Breaking: ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೊರೋನಾ ಪಾಸಿಟಿವ್..!
ಪಾಕಿಸ್ತಾನದ ಮಾಜಿ ನಾಯಕ ಶಾಹಿದಿ ಅಫ್ರಿದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅಫ್ರಿದಿಯೇ ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕರಾಚಿ(ಜೂ.13): ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮಗೆ ಕೊರೋನಾ ಸೋಂಕು ತಗುಲಿರುವುದಾಗಿ ಶನಿವಾರ(ಜೂ.13) ಖಚಿತ ಪಡಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ಈ ಮಾಹಿತಿಯನ್ನು ಅಫ್ರಿದಿ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಬೂಮ್ ಬೂಮ್ ಖ್ಯಾತಿಯ ಅಫ್ರಿದಿ ನಾನು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಎಂದು ಅಭಿಮಾನಿಗಳನ್ನು ಕೋರಿಕೊಂಡಿದ್ದಾರೆ.
ಗುರುವಾರದಿಂದಲೂ ನನ್ನ ಆರೋಗ್ಯ ಸರಿಯಿರಲಿಲ್ಲ. ನನ್ನ ದೇಹ ಕೆಟ್ಟದಾಗಿ ನೋವಿನಿಂದ ಬಾಧಿಸುತಿತ್ತು. ನಾನು ಪರೀಕ್ಷೆಗೊಳಪಟ್ಟಾಗ ನನಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿಮ್ಮೆಲ್ಲರ ಬೆಂಬಲ, ಪ್ರಾರ್ಥನೆ ಅಗತ್ಯವಿದ್ದು, ನಾನು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಎಂದು ಮಾಜಿ ಆಲ್ರೌಂಡರ್ ಟ್ವೀಟ್ ಮಾಡಿದ್ದಾರೆ.
ಮತ್ತೆ ಭಾರತೀಯರ ಕೆಣಕಿದ ಅಫ್ರಿದಿ; ಕಾಶ್ಮೀರ ತಂಡಕ್ಕಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಮನವಿ!
1998ರಿಂದ 2018ರವರೆಗೆ ಅಂದರೆ ಎರಡು ದಶಕಗಳ ಕಾಲ ಪಾಕಿಸ್ತಾನ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ 40 ವರ್ಷದ ಅಫ್ರಿದಿ, 27 ಟೆಸ್ಟ್, 398 ಏಕದಿನ ಹಾಗೂ 99 ಟಿ20 ಪಂದ್ಯಗಳನ್ನಾಡಿದ್ದಾರೆ. ಕೊರೋನಾ ವೈರಸ್ ಸಂಕಷ್ಟದ ಸಮಯದಲ್ಲಿ ಅಫ್ರಿದಿ ಕೆಲವೊಂದು ಸರ್ಕಾರೇತರ ಸಂಘಸಂಸ್ಥೆ ಮೂಲಕ ಬಡವರಿಗೆ ನೆರವಾಗುವಂತಹ ಕೆಲಸವನ್ನು ಮಾಡುತ್ತಿದ್ದರು.
ಅಫ್ರಿದಿಯ ಕೆಲಸಕ್ಕೆ ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಸಾಥ್ ನೀಡಿದ್ದರು. ಆದರೆ ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ಅಫ್ರಿದಿ ವಿರುದ್ಧ ಈ ಇಬ್ಬರು ಕ್ರಿಕೆಟಿಗರು ಕಿಡಿಕಾರಿದ್ದರು.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"