Asianet Suvarna News Asianet Suvarna News

Women's Crcket ಭಾರತದೆದುರು ರೋಚಕವಾಗಿ ಸರಣಿ ಗೆಲುವು ಸಾಧಿಸಿದ ಆಸೀಸ್‌..!

* ಭಾರತ ಎದುರು ಏಕದಿನ ಸರಣಿ ಜಯಿಸಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ

* ಏಕದಿನ ಕ್ರಿಕೆಟ್‌ನಲ್ಲಿ ಸತತ 26ನೇ ಗೆಲುವು ದಾಖಲಿಸಿದ ಆಸೀಸ್‌ ವನಿತೆಯರು

* ಕಳಫೆ ಪ್ರದರ್ಶನಕ್ಕೆ ಬೆಲೆತೆತ್ತ ಮಿಥಾಲಿ ರಾಜ್(Mithali Raj) ಪಡೆ

Australia womens team beats India in thrilling second ODI and Clinch  Series kvn
Author
Mackay QLD, First Published Sep 25, 2021, 9:56 AM IST

ಮೆಕೇ(ಸೆ.25): ಭಾರತದ ಕಳಪೆ ಬೌಲಿಂಗ್‌ ಹಾಗೂ ಕ್ಷೇತ್ರರಕ್ಷಣೆಯ ಲಾಭವೆತ್ತಿದ ಆಸ್ಪ್ರೇಲಿಯಾ ಮಹಿಳಾ ತಂಡ(Australia Women's Cricket), 2ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಂಡಿದೆ. ಅಂದಹಾಗೆ ಇದು ಏಕದಿನ ಮಾದರಿಯಲ್ಲಿ ಇದು ಆಸ್ಪ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಸತತ 26ನೇ ಗೆಲುವು. 

ಸ್ಮೃತಿ ಮಂಧನಾ(Smriti Mandhana) ಅವರ ಆಕರ್ಷಕ ಆಟ(86)ದ ನೆರವಿನಿಂದ 50 ಓವರಲ್ಲಿ 7 ವಿಕೆಟ್‌ಗೆ 274 ರನ್‌ ಗಳಿಸಿದ್ದ ಭಾರತ, ಆಸ್ಪ್ರೇಲಿಯಾ ಮೇಲೆ ಆರಂಭಿಕ ಮುನ್ನಡೆ ಸಾಧಿಸಿತು. ಒಂದು ಹಂತದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು 52 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಬೆಥ್‌ ಮೂನಿ(ಅಜೇಯ 125), ತಹಿಲಾ ಮೆಗ್ರಾಥ್‌(74) 5ನೇ ವಿಕೆಟ್‌ಗೆ 126 ರನ್‌ ಸೇರಿಸಿದರು. 6ನೇ ವಿಕೆಟ್‌ಗೆ ಮೂನಿ ಹಾಗೂ ನಿಕೋಲಾ ಕೇರಿ (ಅಜೇಯ 39) 97 ರನ್‌ ಸೇರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

IPL 2021: ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ಪರ ಕಣಕ್ಕಿಳಿಯೋದು ಯಾವಾಗ?

ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಕೊನೆಯ ಓವರ್‌:

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಎರಡನೇ ಏಕದಿನ ಪಂದ್ಯವು ಕೊನೆಯ ಓವರ್‌ವರೆಗೂ ಸಾಗಿತು. ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ 13 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ ಬೌಲಿಂಗ್‌ ಮಾಡುವ ಜವಾಬ್ದಾರಿ ಪಡೆದ ಅನುಭವಿ ವೇಗಿ ಜೂಲನ್ ಗೋಸ್ವಾಮಿ(Jhulan Goswami) ಮೊದಲ ಎಸೆತದಲ್ಲೇ ಮೂರು ರನ್‌ ನೀಡಿದರು. ಎರಡನೇ ಎಸೆತದಲ್ಲೇ ಕ್ಯಾರಿ 2 ರನ್‌ ಗಳಿಸಿದರು. ಹೀಗಾಗಿ ಕೊನೆಯ 4 ಎಸೆತಗಳಲ್ಲಿ 8 ರನ್‌ಗಳ ಅಗತ್ಯವಿತ್ತು. ಇನ್ನು ಮೂರನೇ ಎಸೆತ ಬೀಮರ್ ರೂಪದಲ್ಲಿ ಕ್ಯಾರಿ ಹೆಲ್ಮೆಟ್‌ಗೆ ಅಪ್ಪಳಿಸಿದ್ದರಿಂದ ಅಂಪೈರ್ ನೋಬಾಲ್ ತೀರ್ಪು ನೀಡಿದರು. ಇನ್ನು ಪ್ರೀ ಹಿಟ್‌ ಎಸೆತದಲ್ಲಿ ಬೈ ರೂಪದಲ್ಲಿ ಅಸ್ಟ್ರೇಲಿಯಾ ಒಂದು ರನ್‌ ಗಳಿಸಿತು. ಇನ್ನು ನಾಲ್ಕನೇ ಎಸೆತದಲ್ಲೂ ಬೈ ರೂಪದಲ್ಲಿ ಮೂನಿ ತಂಡಕ್ಕೆ ಒಂದು ರನ್ ಸೇರಿಸಿದರು. 5ನೇ ಎಸೆತದಲ್ಲಿ ಕ್ಯಾರಿ 2 ರನ್‌ ಗಳಿಸಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲ್ಲಲು ಆಸೀಸ್‌ಗೆ 3 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಜೂಲನ್ ಫುಲ್‌ಟಾಸ್‌ ಚೆಂಡು ಕ್ಯಾಚ್ ಹಿಡಿಯಲಾಯಿತಾದರೂ ಅಂಪೈರ್ ನೋಬಾಲ್ ತೀರ್ಪಿತ್ತರು. ಇನ್ನು ಕೊನೆಯ ಎಸೆತದಲ್ಲಿ 2 ರನ್‌ ಗಳಿಸಿದ ಕ್ಯಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

Follow Us:
Download App:
  • android
  • ios