ಸಿಡ್ನಿ(ಸೆ.08): ಟೀಂ ಇಂಡಿಯಾಗೆ ಸೇರಿದಂತೆ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಯುವರಾಜ್ ಸಿಂಗ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಐಪಿಎಲ್ ಟೂರ್ನಿಯಿಂದಲೂ ಯುವರಾಜ್ ಸಿಂಗ್ ದೂರ ಉಳಿದಿದ್ದಾರೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಯುವರಾಜ್ ಸಿಂಗ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಮುಂಬರುವ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಆಡಲು ಯುವಿಗೆ ಆಹ್ವಾನ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ತಯಾರಿ ನಡೆಸಿದೆ.

ದೀಪಿಕಾ ಯುವರಾಜ್ ಸಿಂಗ್ ರಿಲೆಷನ್‌ಶಿಪ್‌ - ಬ್ರೇಕಪ್‌ ಬಗ್ಗೆ ಕ್ರಿಕೆಟಿಗ ಹೇಳಿದ್ದಿಷ್ಟು...

ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಯುವರಾಜ್ ಸಿಂಗ್ ಬಿಗ್ ಬ್ಯಾಶ್ ಲೀಗ್ ಟೂರ್ನಿ ಆಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಹೇಳಿದೆ. ಯುವರಾಜ್ ಸಿಂಗ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಕಾರಣ ಬಿಸಿಸಿಐ ವಿದೇಶಿ ಲೀಗ್ ಟೂರ್ನಿಯಲ್ಲಿ ಆಡುವ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.

ಕ್ರಿಕೆಟಿಗರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, BCCI ವಿರುದ್ಧ ಗರಂ ಆದ ಯುವರಾಜ್ ಸಿಂಗ್!

ಬಿಸಿಸಿಐ ನಿಯಮದ ಪ್ರಕಾರ ಟೀಂ ಇಂಡಿಯಾ ಹಾಗೂ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಸಕ್ರಿಯರಾಗಿರುವ ಕ್ರಿಕೆಟಿಗರಿಗೆ ವಿದೇಶಿ ಲೀಗ್ ಟೂರ್ನಿಯಲ್ಲಿ ಆಡಲು ಬಿಸಿಸಿಐ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುವುದಿಲ್ಲ. ಆದೆರೆ ಯುವಿ ವಿಶ್ರಾಂತಿ ಜೀವನದಲ್ಲಿರುವ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಈ ಪ್ಲಾನ್ ಮಾಡಿದೆ. ಇಷ್ಟೇ ಅಲ್ಲ ಕಳೆದ ವರ್ಷ ಯುವರಾಜ್ ಸಿಂಗ್ ಕೆನಡಾ ಟಿ20 ಲೀಗ್ ಟೂರ್ನಿ ಆಡಿದ್ದರು. ಇದಕ್ಕಾಗಿ ಬಿಸಿಸಿಐ ಅನುಮತಿ ನೀಡಿತ್ತು.