡೆಯ ಬಾರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಕಣಕ್ಕಿಳಿದಿದ್ದರು. ಇದಾದ ಬಳಿಕ ಫಾರ್ಮ್‌ ಸಮಸ್ಯೆಯಿಂದಾಗಿ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದಾರೆ.