ಪರ್ತ್(ಡಿ.12): ನ್ಯೂಜಿಲೆಂಡ್‌ ತಂಡದ ಆಸ್ಪ್ರೇಲಿಯಾ ಪ್ರವಾಸ ಆರಂಭಗೊಂಡಿದೆ, 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 

ಇದನ್ನೂ ಓದಿ: ಪಿಂಕ್ ಟೆಸ್ಟ್‌ನಲ್ಲೂ ಮುಗ್ಗರಿಸಿದ ಪಾಕ್; ಆಸೀಸ್‌ 2-0 ಕ್ಲೀನ್‌ ಸ್ವೀಪ್‌ ಗೆಲುವು!

ನ್ಯೂಜಿಲೆಂಡ್ ತಂಡ:
ಜೀತ್ ರಾವಲ್, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಸರ್, ಹೆನ್ರಿ ನಿಕೋಲಸ್, ಬಿಜೆ ವಾಲ್ಟಿಂಗ್, ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ನೈಲ್ ವ್ಯಾಗ್ನರ್, ಲ್ಯೂಕಿ ಫರ್ಗ್ಯೂಸನ್

ಆಸ್ಟ್ರೇಲಿಯಾ ತಂಡ:
ಡೇವಿಡ್ ವಾರ್ನರ್, ಜೋ ಬರ್ನ್ಸ್, ಮಾರ್ನಸ್ ಲ್ಯಾಬ್ಸ್‌ಚಾಗ್ನೆ, ಸ್ಟೀವ್ ಸ್ಮಿತ್, ಮ್ಯಾಖ್ಯೂ ವೇಡ್, ಟ್ರಾವಿಸ್ ಹೆಡ್, ಟಿಮ್ ಪೈನೆ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಥನ್ ಲಿಯೊನ್, ಜೋಶ್ ಹೇಝಲ್‌ವುಡ್

ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ಸರಣಿಯಲ್ಲಿ ಜಯಿಸಿದ ಆಸ್ಪ್ರೇಲಿಯಾ ಮತ್ತೊಂದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ಇತ್ತೀಚನ ಇಂಗ್ಲೆಂಡ್‌ ವಿರುದ್ಧದ ಸರಣಿ ಗೆಲುವನ್ನು ಸೇರಿ ಸತತ 7 ಸರಣಿಗಳನ್ನು ಗೆದ್ದಿರುವ ನ್ಯೂಜಿಲೆಂಡ್‌ ಜಯದ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. 

ಆದರೆ ಆಸ್ಪ್ರೇಲಿಯಾದಲ್ಲಿ ಸರಣಿ ಗೆಲ್ಲುವುದು ಅಷ್ಟುಸುಲಭದ ಕೆಲಸವನ್ನು ಎನ್ನುವುದು ಕಿವೀಸ್‌ಗೆ ತಿಳಿದಿದೆ. ಕಳೆದ 32 ವರ್ಷಗಳಲ್ಲಿ ಆಸ್ಪ್ರೇಲಿಯಾ ನೆಲದಲ್ಲಿ 22 ಟೆಸ್ಟ್‌ಗಳನ್ನು ಆಡಿರುವ ನ್ಯೂಜಿಲೆಂಡ್‌ ಕೇವಲ 1ರಲ್ಲಿ ಮಾತ್ರ ಜಯ ಸಾದಧಿಸಿದೆ.