ಮುಂಬೈ(ಜು.27): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೊರತು ಪಡಿಸಿದರೆ ಬಹುತೇಕ ಎಲ್ಲಾ ಹಿರಿಯ ಕ್ರಿಕೆಟಿಗರು  ಒಂದಲ್ಲಾ ಒಂದು ಅಸಮಧಾನದಿಂದಲೇ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಪ್ರಮುಖವಾಗಿ ಹಿರಿಯ ಕ್ರಿಕೆಟಿಗರನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಇದರಿಂದ ಬೇಸರಗೊಂಡ ಕ್ರಿಕೆಟಿಗರು ದಿಢೀರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಅನ್ನೋ ಆರೋಪಗಳು ಇವೆ. ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಇದೀಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಯುವಿ ಪಾ ಎಂದು ಕರೆದಾಗಲೇ ನಿವೃತ್ತಿಗೆ ಯೋಚಿಸಿದ್ದೆ; ಯುವರಾಜ್ ವಿದಾಯದ ಸೀಕ್ರೆಟ್ ಬಹಿರಂಗ.

2019ರಲ್ಲಿ ಯುವರಾಜ್ ಸಿಂಗ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ವಿದಾಯದಲ್ಲೇ ಬಿಸಿಸಿಐ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಇದೀಗ ಯುವಿ ತಮ್ಮ 19 ವರ್ಷಗಳ ಕ್ರಿಕೆಟ್ ಕರಿಯರ್‌ನಲ್ಲಿ ಅಂತಿಮ ದಿನಗಳು ನಿಜಕ್ಕೂ ಬೇಸರ ತರಿಸಿತ್ತು ಎಂದಿದ್ದಾರೆ. ಬಿಸಿಸಿಐ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ. ದೇಶಕ್ಕಾಗಿ ಆಡಿದ ಕ್ರಿಕೆಟಿಗರನ್ನು ಬಿಸಿಸಿಐ ಈ ರೀತಿ ನಡೆಸಿಕೊಳ್ಳಬಾರದು ಎಂದಿದ್ದಾರೆ.

ಮೋದಿ ವಿರುದ್ಧ ಅಫ್ರಿದಿ ಹೇಳಿಕೆಗೆ ಯುವರಾಜ್ ಗರಂ; ಇನ್ನೆಂದು ಸಹಾಯ ಮಾಡುವುದಿಲ್ಲ!..

ತಮ್ಮ ಕರಿಯರ್‍‌ನ ಅಂತಿಮ ದಿನಗಳಲ್ಲಿ ಬಿಸಿಸಿಐ ನಡೆಯಿಂದಲೇ ಬೇಸರಗೊಂಡಿದ್ದೆ. ತವರಿನಲ್ಲಿ ಅರ್ಥಪೂರ್ಣ ವಿದಾಯವನ್ನು ನಿರೀಕ್ಷಿಸಿದ್ದೆ. ಆದರೆ ಯಾವುದಕ್ಕೂ ಬಿಸಿಸಿಐ ಅವಕಾಶ ನೀಡಲಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಕೇವಲ ನನಗೆ ಮಾತ್ರವಲ್ಲ, ಜಹೀರ್ ಖಾನ್, ವಿರೇಂದ್ರ ಸೆಹ್ವಾಗ್ ಕರಿಯರ್‌ನಲ್ಲೂ ಇದೇ ಆಗಿದೆ ಎಂದು ಯುವಿ ಹೇಳಿದ್ದಾರೆ.