ಮೆಲ್ಬರ್ನ್(ಜೂ.13)‌: ಈ ವರ್ಷ ಅಕ್ಟೋ​ಬರ್‌-ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಆಯೋ​ಜನೆ ಬಗ್ಗೆ ಕ್ರಿಕೆಟ್‌ ಆಸ್ಪ್ರೇ​ಲಿಯಾ, ಆಸ್ಪ್ರೇ​ಲಿಯಾ ಸರ್ಕಾರ ಇನ್ನೂ ವಿಶ್ವಾಸ ಕಳೆ​ದು​ಕೊಂಡಿಲ್ಲ. 

ಮುಂದಿನ ತಿಂಗ​ಳಿಂದ ಆಸ್ಪ್ರೇ​ಲಿ​ಯಾ​ದ್ಯಂತ ಕ್ರೀಡಾಂಗಣಗಳಿಗೆ ಪ್ರೇಕ್ಷ​ಕರ ಪ್ರವೇಶಕ್ಕೆ ಅವ​ಕಾಶ ನೀಡು​ವು​ದಾಗಿ ಶುಕ್ರ​ವಾರ ಆಸ್ಪ್ರೇ​ಲಿಯಾ ಪ್ರಧಾನಿ ಸ್ಕಾಟ್‌ ಮೋರಿ​ಸ್ಸನ್‌ ಘೋಷಿ​ಸಿದ್ದು, ವಿಶ್ವ​ಕಪ್‌ ಆಯೋ​ಜನೆ ಬಗ್ಗೆ ಸುಳಿವು ನೀಡಿ​ದ್ದಾರೆ. 

Breaking: ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೊರೋನಾ ಪಾಸಿಟಿವ್..!

ಕ್ರೀಡಾಂಗಣಕ್ಕೆ ಹಂತ ಹಂತವಾಗಿ ಪ್ರೇಕ್ಷ​ಕ​ರಿಗೆ ಪ್ರವೇಶ ನೀಡ​ಲಾ​ಗು​ತ್ತದೆ. ಮೊದಲ ಹಂತ​ದಲ್ಲಿ 45000 ಸಾವಿರ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ 10000 ಜನ ಸೇರಲು ಅವ​ಕಾಶ ಸಿಗ​ಲಿದೆ ಎಂದು ಮೋರಿ​ಸನ್‌ ಹೇಳಿ​ದ್ದಾರೆ. ಇದೇ ವೇಳೆ ವಿಶ್ವ​ಕಪ್‌ ನಡೆ​ಸಲು ಅಗತ್ಯ ಸಿದ್ಧತೆ ನಡೆ​ಸು​ತ್ತಿ​ರು​ವು​ದಾಗಿ ಕ್ರೀಡಾ ಸಚಿವ ರಾಬರ್ಟ್‌ ಕೋಲ್ಬೆಕ್‌ ತಿಳಿ​ಸಿ​ದ್ದಾರೆ.

ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್‌ಗೆ ವಿರೋಧ?

ನವದೆಹಲಿ: ಖಾಲಿ ಕ್ರೀಡಾಂಗಣಗಳಲ್ಲಾದರೂ ಸರಿ ಐಪಿಎಲ್ ನಡಿಸಿಯೇ ತೀರಬೇಕು ಎನ್ನುವ ಬಿಸಿಸಿಐ ಹಠಕ್ಕೆ ಐಪಿಎಲ್ ತಂಡಗಳ ಮಾಲೀಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾಧ್ಯಮವೊಂದರ ವರದಿ ಪ್ರಕಾರ, ಸೆಪ್ಟೆಂಬರ್ -ಅಕ್ಟೋಬರ್‌ನಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್‌ ನಡೆಸಲು ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಡರ್ಸ್ ತಂಡಗಳು ಸಮ್ಮತಿ ಸೂಚಿಸಿದ್ದರೆ, ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್‌ ತಂಡಗಳು ವಿರೋದಿಸುತ್ತಿವೆ ಎನ್ನಲಾಗಿದೆ.